Advertisement

ರೇಷ್ಮೆ, ಬಸವನ ಹುಳುಗಳಿಂದ ಅಡುಗೆ ಮಾಡಿ ತಿಂತಾರೆ : ಕಪ್ಪೆ ಕಾಲು ಅಂದ್ರೆ ಪಂಚಪ್ರಾಣ!

06:17 PM Jul 15, 2021 | Team Udayavani |
ಇದು ಬಾಯಿಯಲ್ಲಿ ಕರಗುವ ಭಕ್ಷ್ಯವಾಗಿದ್ದು, ನೋಡಲು ವಿಚಿತ್ರವಾಗಿದೆ ಮತ್ತು ವರ್ಣಮಯವಾಗಿರುತ್ತದೆ.
Now pay only for what you want!
This is Premium Content
Click to unlock
Pay with

ಭಾರತವು ಸಂಸ್ಕೃತಿ, ಸಂಪ್ರದಾಯ, ವಿಚಿತ್ರವಾದ ಬುಡಕಟ್ಟು ಜನರಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪಾಕಪದ್ಧತಿಗಳು ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಪುರಾತನ ಕಾಲದಿಂದಲೂ ನಮ್ಮ ಹೆಮ್ಮೆಯ ಭಾರತವು ಭಕ್ಷ್ಯ ಭೋಜನಗಳಿಗೆ ತುಂಬಾ ಫೇಮಸ್ ಆಗಿದೆ. ಇಷ್ಟೆ ಅಲ್ಲದೆ ಭಾರತದ ದೇಸಿ ಆಹಾರವು ತನ್ನದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದೆ.  ನಮ್ಮಲ್ಲಿ ಸಾಕಷ್ಟು ವಿಚಿತ್ರ ಆಹಾರಗಳಿವೆ. ಕೆಂಪು ಇರುವೆ ಚಟ್ನಿ ಮತ್ತು ಬೇಬಿ ಶಾರ್ಕ್ ಕರ್ರಿ ಸೇರಿದಂತೆ ಹಲವಾರು ವಿವಿಧ ಬಗೆಯ ಆಹಾರಗಳಿವೆ. ಅಂತಹ ಅಪರೂಪದ ಮತ್ತು ಕಂಡು ಕೇಳರಿಯದ ಆಹಾರ ಪದಾರ್ಥಗಳ ಮೆನು ಈ ಕೆಳಗಿನಂತಿದೆ.

Advertisement

 ರೇಷ್ಮೆ ಹುಳುಗಳ ಪೂಪಾ, ಅಸ್ಸಾಂ

ಇದು ರೇಷ್ಮೆ ಹುಳುಗಳ ಪ್ಯೂಪಾದಿಂದ ತಯಾರಿಸಿದ ವಿಚಿತ್ರವಾದ ತಿನಿಸು. ಅಸ್ಸಾಂ ಜನರು ಸವಿಯುವ ಪಾದಾರ್ಥ ಇದಾಗಿದೆ. ರೇಷ್ಮೆ ಹುಳುಗಳ ಕೋಕೂನ್‌ (ಗೂಡಿನಲ್ಲಿರುವ ಹುಳು) ನಿಂದ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ಇದಕ್ಕೆ ಸ್ಥಳೀಯ ಮಸಾಲೆಗಳನ್ನು ಬಳಸಿ ಭಕ್ಷವನ್ನು ತಯಾರಿಸಲಾಗುತ್ತದೆ. ಇದು ಬಾಯಿಯಲ್ಲಿ ಕರಗುವ ಭಕ್ಷ್ಯವಾಗಿದ್ದು, ನೋಡಲು ವಿಚಿತ್ರವಾಗಿದೆ ಮತ್ತು ವರ್ಣಮಯವಾಗಿರುತ್ತದೆ.

 ಚಪ್ರಾ ಅಥವಾ ಕೆಂಪು ಇರುವೆ ಚಟ್ನಿ, ಚತ್ತೀಸ್ ಗಡ

ಇದು ಚತ್ತೀಸ್ ಗಡದ ಬುಡಕಟ್ಟು ಜನಾಂಗದವರ ನೆಚ್ಚಿನ ಖಾದ್ಯ. ಚಪ್ರಾ ಅಥವಾ ಕೆಂಪು ಇರುವೆ ಚಟ್ನಿ ಆಹಾರಕ್ಕೆ ಪರಿಮಳವನ್ನು ನೀಡುತ್ತದೆ. ಈ ಇರುವೆಗಳಿ ಜೊತೆ ಸ್ಥಳೀಯ ಮಸಾಲೆಗಳನ್ನು ಬೆರೆಸಿ ಹದವಾಗಿ ಮಾಡಿದ ಈ ಆಹಾರ ಸವಿಯಲು ಸದ್ಭುತವಾಗಿರುತ್ತದೆ ಅಂತಾರೆ ಅಲ್ಲಿನ ಬುಡಕಟ್ಟು ವಾಸಿಗಳು.ಇಷ್ಟೆ ಅಲ್ಲದೆ ಇರುವೆಯ ಮೊಟ್ಟೆಗಳನ್ನು ಬಳಸಿ ಈ ಖಾದ್ಯವನ್ನು ತಯಾರಿಸಲಾಗುತ್ತದೆ.

Advertisement

 ಕಪ್ಪೆ ಕಾಲುಗಳಿಂದ ತಯಾರಿಸಿದ ಖಾದ್ಯ, ಸಿಕ್ಕಿಂ

ಸಿಕ್ಕಿಂನ ಜನರಿಗೆ ಕಪ್ಪೆ ಕಾಲುಗಳಿಂದ ತಯಾರಾದ ವಿಚಿತ್ರವಾದ ಖಾದ್ಯಕ್ಕಿಂತ ಇಷ್ಟವಾಗುವ ಬೇರೆ  ಆಹಾರ ಯಾವುದಿಲ್ಲ. ಸಿಕ್ಕಿಂನ ಲೆಪ್ಚಾ ಸಮುದಾಯವು ಈ ಖಾದ್ಯವನ್ನು ತಯಾರಿಸುತ್ತದೆ. ಕಪ್ಪೆ ಕಾಲುಗಳು ಔಷಧೀಯ ಗುಣಗಳನ್ನು ಹೊಂದಿದ್ದು, ಹೊಟ್ಟೆಗೆ ಸಂಬಂಧಿಸಿದ ವಿವಿಧ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಅಲ್ಲಿನ ಜನ ನಂಬಿದ್ದಾರೆ.

 ಹುರಿದ ಬಸವನ ಹುಳು(Fried snails), ಒಡಿಶಾ

ಹುರಿದ ಬಸವನ ಹುಳುವನ್ನು ಯಾರಾದರು ತಿನ್ನುವುದನ್ನು ನೀವು ಗಮನಿಸಿದ್ದೀರಾ?. ನೋವು ಈ ಬಗ್ಗೆ ಕೇಳದಿದ್ದರೆ ಇಲ್ಲಿದೆ ನೋಡಿ. ಹೌದು ಬಸವನ ಹುಳುವನ್ನು ಹುರಿದು ತಿನ್ನುವ ಪದ್ದತಿ ಒಡಿಶಾದಲ್ಲಿ ಇದೆ. ಒಡಿಶಾ ರಾಜ್ಯವು ಹೆಚ್ಚಿನ ಸಂಖ್ಯೆಯ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ನೈಸರ್ಗಿಕ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ. ಮತ್ತು ಹುರಿದ ಬಸವನ ಹುಳು ಕೂಡ ಇಲ್ಲಿನ ಜನರ ವಿಶೇಷ ಭಕ್ಷ್ಯಗಳಲ್ಲಿ ಒಂದಾಗಿದೆ.

 ನಾಯಿ ಮಾಂಸದ ಭಕ್ಷ್ಯ , ನಾಗಾಲ್ಯಾಂಡ್

ನಾಯಿ ಮಾಂಸವು ನಾಗಾ ಜನರ ನೆಚ್ಚಿನ ಆಹಾರ ಅಂದ್ರೆ ನೀವು ನಂಬುತ್ತೀರಾ. ಈ ಸುದ್ದಿಯನ್ನು ನೋಡಿದ ಮೇಲೆ ನಿಮಗೆ ಆಶ್ಚರ್ಯ ಆಗೋದ್ರಲ್ಲಿ ಸಂಶಯವಿಲ್ಲ. ನಾಯಿ ಮಾಂಸದಿಂದ ತಯಾರು ಮಾಡಿದ ಅಡುಗೆ ನಾಗಾಲ್ಯಾಂಡ್‌  ಬುಡಕಟ್ಟು ಸಮುದಾಯಗಳ ಜನರಿಗೆ ಜನಪ್ರಿಯ ಪಾಕಪದ್ಧತಿ.  ಅಲ್ಲಿ ನಾಯಿ ಮಾಂಸವನ್ನು ಬಳಸಿ ಹಲವಾರು ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.

 ಬೇಬಿ ಶಾರ್ಕ್ ಕರಿ, ಗೋವಾ

ಗೋವಾದಲ್ಲಿನ ಸಮುದ್ರಾಹಾರವು ಅತ್ಯುತ್ತಮವಾದುದು. ಗೋವಾಕ್ಕೆ ನೀವು ಪ್ರವಾಸ ಕೈಗೊಂಡರೆ ಅಲ್ಲಿ ಬೇಬಿ ಶಾರ್ಕ್ ಅನ್ನು ತಿನ್ನುವ ಮಂದಿ ನಿಮಗೆ ಸಿಗುತ್ತಾರೆ.  ಹೋಟೆಲ್ ನ ಮೆನುವಿನಲ್ಲಿ ಬೇಬಿ ಶಾರ್ಕ್ ಮೇಲೋಗರವನ್ನು ನೋಡಿದಾಗ ಆಘಾತಕ್ಕೊಳಗಾಗಬೇಡಿ. ಗೋವಾದ ಈ ಸ್ಟಾರ್ ಖಾದ್ಯವನ್ನು ವಿಭಿನ್ನ ಸಾಸ್‌ ಗಳನ್ನು ಬಳಸಿ ತಯಾರಿಸಲಾಗುತ್ತದೆ.

ಗಿರೀಶ್ ಗಂಗೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.