Advertisement

ವಿವಾದಕ್ಕೀಡಾದ ಸಿಎಂ ಖಟ್ಟರ್‌ ಹೇಳಿಕೆ

01:39 AM Aug 11, 2019 | Team Udayavani |

ಚಂಡೀಗಡ: ‘ಕಾಶ್ಮೀರವು ಈಗ ಮುಕ್ತವಾಗಿರುವುದರಿಂದ ಕೆಲವರು ಅಲ್ಲಿ ವಧುಗಳು ಸಿಗುತ್ತಾರೆಂದು ಹೇಳುತ್ತಿದ್ದಾರೆ. ಹಾಗಾಗಿ, ಹರ್ಯಾಣದ ಯುವಕರಿಗೆ (ಮದುವೆಗಾಗಿ) ಅಲ್ಲಿಂದ ಹೆಣ್ಣನ್ನು ತರಬಹುದು’ ಎಂದು ಹೇಳಿರುವ ಹರ್ಯಾಣ ಸಿಎಂ ಮನೋಹರ್‌ ಲಾಲ್ ಖಟ್ಟರ್‌ ವಿವಾದಕ್ಕೀಡಾಗಿದ್ದಾರೆ.

Advertisement

ಇದೊಂದು ತುಚ್ಛ ಹೇಳಿಕೆ ಎಂದು ಟೀಕಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಇಂಥ ದುರ್ಬಲ ಮನಸ್ಸಿನ, ಅಸುರಕ್ಷಿತ ವ್ಯಕ್ತಿಗೆ ಆರ್‌ಎಸ್‌ಎಸ್‌ ದಶಕಗಳ ಕಾಲದಿಂದ ತರಬೇತಿ ನೀಡಿದೆ ಎಂದಿದ್ದಾರೆ. ಇದಕ್ಕೆ ಟ್ವಿಟರ್‌ನಲ್ಲೇ ಜವಾಬು ನೀಡಿರುವ ಖಟ್ಟರ್‌, ‘ನನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪು ಅರ್ಥದಲ್ಲಿ ವರದಿ ಮಾಡಿವೆ. ರಾಹುಲ್ರವರೇ ನಿಮ್ಮಂಥವರು, ತಪ್ಪು ಸುದ್ದಿ ಓದಿ ತಪ್ಪಾಗಿ ಪ್ರತಿಕ್ರಿಯಿಸಬಾರದು’ ಎಂದಿದ್ದಾರೆ.

ಅತ್ತ, ಬಿಜೆಪಿ ಕೂಡ ಖಟ್ಟರ್‌ ಹೇಳಿಕೆ ಸಮರ್ಥಿಸಿದ್ದು, ಅವರು ‘ಬೇಟಿ ಬಚಾವೊ, ಬೇಟಿ ಪಢಾವೊ’ ಬಗ್ಗೆ ಹೇಳಲು ಹೋಗಿದ್ದರು ಎಂದಿದೆ. ಖಟ್ಟರ್‌ಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next