Advertisement

ಖರ್ಗೆ ಅಧ್ಯಕ್ಷರಾದಲ್ಲಿ ಅನುಕೂಲ

03:14 AM Jul 05, 2019 | Team Udayavani |

ದಾವಣಗೆರೆ: ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೇಮಕವಾದಲ್ಲಿ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕಾಂಗ್ರೆಸ್‌ ಸತ್ಯಶೋಧನಾ ಸಮಿತಿ ಮನವಿ ಮಾಡಿದೆ.

Advertisement

ಲೋಕಸಭಾ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಗಾಂಧಿ ಕುಟುಂಬದವರೇ ಅಧ್ಯಕ್ಷರಾಗಿ ಇರಬೇಕೆಂಬುದು ಎಲ್ಲರ ಒತ್ತಾಸೆ ಆಗಿತ್ತು. ಎಲ್ಲಾ ಮುಖಂಡರು ಮನವೊಲಿಸಿದರೂ ಅವರು ತಮ್ಮ ನಿರ್ಧಾರ ಬದಲಿಸಲಿಲ್ಲ. ಹಾಗಾಗಿ ಈಗ ಆ ಸ್ಥಾನಕ್ಕೆ ಹಲವು ಮುಖಂಡರ ಹೆಸರು ಕೇಳಿಬರುತ್ತಿವೆ. ಅದರಲ್ಲಿ ಮುಖ್ಯವಾಗಿ ಖರ್ಗೆ, ಸುಶಿಲ್ಕುಮಾರ್‌ ಶಿಂಧೆ, ಸಚಿನ್‌ ಪೈಲಟ್ ಹಾಗೂ ಇತರ ಹೆಸರು ಪ್ರಸ್ತಾಪ ವಾಗಿವೆ. ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡಿ ದಲ್ಲಿ ಪಕ್ಷದ ಸಂಘಟನೆಗೆ ಸಹಕಾರಿಯಾಗಲಿದೆ ಎಂದು ಸತ್ಯಶೋಧನಾ ಸಮಿತಿಯ ಸಂಚಾಲಕ ಬಸವರಾಜ ರಾಯರಡ್ಡಿ, ಸದಸ್ಯರಾದ ವಿ.ಆರ್‌.ಸುದರ್ಶನ್‌, ಧ್ರುವ ನಾರಾಯಣ ಹಾಗೂ ವೀರಣ್ಣ ಮತ್ತಿಕಟ್ಟೆ ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ತಮ್ಮ ಆಶಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next