Advertisement
ಸಮಾಜದ ಸರ್ಕಾರಿ ನೌಕರರು ಮಠದ ಏಳಿಗೆ ಕನಿಷ್ಠ ತಿಂಗಳಿಗೆ 100 ರೂ. ಗಳನ್ನಾದರೂ ನೀಡಬೇಕು. ಮೈಗೆ ಎಣ್ಣೆ ಹಚ್ಚಿಕೊಂಡವರಂತೆ ವರ್ತಿಸಬಾರದು ಎಂದು ಖಾರವಾಗಿ ಹೇಳಿದರು. ಮಠದಲ್ಲಿ ಪ್ರಸ್ತುತ 250 ವಿದ್ಯಾರ್ಥಿಗಳು ವಸತಿಯುತ ಶಿಕ್ಷಣ ಪಡೆಯುತ್ತಿದ್ದಾರೆ. ಅರ್ಹ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಸಹ ನೀಡಲಾಗುತ್ತಿದೆ.
Related Articles
Advertisement
ಓದುವ ಸಂಸ್ಕೃತಿ ಹಾಗೂ ಜ್ಞಾನ ಸಂಪಾದನೆಯಲ್ಲಿ ಎಲ್ಲರೂ ಹಿಂದೆಬಿದ್ದಿದ್ದಾರೆ. ಇದನ್ನು ಬದಲಾಯಿಸಬೇಕು. ಕನಕ ಗುರುಪೀಠದಿಂದ 11 ಸಂಪುಟಗಳ ಗ್ರಂಥಮಾಲಿಕೆಯನ್ನು ಹೊರತರಲಾಗುತ್ತಿದ್ದು, ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಗ್ರಂಥಮಾಲಿಕೆಯನ್ನು ಖರೀದಿಸಬೇಕು ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಡಾ| ನಾ. ಲೋಕೇಶ್ ಒಡೆಯರ್ ಮಾತನಾಡಿ, ಕಾಲ, ಕಾಯಕ ಕಾಸು ಇವುಗಳನ್ನು ಗೌರವಿಸಿದಾಗ ಮಾತ್ರ ಪ್ರಗತಿ ಹೊಂದಲು ಸಾಧ್ಯ. ಪ್ರತಿಭೆ ಎನ್ನುವುದು ಯಾವುದೋ ಒಂದು ಜಾತಿಯ ಸ್ವತ್ತಲ್ಲ. ಶ್ರದ್ಧೆ, ಪ್ರಾಮಾಣಿಕತೆ, ಜ್ಞಾನದ ಹಸಿವು ಇರುವ ಎಲ್ಲರೂ ಜ್ಞಾನ ಸಂಪಾದನೆಮಾಡಬಹುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್, ಡಾ| ಉದಯ ಶಂಕರ್ ಒಡೆಯರ್, ಜಿಲ್ಲಾ ಪಂಚಾಯತ್ ಸದಸ್ಯೆ ಜಯಶೀಲಾ, ಮುಖಂಡರಾದ ಎಂ. ಕರಿಯಪ್ಪ, ಟಿ. ನಾಗರಾಜಪ್ಪ, ಬಿ.ಟಿ. ಹನುಮಂತಪ್ಪ, ಎಚ್ .ಬಿ. ಪರುಶುರಾಮಪ್ಪ, ಪ್ರೊ. ಬಾಗೂರು ಆನಂದಪ್ಪ, ಯುಗಧರ್ಮ ರಾಮಣ್ಣ, ಕೆ. ದೇವೇಂದ್ರಪ್ಪ ಇತರರು ವೇದಿಕೆಯಲ್ಲಿದ್ದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.