Advertisement

ಹೈನೋದ್ಯಮಕ್ಕೆ ಪಶುವೈದ್ಯರ ಕೊಡುಗೆ

02:58 PM Apr 30, 2018 | Team Udayavani |

ಚಿಕ್ಕಬಳ್ಳಾಪುರ: ಗ್ರಾಮೀಣ ಜನ ಸಮುದಾಯಗಳು ಜೀವನಾಧಾರಕ್ಕೆ ಕುರಿ, ಮೇಕೆ, ಹಸು ಮತ್ತಿತರ ಪಶು ಸಂಗೋಪನೆಯನ್ನು ಹೆಚ್ಚಾಗಿ ಅವಲಂಬಿಸಿರುವುದರಿಂದ ಗ್ರಾಮೀಣಾಭಿವೃದ್ಧಿಯಲ್ಲಿ ಪಶು ವೈದ್ಯರ ಸೇವೆ ಅವಿಸ್ಮರಣೀಯ ಎಂದು ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಾ.ನಾಗೇಶ್‌ ತಿಳಿಸಿದರು.

Advertisement

ನಗರದ ಹೊರ ವಲಯದ ಚದಲಪುರ ಕ್ರಾಸ್‌ನಲ್ಲಿರುವ ಕೆನರಾ ಬ್ಯಾಂಕ್‌ನ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಪಶು ವೈದ್ಯಕೀಯ ಸಂಘ ಹಮ್ಮಿಕೊಂಡಿದ್ದ ವಿಶ್ವ ಪಶುವೈದ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಗೆ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿಯಷ್ಟೇ ಹೈನುಗಾರಿಕೆ ಕೂಡ ಸಾಕಷ್ಟು ಕೊಡುಗೆ ನೀಡುತ್ತಿದೆ. ಜೊತೆಗೆ ದೇಶದ ಲಕ್ಷಾಂತರ ಕುಟುಂಬಗಳ ಜೀವನಕ್ಕೆ ಹೈನೋದ್ಯಮ ಆಸರೆಯಾಗಿದೆ. ರೈತರು ಜಾನುವಾರುಗಳ ಆರೋಗ್ಯ ರಕ್ಷಣೆಗೆ ನಿಂತಿರುವ ಪಶು ವೈದರು ಸೇವೆ ನಿಜಕ್ಕೂ ಶ್ಲಾಘನೀಯ. ವೈದ್ಯರು ತಮ್ಮ ವೃತ್ತಿ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಪಶು ವೈದ್ಯಕೀಯ ವೃತ್ತಿಯ ಬಗ್ಗೆ ಯುವಕರಲ್ಲಿ ಆಸಕ್ತಿ ಬೆಳೆಯುತ್ತಿದ್ದು, ಹಿಂದೆ ಪಶು ವೈದ್ಯರ ಕೊರತೆಯಿಂದ ರೈತರು ಪರದಾಡುವಂತಾಗಿತ್ತು. ಆದರೆ, ಇತ್ತೀಚಿಗೆ ಹೆಚ್ಚು ಪಶುವೈದ್ಯರು ಕೋರ್ಸ್‌ಗಳನ್ನು ಮುಗಿಸಿ ಸೇವೆಗೆ ಲಭ್ಯವಾಗುತ್ತಿದ್ದಾರೆ. ಪಶುವೈದ್ಯರು ತಮ್ಮ ವೃತ್ತಿಯನ್ನು ನಿಷೆ, ಪ್ರಾಮಾಣಿಕವಾಗಿ ಮಾಡಿದರೆ ಸಮಾಜಕ್ಕೆ ಉತ್ತಮ ಫ‌ಲಿತಾಂಶ ನೀಡಬಹುದೆಂದರು.

ಜಿಲ್ಲಾ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಪಾಂಡುರಂಗಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರೈತರಿಗೆ ಪ್ರತಿದಿನ ಸುಲಭವಾಗಿ ಸಿಗುವಂತಹ ಹಾಗೂ ರೈತ ಮಿತ್ರರಾಗಿ ಕೆಲಸ ನಿರ್ವಹಿಸುವ ಏಕೈಕ ಸಂಸ್ಥೆ ಎಂದರೆ ಪಶುವೈದ್ಯಕೀಯ ಇಲಾಖೆ ಎಂದು ಬಣ್ಣಿಸಿದರು.

Advertisement

ಪ್ರತಿದಿನ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ರೈತರ ಆರ್ಥಿಕಾಭಿವೃದ್ಧಿಗೊಳಿಸುವಲ್ಲಿ ಪಶುವೈದ್ಯರು ಮಹತ್ವ ಪಾತ್ರ ವಹಿಸುತ್ತಿದ್ದಾರೆ. ರೈತರು ಕೂಡ ಪಶು ವೈದ್ಯರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಪಶು ಸಂಪತ್ತುನ್ನು ಉಳಿಸಿ, ಬೆಳೆಸಬೇಕು. ಇಲಾಖೆಯಲ್ಲಿ ರೈತರಿಗೆ ಸಾಕಷ್ಟು ಸಾಲ, ಸೌಲಭ್ಯಗಳಿದ್ದು, ಪಶು ವೈದ್ಯರು ಗ್ರಾಮೀಣ ಪ್ರದೇಶಕ್ಕೆ ತೆರಳಿದಾಗ ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.

ಆಹಾರ ಸುರಕ್ಷತೆ: ಜಿಲ್ಲೆಯ ಪಶು ವೈದ್ಯರಿಗೆ ಎನ್‌ಡಿಆರ್‌ಐನ ಹಿರಿಯ ನಿರ್ದೇಶಕ ಡಾ. ಸಿದ್ದರಾಮಣ್ಣ , ಆಹಾರ ಸಂರಕ್ಷತೆಯಲ್ಲಿ ಪಶುವೈದ್ಯರ ಪಾತ್ರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಈ ವೇಳೆ ಪಶು ವೈದ್ಯ ಇಲಾಖೆಯಿಂದ ವೈದ್ಯರಿಗೆ ಹಲವು ಉಪಯುಕ್ತವಾದ ಮಾಹಿತಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಪಶು ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ. ಭೈರಾರೆಡ್ಡಿ, ಜಿಲ್ಲಾ ಪಾಲಿ ಕ್ಲಿನಿಕ್‌ ಉಪ ನಿರ್ದೇಶಕ ಡಾ. ಗೋವಿಂದಪ್ಪ, ಕೆನರಾ ಬ್ಯಾಂಕ್‌ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ನಾರಾಯಣಸ್ವಾಮಿ, ಜಿಲ್ಲಾ ಪಶುವೈದ್ಯಕೀಯ ಸಂಘದ ಪ್ರಧಾನ ಕಾಯ

Advertisement

Udayavani is now on Telegram. Click here to join our channel and stay updated with the latest news.

Next