Advertisement

ಸೋಂಕು ನಿಯಂತ್ರಣಕ್ಕೆ ಸಹಕರಿಸಿ

03:17 PM Apr 16, 2021 | Team Udayavani |

ಶಿಡ್ಲಘಟ್ಟ: ಸರ್ಕಾರ-ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ದೇಶವನ್ನು ಕೊರೊನಾ ಮುಕ್ತ ಮಾಡಲು ಸಹಕರಿಸಬೇಕೆಂದುಶಾಸಕ ವಿ.ಮುನಿಯಪ್ಪ ಮನವಿ ಮಾಡಿದರು.ನಗರದ ಪ್ರವಾಸಿ ಮಂದಿರದಲ್ಲಿ ವಿವಿಧಮಸೀದಿಗಳ ಮುಖ್ಯಸ್ಥರೊಂದಿಗೆ ಸಭೆನಡೆಸಿ ಮಾತನಾಡಿದ ಅವರು, ಕೊರೊನಾಸೋಂಕು ಕೇವಲ ನಮ್ಮ ದೇಶ ಮಾತ್ರವಲ್ಲಇಡೀ ಜಗತ್ತನ್ನು ತಲ್ಲಣಗೊಳಿಸಿದೆ.

Advertisement

ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರಿಕರು ಇದನ್ನುಗಂಭೀರವಾಗಿ ಪರಿಗಣಿಸಿ ಆರೋಗ್ಯಕಾಪಾಡಿಕೊಳ್ಳಬೇಕು. ಸರ್ಕಾರ 45 ವರ್ಷಮೇಲ್ಪಟ್ಟ ನಾಗರಿಕರಿಗೆ ಉಚಿತವಾಗಿ ಲಸಿಕೆನೀಡುವ ವ್ಯವಸ್ಥೆ ಮಾಡಿದ್ದು ಅದನ್ನುಸದುಪಯೋಗ ಮಾಡಿಕೊಂಡು ಆರೋಗ್ಯಕಾಪಾಡಿಕೊಳ್ಳಬೇಕೆಂದರು.ಇಡೀ ಜಗತ್ತಿನಲ್ಲಿ ಪವಿತ್ರ ರಂಜಾನ್‌ಮಾಸ ಆರಂಭವಾಗಿದೆ.

ಕೊರೊನಾಸೋಂಕು ನಿಯಂತ್ರಿಸಲು ವಿಶೇಷಪ್ರಾರ್ಥನೆ ಸಲ್ಲಿಸಬೇಕೆಂದು ಮನವಿಮಾಡಿದ ಶಾಸಕರು, ಮುಸ್ಲಿಮರಲ್ಲಿ 45ವರ್ಷ ಮೇಲ್ಪಟ್ಟ ನಾಗರಿಕರು ಲಸಿಕೆಪಡೆದುಕೊಳ್ಳಲು ಮಸೀದಿ ಮುಖ್ಯಸ್ಥರುಅರಿವು ಮೂಡಿಸಬೇಕು ಎಂದರು.ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌ಮಾತನಾಡಿ, ಮಂದಿರ, ಮಸೀದಿ, ಚರ್ಚೆಸಹಿತ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರುಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಲುತಾಲೂಕು ಆಡಳಿತ ಮತ್ತು ಆರೋಗ್ಯಇಲಾಖೆಯೊಂದಿಗೆ ಕೈಜೋಡಿಸಬೇಕೆಂದುಮನವಿ ಮಾಡಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇ ಶ್‌ ಮೂರ್ತಿ ಮಾತನಾಡಿ, ಶಿಡ್ಲಘಟ್ಟನಗರದಲ್ಲಿ ಪ್ರತಿ ನಿತ್ಯ ಸುಮಾರು 500 ಮಂದಿಗೆಲಸಿಕೆ ಹಾಕುವ ಗುರಿ ಹೊಂದಿದ್ದೇವೆ.

ಪ್ರತಿಯೊಂದು ಮಸೀದಿಗಳಲ್ಲಿ ವ್ಯಾಪಕಅರಿವು, ಜಾಗೃತಿ ಮೂಡಿಸಬೇಕು ಎಂದರು.ಜಾಮೀಯಾ ಮಸೀದಿ ಅಧ್ಯಕ್ಷ ಎಚ್‌.ಎಸ್‌.ರμàಕ್‌ ಅಹಮದ್‌ ರಾಜ್ಯಅಲ್ಪಸಂಖ್ಯಾತರ ಇಲಾಖೆ ಪ್ರಧಾನಕಾರ್ಯದರ್ಶಿ ಕ್ಯಾ.ಮಣಿವಣ್ಣನ್‌ ಅವರಆದೇಶದ ಪ್ರತಿಯನ್ನು ಉರ್ದುಭಾಷೆಯನ್ನು ಅನುವಾದ ಮಾಡಿ ಎಲ್ಲಾಮಸೀದಿಗಳಿಗೆ ಹಂಚಿಕೆ ಮಾಡುವ ಕೆಲಸಮಾಡಿದ್ದೇವೆ.

ಇನ್ನು ಲಸಿಕಾ ಅಭಿಯಾನಯಶಸ್ವಿಗೆ ಸಹಕಾರ ಮತ್ತು ನೆರವುನೀಡುವುದಾಗಿ ಭರವಸೆ ನೀಡಿದರು.ಸಭೆಯಲ್ಲಿ ನಗರಸಭೆ ಪೌರಾಯುಕ್ತಶ್ರೀನಿವಾಸ್‌, ಆರೋಗ್ಯ ನಿರೀಕ್ಷಕ,ಜಾಮೀಯಾ ಮಸೀದಿ ಕಾರ್ಯದರ್ಶಿಬಿ.ಅಬ್ದುಲ್‌ ಸಲಾಂ, ಆಮೀರಿಯಾಮಸೀದಿಯ ಬಾಬಾ, ಸಾದಿಕ್‌ಪಾಷಾ,μದಾಹುಸೇನ್‌, ಮುನೀರ್‌, ಡಿಸಿಸಿಪ್ರಧಾನ ಕಾರ್ಯದರ್ಶಿ ಮಧುಸೂದನ್‌,ತಾಲೂಕು ಮಾದಿಗ ದಂಡೋರ ಹೋರಾಟಸಮಿತಿ ಅಧ್ಯಕ್ಷ ಮುನಿರಾಜು(ದಾಮೋದರ್‌) ನರಸಿಂಹಮೂರ್ತಿ,ವಿವಿಧ ಮಸೀದಿಗಳ ಮುಖ್ಯಸ್ಥರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next