Advertisement
1962ರಲ್ಲಿ ನಂಗಲಿಯಲ್ಲಿ ಖಾಸಗಿ ಆಡಳಿತ ಮಂಡಳಿ ಯೊಂದು ಶ್ರೀ ವರಸಿದ್ಧಿ ವಿನಾಯಕ ಪ್ರೌಢ ಶಾಲೆಯನ್ನು ಪ್ರಾರಂಭಿಸಿದ್ದು, ಶಾಲೆಯಲ್ಲಿ 8, 9 ಮತ್ತು 10ನೇ ತರಗತಿ 200ಕ್ಕೂ ಹೆಚ್ಚು ಮಂದಿ ಓದುತ್ತಿದ್ದಾರೆ. ಇದು ಸರ್ಕಾರಿ ಅನುದಾನಿತ ಶಾಲೆಯಾಗಿದ್ದು,ಇನ್ಫೋಸಿಸ್ ಪ್ರತಿಷ್ಠಾನ ಸುಮಾರು 2 ಕೋಟಿ ವೆಚ್ಚದಲ್ಲಿಗುಣಮಟ್ಟದ 10 ಶಾಲಾ ಕೊಠಡಿಗಳು,ಬಾಲಕರು-ಬಾಲಕಿಯರಿಗೆ ತಲಾ ಒಂದು ಪ್ರತ್ಯೇಕಶೌಚಾಲಯ, ಶಿಕ್ಷಕ ಶಿಕ್ಷಕಿಯರಿಗೆ ತಲಾ ಒಂದುಶೌಚಾಲಯ ಸೈಕಲ್ ನಿಲ್ದಾಣ, ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಿ ಸೌಕರ್ಯ ಕಲ್ಪಿಸಿದ್ದಾರೆ.
Related Articles
Advertisement
ಪ್ರೌಢ ಶಾಲೆಯ 5 ಕೊಠಡಿಗಳಲ್ಲಿ ಕಾನ್ವೆಂಟ್ ಶಾಲೆನಡೆಸುತ್ತಿರುವ ಕುರಿತು ಮುಖ್ಯ ಶಿಕ್ಷಕ ಶ್ರೀನಿವಾಸ್‌ಗೆ ದಾಖಲೆ ಕೇಳಿದಾಗ ಈ ಕುರಿತು ದಾಖಲೆಗಳು ಲಭ್ಯವಿಲ್ಲ ಎಂದು ತಿಳಿಸಿದ್ದು, ಕ್ಷೇತ್ರ ಸಮನ್ವಯಾಧಿಕಾರಿಗಳು, ಮುಖ್ಯ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕಾನ್ವೆಂಟ್ ಶಾಲೆಗೆಸರ್ಕಾರ ಅನುಮತಿ ನೀಡಿದೆಯೇ ? ಇನ್ಫೋಸಿಸ್‌ಅನುಮತಿ ನೀಡಿದೆಯೇ ? ಈ ಕುರಿತಾದ ಮಾಹಿ ತಿ ಯನ್ನು 7 ದಿನಗಳ ಒಳಗಾಗಿ ಬಿಇಒ ಕಚೇರಿಗೆಸಲ್ಲಿಸಲು ಸೂಚಿಸಿದ್ದರು, ಆದರೆ ಇದುವರೆಗೂ ಬಿಇಒ ಕಚೇರಿಗೆ ಮಾಹಿತಿ ನೀಡಿಲ್ಲ.
ನಂಗಲಿ ಶ್ರೀ ವರಸಿದ್ಧಿ ವಿನಾಯಕ ಅನುದಾನಿತ ಪ್ರೌಢಶಾಲೆಯಲ್ಲಿಕಾನ್ವೆಂಟ್ ಪ್ರಾರಂಭ ಕುರಿತಂತೆ 7 ದಿನಗಳಒಳಗಾಗಿ ಸಲ್ಲಿಸುವಂತೆ ಸೂಚಿಸಿದ್ದರೂಇದುವರೆಗೂ ಮಾಹಿತಿ ನೀಡದೇಇರುವುದರಿಂದ ಕ್ರಮವಹಿಸಲುಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. – ಪಿ.ಸೋಮೇಶ್, ಕ್ಷೇತ್ರ ಸಮನ್ವಯಾಧಿಕಾರಿ ಮುಳಬಾಗಿಲು
ಕ್ಷೇತ್ರ ಸಮನ್ವಯಾಧಿಕಾರಿಗಳು ನಮಗೆ ನೀಡಿರುವ ನೋಟಿಸ್‌ಗೆ ಮಾಹಿತಿ ಒದಗಿಸಲು ಅಗತ್ಯವುಳ್ಳ ದಾಖಲೆಗಳನ್ನು ನೀಡುವಂತೆ ನಮ್ಮ ಶಾಲೆಯ ಆಡಳಿತ ಮಂಡಳಿಗೆ ಕೇಳಿದ್ದೇನೆ.ಆದರೆ. ಅವರು ಇದುವರೆಗೂ ದಾಖಲೆಗಳನ್ನು ನೀಡಿಲ್ಲ -ಎನ್.ಎಲ್.ಶ್ರೀನಿವಾಸ್, ಮುಖ್ಯಶಿಕ್ಷಕ, ಶ್ರೀ ವರಸಿದ್ದಿ ವಿನಾಯಕ ಅನುದಾನಿತ ಪ್ರೌಢಶಾಲೆ
ಕಾನ್ವೆಂಟ್ ನಡೆಸುತ್ತಿರುವ ಕುರಿತು ನಮಗೆ ಮಾಹಿತಿ ಇಲ್ಲ. ಕ್ಷೇತ್ರ ಸಮನ್ವಯಾಧಿಕಾರಿ ಪಿ. ಸೋಮೇಶ್‌ರೊಂದಿಗೆ ಚರ್ಚಿಸಿ ಮತ್ತೂಮ್ಮೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. – ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ
– ಎಂ.ನಾಗರಾಜಯ್ಯ