Advertisement

ಸಣ್ಣ ನೀರಾವರಿ ಗಣತಿಗೆ ಸಹಕರಿಸಿ: ಕಂಬಾಳಿಮಠ

05:14 PM Oct 09, 2020 | Suhan S |

ಗಜೇಂದ್ರಗಡ: ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಸಣ್ಣ ನೀರಾವರಿ ಅಂಕಿ ಅಂಶಗಳ ಸಮನ್ವಯೀಕರಣ ಯೋಜನೆ ಅಡಿಯಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆಸಣ್ಣ ನೀರಾವರಿ ಗಣತಿ ಕೈಗೊಳ್ಳಲಾಗುತ್ತದೆ. ಈ ವರ್ಷದಲ್ಲಿ ನಡೆಯುವ ಆ ಗಣತಿಗೆ ಸಾರ್ವಜನಿಕರು,ರೈತರು ಸಹಕರಿಸಬೇಕು. ಜೊತೆಗೆ ಅಧಿ ಕಾರಿಗಳುಸಮರ್ಪಕ ಮಾಹಿತಿ ಕಲೆಹಾಕಬೇಕಿದೆ ಎಂದು ಜಿಲ್ಲಾಸಂಖ್ಯಾ ಸಂಗ್ರಹಣಾಧಿ ಕಾರಿ ಎ.ಎ. ಕಂಬಾಳಿಮಠ ಹೇಳಿದರು.

Advertisement

ಪುರಸಭೆ ಸಭಾ ಭವನದಲ್ಲಿ ಜಿಲ್ಲಾ ಸಣ್ಣ ನೀರಾವರಿ ಇಲಾಖೆಯಿಂದ ಗಜೇಂದ್ರಗಡ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳಿಗಾಗಿ ಗುರುವಾರ ನಡೆದ 6ನೇ ಸಣ್ಣನೀರಾವರಿ ಗಣತಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಈಗಾಗಲೇ ಜಗತ್ತಿನಲ್ಲಿಎರಡು ಮಹಾಯುದ್ಧಗಳು ನಡೆದಿವೆ. ಇನ್ನೇನಾದರೂ ಮೂರನೇ ಮಹಾಯುದ್ಧ ನಡೆದರೆ, ಅದು ಜಲಮೂಲಗಳಿಗಾಗಿಯೇ ನಡೆಯಬಹುದು. ಅಷ್ಟರಮಟ್ಟಿಗೆ ಜಲ ಮೂಲಗಳು ಕ್ಷೀಣಿಸುವ ಹಂತದಲ್ಲಿವೆ. ಇದನ್ನು ಸಂರಕ್ಷಣೆ ಮತ್ತು ಸದ್ವಿನಿಯೋಗ ಆಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ಗಣತಿ ಮಾಡಲಾಗುತ್ತದೆ.

0-200 ಹೆಕ್ಟೇರ್‌ ಅಚ್ಚುಕಟ್ಟು ಎಲ್ಲ ನೀರಾವರಿ ಯೋಜನೆಗಳು ಸಣ್ಣ ನೀರಾವರಿ ಯೋಜನೆಗಳೆಂದು ಪರಿಗಣಿಸಿದ್ದು, ಅಂತರ್ಜಲ ಯೋಜನೆಗಳು ಹಾಗೂ ಮೇಲ್ಮೈ ಹರಿಯುವ ಜಲ ಯೋಜನೆಗಳು ಎಂದುವಿಧಗಳಾಗಿ ವರ್ಗೀಕರಿಸಲಾಗಿದೆ. ಅಂತರ್ಜಲ ಯೋಜನೆಗಳಡಿ ಅಗೆದ ಬಾವಿ, ಕೊಳವೆ ಬಾವಿಗಳು ನಮೂನೆ 1ರಲ್ಲಿ ಹಾಗೂ ಮೇಲ್ಮೈ ಹರಿಯುವ ಜಲ ಯೋಜನೆಗಳಡಿ ಏತ ನೀರಾವರಿ ಯೋಜನೆಗಳನ್ನು ನಮೂನೆ 2ರಲ್ಲಿ ಭರ್ತಿ ಮಾಡಿ ಗಣತಿ ಕಾರ್ಯ ಕೈಗೊಂಡು ಮಾಹಿತಿ ಸಂಗ್ರಹಿಸಬೇಕು ಎಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ತಿಳಿಸಿದರು.

ಸಹಾಯಕ ಸಾಂಕಿಕ ಅಧಿಕಾರಿ ಟಿ.ಎಸ್‌. ಬೆಳ್ಳಟ್ಟಿ ಮಾತನಾಡಿ, ಈ ಗಣತಿಯಿಂದ ಎಲ್ಲ ವಿಧದ ಸಣ್ಣ ನೀರಾವರಿ ಯೋಜನೆಗಳ ಸಮಗ್ರವಾದ ಮಾಹಿತಿ ಕ್ರೂಢೀಕರಿಸಲಾಗುತ್ತದೆ. ಗಣತಿದಾರರು, ಗ್ರಾಮ ಲೆಕ್ಕಾಧಿಕಾರಿಗಳು ರೈತರಿಂದ ಮಾಹಿತಿ ಪಡೆಯುವಜತೆಗೆ ಜಲಮೂಲಗಳ ಭೌತಿಕ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಬೇಕಿದೆ ಎಂದರು. ಶಿರಸ್ತೇದಾರ ವೀರಣ್ಣ ಅಡಗತ್ತಿ, ಗಣಪತಸಿಂಗ್‌, ಎಂ.ಜಿ. ಸಂತೋಷ, ಜಿ.ಬಿ. ಆನಂದಪ್ಪನವರ, ಶಬ್ಬೀರ್‌ ನಿಶಾನದಾರ, ಉಮೇಶ ಅರಳಿಗಿಡದ ಇತರರು ಪಾಲ್ಗೊಂಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next