Advertisement

ಮದುವೆ ವಿಚಾರಕ್ಕಾಗಿ ಹಿಂದು ಯುವಕ, ಯುವತಿಯರು ಮತಾಂತರವಾಗುವುದು ತಪ್ಪು: ಭಾಗವತ್

10:30 AM Oct 11, 2021 | Team Udayavani |

ನವದೆಹಲಿ:ಮದುವೆಯ ನೆಪದಲ್ಲಿ ಯುವ ಹಿಂದೂ ಯುವಕ ಮತ್ತು ಯುವತಿಯರನ್ನು ಮತಾಂತರ ಮಾಡುವುದು ತಪ್ಪು ಎಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಯುವಕ, ಯುವತಿಯರಲ್ಲಿ ತಮ್ಮ ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ಹೆಮ್ಮೆ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ:ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ: ಆಳ್ವಾಸ್ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ

“ಮತಾಂತರ ಹೇಗೆ ನಡೆಯುತ್ತಿದೆ? ಹಿಂದು ಯುವಕ, ಯುವತಿಯರು ಇತರ ಧರ್ಮಗಳನ್ನು ಮದುವೆಯಂತಹ ಸಣ್ಣ ಸ್ವಾರ್ಥಕ್ಕಾಗಿ ಹೇಗೆ ಮತಾಂತರವಾಗುತ್ತಿದ್ದಾರೆ? ಯಾರು ಇದನ್ನು ಮಾಡುತ್ತಿದ್ದಾರೋ ಅದು ತಪ್ಪು. ಆದರೆ ಅದು ಬೇರೆ ವಿಷಯವಾಗಿದೆ” ಎಂದು ಭಾಗವತ್ ತಿಳಿಸಿರುವುದಾಗಿ ವರದಿ ಹೇಳಿದೆ.

ನಾವು ನಮ್ಮ ಮಕ್ಕಳನ್ನು ಪೋಷಿಸುವುದಿಲ್ಲವೇ? ನಾವು ಮನೆಯಲ್ಲೇ ಅವರಿಗೆ ನಮ್ಮ ಧರ್ಮದ ಬಗ್ಗೆ ತಿಳಿಸಿಕೊಡಬೇಕು. ನಾವು ನಮ್ಮ ಬಗ್ಗೆ, ನಮ್ಮ ಧರ್ಮದ ಬಗ್ಗೆ, ನಮ್ಮ ಸಂಪ್ರದಾಯ, ಪೂಜೆಗಳನ್ನು ಗೌರವಿಸುವುದನ್ನು ಕಲಿಸಿಕೊಡಬೇಕಾಗಿದೆ ಎಂದು ಮೋಹನ್ ಭಾಗವತ್ ಅವರು ಭಾನುವಾರ ಉತ್ತರಾಖಂಡ್ ನಲ್ಲಿ ನಡೆದ ಆರ್ ಎಸ್ ಎಸ್ ಕಾರ್ಯಕರ್ತರ ಮತ್ತು ಕುಟುಂಬ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.

ಈ ಪ್ರಶ್ನೆ ಬಗ್ಗೆ ಜನರು ಯಾವುದೇ ಗೊಂದಲಕ್ಕೀಡಾಗದೇ ಉತ್ತರಿಸಬೇಕಾಗಿದೆ. ಒಂದು ವೇಳೆ ಮತಾಂತರದ ಪ್ರಶ್ನೆ ಎದುರಾದರೆ ಅದಕ್ಕೆ ತಕ್ಕ ಉತ್ತರ ಕೊಡಬೇಕು. ಆ ಬಗ್ಗೆ ನಮ್ಮಲ್ಲಿ ಗೊಂದಲ ಇರಬಾರದು. ನಾವು ನಮ್ಮ ಮಕ್ಕಳನ್ನು ಆ ರೀತಿಯಲ್ಲಿ ಬೆಳೆಸಬೇಕಾಗಿದೆ ಎಂದು ಭಾಗವತ್ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next