Advertisement

ಮತಾಂತರ ನಿಷೇಧ ಮಸೂದೆ ವಿರೋಧಿಸಿ ಪ್ರತಿಭಟನೆ

03:13 PM Nov 24, 2021 | Team Udayavani |

ದಾವಣಗೆರೆ: ರಾಜ್ಯ ಸರ್ಕಾರ ಮಂಡಿಸಲುಹೊರಟಿರುವ ಮತಾಂತರ ನಿಷೇಧಮಸೂದೆ ವಿರೋಧಿಸಿ ಮಂಗಳವಾರ ಜಿಲ್ಲಾಕ್ರಿಶ್ಚಿಯನ್‌ ವೆಲ್‌ಫೇರ್‌ ಅಸೋಸಿಯೇಷನ್‌ನೇತೃತ್ವದಲ್ಲಿ ಧಾರ್ಮಿಕ ಮುಖಂಡರು, ಕ್ರೈಸ್ತಸಮುದಾಯದವರು ನಗರದ ಜಿಲ್ಲಾಧಿಕಾರಿಕಚೇರಿ ಬಳಿ ಪ್ರತಿಭಟನೆ ನಡೆಸಿದರು.

Advertisement

ರಾಜ್ಯ ಸರ್ಕಾರ ಮತಾಂತರ ನಿಷೇಧಮಸೂದೆ ಮಂಡಿಸಿ ಕಾನೂನು ಜಾರಿಮಾಡಲು ಹೊರಟಿರುವುದು ಮುಂದಿನದಿನಗಳಲ್ಲಿ ಕ್ರೈಸ್ತ ಸಮುದಾಯದ ಮೇಲೆಪರಿಣಾಮ ಉಂಟು ಮಾಡಲಿದ್ದು,ಅನಾಹುತಕ್ಕೂ ಕಾರಣವಾಗಲಿದೆ. ಹಾಗಾಗಿರಾಜ್ಯ ಸರ್ಕಾರದ ಪ್ರಸ್ತಾಪಿತ ಮತಾಂತರನಿಷೇಧ ಕಾಯ್ದೆಗೆ ತೀವ್ರ ವಿರೋಧ ಇದೆ.

ಯಾವುದೇ ಕಾರಣಕ್ಕೂ ಮತಾಂತರ ನಿಷೇಧಮಸೂದೆಯನ್ನಾಗಲಿ, ಕಾಯ್ದೆಯನ್ನಾಗಿಜಾರಿಗೊಳಿಸಲೇಬಾರದು ಎಂದುಒತ್ತಾಯಿಸಿದರು.ವಿಧಾನಸಭೆ ಅಧಿವೇಶನದಲ್ಲಿಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌,ಕ್ರೈಸ್ತ ಮಿಷನರಿಗಳು ವ್ಯಾಪಕವಾಗಿ ಮತಾಂತರನಡೆಸುತ್ತಿರುವುದನ್ನು ತಡೆಯಲು ಹೋದವರವಿರುದ್ಧ ಜಾತಿ ನಿಂದನೆ, ಅತ್ಯಾಚಾರ ಪ್ರಕರಣದಾಖಲಿಸುತ್ತಿದ್ದಾರೆ ಎಂದು ಬೇಜವಾಬ್ದಾರಿಹೇಳಿಕೆ ನೀಡಿರುವುದು ಸಮುದಾಯದಬಾಂಧವರಿಗೆ ಅಘಾತ ಉಂಟು ಮಾಡಿದೆ.ಶಾಸಕರು ಈ ರೀತಿ ಹೇಳಿಕೆ ನೀಡಿ ರಾಜ್ಯದಲ್ಲಿಕೋಮುಗಲಭೆಗೆ ಪ್ರಚೋದನೆ ನೀಡಿ ಶಾಂತಿಕದಡಲು ಪ್ರಯತ್ನಿಸಿರುವುದು ಅತ್ಯಂತಖಂಡನೀಯ ಎಂದು ದೂರಿದರು.

ಶಾಂತಿಪ್ರಿಯರಾದ ಕ್ರೈಸ್ತರು ಯಾರನ್ನೂಬಲವಂತವಾಗಿ ಮತಾಂತರ ಮಾಡಿಲ್ಲ.ನೆಲದ ಕಾನೂನಿನಂತೆ ಬದುಕುತ್ತಿರುವಕ್ರೈಸ್ತರು ಯಾವುದೇ ಅನ್ಯ ಧರ್ಮಿಯರಮೇಲೆ ದಾಳಿ ನಡೆಸಿರುವ ಪುರಾವೆಗಳಿಲ್ಲ.ಆದರೂ ಕೆಲವರು ಅನಗತ್ಯವಾಗಿ ಸುಳ್ಳುಆಪಾದನೆ ಮಾಡುತ್ತಿರುವುದು ಸರಿಯಲ್ಲ.ರಾಜ್ಯ ಸರ್ಕಾರ ಅಧಿಕೃತ, ಅನಧಿಕೃತ ಚಚ್‌ìಗಳ ದಾಖಲೆಗಳನ್ನು ಸರ್ವೆà ಮಾಡಲುಸಮಿತಿ ರಚಿಸಿರುವುದು ಸರಿಯಾದಕ್ರಮ ಅಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಅವೈಜ್ಞಾನಿಕಅದೇಶವನ್ನು ನೆಪವಾಗಿಸಿಕೊಂಡು ಕೆಲಸಂಘಟನೆಗಳು ಉದ್ದೇಶಪೂರ್ವಕವಾಗಿಯೇಸಮುದಾಯದ ಪ್ರಾರ್ಥನಾ ಮಂದಿರಮತ್ತು ಪಾದ್ರಿಗಳ ಮೇಲೆ ಹಲ್ಲೆ ಮಾಡಿಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿವೆ.ರಾಜ್ಯ ಸರ್ಕಾರ ಸದನದಲ್ಲಿ ಮತಾಂತರನಿಷೇಧ ಮಸೂದೆ ಮಂಡಿಸಿ ಕಾನೂನುಜಾರಿಗೊಳಿಸಬಾರದು ಮತ್ತು ಚರ್ಚ್‌ಗಳಿಗೆಅಕ್ರಮವಾಗಿ ಪ್ರವೇಶ ಮಾಡಿ ಪುಂಡಾಟಿಕೆಮಾಡುವಂತಹ ಸಂಘಟನೆಗಳಿಗೆ ಕಡಿವಾಣಹಾಕಬೇಕು ಎಂದು ಒತ್ತಾಯಿಸಿದರು.ಫಾ| ಡಾ. ಅಂತೋಣಿ ಪೀಟರ್‌,ಫಾ| ಪ್ರೇಮ್‌ಕುಮಾರ್‌, ರಾಜಶೇಖರ್‌,ಇಮ್ಯಾನುವೆಲ್‌, ಕರುಣಾಕರನ್‌,ಜೈಕುಮಾರ್‌, ಚಂದ್ರು ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next