Advertisement

live-in ಸಂಬಂಧಕ್ಕೂ ಮತಾಂತರ ಕಾಯ್ದೆ ಅನ್ವಯ: ಹೈಕೋರ್ಟ್‌

01:14 AM Mar 15, 2024 | Team Udayavani |

ಪ್ರಯಾಗ್‌ರಾಜ್‌: ಮದುವೆಗಷ್ಟೇ ಅಲ್ಲ, ಲಿವ್‌ ಇನ್‌ ರಿಲೇಶನ್‌ಶಿಪ್‌ಗ್ೂ ಮತಾಂತರ ಕಾಯ್ದೆ ಅನ್ವಯವಾಗುತ್ತದೆ ಎಂದು ಉತ್ತರ ಪ್ರದೇಶದ ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.

Advertisement

ಅಂತರ್‌ ಧರ್ಮೀಯ ಜೋಡಿಯೊಂದು ಪೊಲೀಸ್‌ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ ಅಲಹಾಬಾದ್‌ ಹೈಕೋರ್ಟ್‌ನ ನ್ಯಾ| ರೇಣು ಅಗರ್ವಾಲ್‌ ಅವರ ಪೀಠವು, “ಮದುವೆ ಸ್ವರೂಪದ ಯಾವುದೇ ಸಂಬಂಧಕ್ಕೂ ಉತ್ತರ ಪ್ರದೇಶದ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ’ ಎಂದು ಹೇಳಿದೆ. ಕಾಯ್ದೆಯ 8 ಮತ್ತು 9 ಸೆಕ್ಷನ್‌ ಅಡಿ ಅರ್ಜಿದಾರರು ಮತಾಂತರಕ್ಕೆ ಅರ್ಜಿ ಹಾಕಿಲ್ಲ. ಹಾಗಾಗಿ ಅವರ ಸಂಬಂಧವನ್ನು ಕಾಯ್ದೆಯಡಿ ರಕ್ಷ ಣೆ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next