Advertisement
ಅದು ಪಂದ್ಯದ 16.4ನೇ ಓವರ್. ಆಗ ಆಫ್ರಿಕಾದ ಜೀವೇಶನ್ ಪಿಳ್ಳೆ„ 47 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಎಸೆತವೊಂದಕ್ಕೆಅವರು ಉತ್ತರಿಸಿದಾಗ ಅದು ಬ್ಯಾಟ್‌ನ ಒಳಭಾಗಕ್ಕೆ ಬಡಿದು ಸ್ವಲ್ಪ ಹೊರಕ್ಕೆ ಚಿಮ್ಮಿತು. ನಿಧಾನಕ್ಕೆ ವಿಕೆಟ್ ಗೆ ಬಡಿಯುವಂತೆ ಧಾವಿಸಿದರೂ ಚೆಂಡಿನ ಚಲನೆ ನಿಂತು ಹೋಗಿತ್ತು. ಆಗ ಕ್ರೀಸ್‌ನೊಳಕ್ಕೆ ಇದ್ದ ಜೀವೇಶನ್ ಚೆಂಡನ್ನು ತಮ್ಮ ಕೈನಿಂದ ವಿಂಡೀಸ್
ವಿಕೆಟ್ ಕೀಪರ್ ಎಮಾನ್ಯುಯೆಲ್ ಸ್ಟಿವರ್ಟ್‌ಗೆ ಎಸೆದರು. ನಿಯಮಗಳ ಪ್ರಕಾರ ಕ್ಷೇತ್ರರಕ್ಷಣೆಗೆ ಅಡ್ಡಿ ಮಾಡುವುದು ತಪ್ಪು, ಆಗ ಬ್ಯಾಟ್ಸ್‌ಮನ್‌ನನ್ನು ಔಟೆಂದು ಘೋಷಿಸಬಹುದು. ವಿಂಡೀಸ್‌ನ ನಾಯಕ ಸ್ಟಿವರ್ಟ್ ಮನವಿ ಮಾಡಿದಾಗ ಅದನ್ನು ಪುರಸ್ಕರಿಸಿದ ಅಂಪೈರ್ ಔಟೆಂದು ತೀರ್ಪಿತ್ತರು! ಇಲ್ಲಿ ನಿಜಕ್ಕೂ ಜೀವೇಶನ್ ಕ್ಷೇತ್ರರಕ್ಷಣೆಗೆ ಅಡ್ಡಿ ಪಡಿಸಿರಲಿಲ್ಲ. ಅವರು ಕೇವಲ ವಿಕೆಟ್ ಕೀಪರ್‌ಗೆ
ಸಹಾಯ ಮಾಡಿದ್ದರಷ್ಟೇ. ಈ ಹಂತದಲ್ಲಿ ಕ್ರೀಡಾಸ್ಫೂರ್ತಿಯನ್ನು ತೋರಿ ವಿಂಡೀಸಿಗರು ಜೀವೇಶನ್‌ರನ್ನು ವಾಪಸ್ ಕರೆಸಿಕೊಳ್ಳಬಹುದಿತ್ತು. ಆದರೆ ಅವರು ಅಂತಹ ಯತ್ನ ಮಾಡಲಿಲ್ಲ. ಇದು ಎಲ್ಲ ಕಡೆ ಟೀಕೆಗೆ ಕಾರಣವಾಗಿದೆ. ಪತ್ರಿಕಾಗೋಷ್ಠಿಯಲ್ಲಿ ತಮ್ಮ ತಪ್ಪನ್ನು ವಿಂಡೀಸ್ ನಾಯಕ ಒಪ್ಪಿಕೊಂಡಿದ್ದಾರೆ.