Advertisement

ಪಂಜಾಬ್‌ ರಸ್ತೆಗಿಳಿಯದ ಸರಕಾರಿ ಬಸ್ಸುಗಳು : ಗುತ್ತಿಗೆ ನೌಕರರ 3 ದಿನಗಳ ಮುಷ್ಕರ

10:02 AM Jul 03, 2019 | Sathish malya |

ಚಂಡೀಗಢ : ತಿಂಗಳ ವೇತನವನ್ನು ಏರಿಸಬೇಕು ಮತ್ತು ಉದ್ಯೋಗವನ್ನು ಕ್ರಮಬದ್ಧಗೊಳಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಮುಂದಿಟ್ಟು ರಾಜ್ಯ ಸರಕಾರಿ ಒಡೆತನದ ಪಂಜಾಬ್‌ ರೋಡ್‌ ವೇಸ್‌ ಗುತ್ತಿಗೆ ನೌಕರರು ಇಂದು ಮಂಗಳವಾರದಿಂದ ಮೂರು ದಿನಗಳ ಮುಷ್ಕರವನ್ನು ಆರಂಭಿಸಿದ್ದಾರೆ.

Advertisement

ಪರಿಣಾಮವಾಗಿ ಪಂಜಾಬ್‌ ರಾಜ್ಯಾದ್ಯಂತದ ಸುಮಾರು 1,500ಕ್ಕೂ ಅಧಿಕ ರಾಜ್ಯ ಸಾರಿಗೆ ಬಸ್ಸುಗಳು ಇಂದು ರಸ್ತೆಗೆ ಇಲಿದಿಲ್ಲ. ಹಾಗಾಗಿ ರಾಜ್ಯಾದ್ಯಂತ ಪ್ರಯಾಣಿಕರು ತೀವ್ರವ್ರ ಪರದಾಟಕ್ಕೆ ಗುರಿಯಾಗಿದ್ದಾರೆ. ಅಂತೆಯೇ ಜನಜೀವನ ತೀವ್ರವಾಗಿ ಬಾಧಿತವಾಗಿದೆ.

ಪಂಜಾಬ್‌ ರೊಡ್‌ ವೇಸ್‌ ಪನ್‌ಬಸ್‌ ಗುತ್ತಿಗೆ ನೌಕರರ ಸಂಘಟನೆಯ ಬ್ಯಾನರ್‌ನಡಿ ಮುಷ್ಕರಕ್ಕೆ ಇಳಿದಿರುವವರಲ್ಲಿ ಹೆಚ್ಚಿನವರು ರಾಜ್ಯ ಸಾರಿಗೆ ಬಸ್‌ ಚಾಲಕರು ಮತ್ತು ನಿರ್ವಾಹಕರಾಗಿದ್ದಾರೆ.

ಕಳೆದ ಹಲವು ವರ್ಷಗಳಿಂದ ನಾವು ಗುತ್ತಿಗೆ ನೌಕರರಾಗಿ ದುಡಿಯುತ್ತಿದ್ದೇವೆ. ನಮ್ಮ ನಿರಂತರ ಬೇಡಿಕೆಯ ಹೊರತಾಗಿಯೂ ನಮ್ಮ ಉದ್ಯೋಗವನ್ನು ಸರಕಾರ ಕ್ರಮ ಬದ್ಧಗೊಳಿಸಿಲ್ಲ ಎಂದು ಲೂಧಿಯಾನದಲ್ಲಿ ಪ್ರತಿಭಟನ ನಿರತರಾಗಿರುವ ಸಂಘಟನೆಯ ಸದಸ್ಯರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next