Advertisement

Fake currency case ತನಿಖೆ; ಆರ್ ಎಸ್ಎಸ್ ಉ*ಗ್ರ ಸಂಘಟನೆ ಎಂಬ ಪುಸ್ತಕ ಮದರಸಾದಲ್ಲಿ ಪತ್ತೆ

10:22 AM Sep 04, 2024 | PTI |

ಪ್ರಯಾಗರಾಜ್ (UP): ನಕಲಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಮದರಸಾವೊಂದರಲ್ಲಿ ಶೋಧದ ವೇಳೆ ಆರ್‌ಎಸ್‌ಎಸ್ ಅನ್ನು ಭಯೋತ್ಪಾದಕ ಸಂಘಟನೆಯೊಂದಿಗೆ ಹೋಲಿಸುವ ಪುಸ್ತಕವೊಂದನ್ನು ಮಂಗಳವಾರ(ಸೆ.3) ಪ್ರಯಾಗರಾಜ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ವಿದ್ಯಾರ್ಥಿಗಳಲ್ಲಿ “ಆರ್‌ಎಸ್‌ಎಸ್ ವಿರೋಧಿ ಭಾವನೆಗಳನ್ನು ಹುಟ್ಟುಹಾಕಲು” ಧರ್ಮಗುರು ಅದನ್ನು ಬಳಸುತ್ತಿದ್ದರು ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 28 ರಂದು ಅತರ್ಸುಯಿಯಾ ಪ್ರದೇಶದ ಜಾಮಿಯಾ ಹಬೀಬಿಯಾ ಮಸೀದಿ ಅಜಮ್ ಮದರಸಾದಲ್ಲಿ ನಡೆದ ದಾಳಿಯಲ್ಲಿ ನಕಲಿ ನೋಟುಗಳ ಜತೆಗೆ, ಪೊಲೀಸರು ಪುಸ್ತಕವನ್ನು ಪತ್ತೆ ಮಾಡಿದ್ದಾರೆ ಎಂದು ಪ್ರಯಾಗರಾಜ್ ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉರ್ದುವಿನಿಂದ ಹಿಂದಿಗೆ ಭಾಷಾಂತರಿಸಿದ್ದು, ಎಸ್‌.ಎಂ.ಮುಷರಫ್ ಬರೆದಿರುವ ಪುಸ್ತಕ “ಆರ್‌ಎಸ್‌ಎಸ್: ದೇಶದ ಅತಿ ದೊಡ್ಡ ಉಗ್ರ ಸಂಘಟನೆ ” ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಮದರಸಾದ ಧರ್ಮಗುರು ಮೊಹಮ್ಮದ್ ತಫ್ಸೀರುಲ್ ಆರಿಫೀನ್ ಪುಸ್ತಕವನ್ನು ಮಕ್ಕಳ ಮನಸ್ಸಿನಲ್ಲಿ ಆರ್‌ಎಸ್‌ಎಸ್ ವಿರೋಧಿ ಭಾವನೆಗಳನ್ನು ಬಿಟ್ಟಲು ಬಳಸುತ್ತಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳೀಯ ಗುಪ್ತಚರ ಘಟಕ (LIU) ಮತ್ತು ಭಯೋತ್ಪಾದನಾ ನಿಗ್ರಹ ದಳ (ATS) ತಂಡಗಳು ಮಂಗಳವಾರ ಮದ್ರಸಾ ಸಿಬಂದಿಗಳನ್ನು ವಿಚಾರಣೆ ನಡೆಸಿವೆ.

Advertisement

ಆಗಸ್ಟ್ 28 ರಂದು, ಪ್ರಯಾಗರಾಜ್ ಪೊಲೀಸರು ನಕಲಿ ಕರೆನ್ಸಿ ಗ್ಯಾಂಗ್ ಭೇದಿಸಿ ನಾಲ್ವರು ಶಂಕಿತರನ್ನು ಬಂಧಿಸಿ ಒಟ್ಟು 1,300 ನಕಲಿ 100 ರೂ. ನೋಟುಗಳು, 234 ಮುದ್ರಿತ ಪುಟಗಳು, ಒಂದು ಲ್ಯಾಪ್ಟಾಪ್, ಒಂದು ಕಲರ್ ಪ್ರಿಂಟರ್, ಎರಡು ಬಂಡಲ್ ಬೌಂಡ್ ಪೇಪರ್ ಮತ್ತು ಒಂದು ಬಂಡಲ್ ಅನ್ನು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next