Advertisement

contractors issue; ರಾಜ್ಯದಲ್ಲಿ ಒಂದು ಸರ್ಕಾರ ಇದೆಯೇ ಎರಡು ಸರ್ಕಾರ ಇದೆಯೇ?: ಗೋಪಾಲಯ್ಯ

11:52 AM Aug 11, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಮೇಲೆ ಒಂದಲ್ಲ ಒಂದು ದುರ್ಘಟನೆ ನಡೆಯುತ್ತಿದೆ. ಇದಕ್ಕೆ ನೇರವಾಗಿ ಕಾಂಗ್ರೆಸ್ ಸರ್ಕಾರ ಕಾರಣ. ರಾಜ್ಯದ ಇತಿಹಾಸದಲ್ಲಿ ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ನೀಡಿದ‌ ಉದಾಹರಣೆ ಇಲ್ಲ. ಸಿಎಂ ಸಿದ್ದರಾಮಯ್ಯ ದುರ್ಬಲರಾಗಿದ್ದಾರೆ ಅಥವಾ ಅವರೂ ಶಾಮೀಲಾಗಿದ್ದಾರೆ ಎಂದು ಮಾಜಿ ಸಚಿವ ಕೆ.ಗೋಪಾಲಯ್ಯ ವಾಗ್ದಾಳಿ ನಡೆಸಿದರು.

Advertisement

ರಾಜ್ಯ ಸರ್ಕಾರದ ಭ್ರಷ್ಟಾಚಾರ, ಕಾಂಟ್ರ್ಯಾಕ್ಟರ್ ವಿಚಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸಿಎಂ ನಂಬಿರುವ ಅಜ್ಜಯ್ಯ ದೇವರ ಮೇಲೆ ಪ್ರಮಾಣ ಮಾಡಿ‌ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಕಾಂಟ್ರ್ಯಾಕ್ಟರ್‌ ಗಳು ಬೀದಿಬೀದಿ ಸುತ್ತುತ್ತಿದ್ದಾರೆ. ಲೋಕಸಭೆ ಚುನಾವಣೆಗಾಗಿ ಕೇಂದ್ರದ ನಾಯಕರಿಗೆ ಹಣ ನೀಡಲು ಹೀಗೆ ಮಾಡುತ್ತಿದ್ದಾರೆ. 300 ಕ್ಕೂ ಹೆಚ್ಚು ಗುತ್ತಿಗೆದಾರರು ದಯಾ ಮರಣ ಕೋರಿ ಪತ್ರ ಬರೆಯುವುದು ರಾಜ್ಯಕ್ಕೆ ನಾಚಿಕೆಗೇಡಿನ ಕೆಲಸ. ಕಾಂಟ್ರ್ಯಾಕ್ಟರ್‌ಗಳು ಕೆಲಸ ನಿಲ್ಲಿಸಿದರೆ ಲಕ್ಷಾಂತರ ಜನರಿಗೆ ನಿರುದ್ಯೋಗ ಸೃಷ್ಟಿ ಆಗುತ್ತದೆ ಎನ್ನುವುದು ಸಿಎಂ ಗಮನಕ್ಕೆ ಬಂದಿಲ್ಲವೇ? ಈ ರಾಜ್ಯದಲ್ಲಿ ಒಂದು ಸರ್ಕಾರ ಇದೆಯೇ ಎರಡು ಸರ್ಕಾರ ಇದೆಯೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:Contractors ಬಾಕಿ ಮೊತ್ತ ಬಿಡುಗಡೆ ಮಾಡಲು ಸರ್ಕಾರಕ್ಕೆ ಡೆಡ್ ಲೈನ್ ನೀಡಿದ ಕೆಂಪಣ್ಣ

ಕಾಂಟ್ರ್ಯಾಕ್ಟರ್‌ ಸಂಘದ ಕೆಂಪಣ್ಣ ಅವರು ದೇಶಾದ್ಯಂತ40% ಆರೋಪ ಮಾಡಿದ್ದರು. ಕೆಂಪಣ್ಣನವರೇ ನೀವು ಯಾರ ಪರ ನಿಲ್ಲುತ್ತೀರಿ? ನೀವು ಹಿಂದಿನ 224 ಶಾಸಕರಲ್ಲಿ ಯಾರಿಗೆ ಹಣ ನೀಡಿದ್ದೀರಿ ಎಂದು ತಾಕತ್ತಿದ್ದರೆ ಹೇಳಿ. ಹಣ ಕೊಟ್ಟ ಶಾಸಕರು ಯಾರು? ಎಂದು 24 ಗಂಟೆಯಲ್ಲಿ ಉತ್ತರಿಸಿ. ಹಿಂದೆ ಕಾಂಗ್ರೆಸ್ ನಿಂದ ಕೆಂಪಣ್ಣ ಕಿಕ್‌ಬ್ಯಾಕ್ ತೆಗೆದುಕೊಂಡು ಹೀಗೆ ಆರೋಪ ಮಾಡಿದ್ದರು. ಕಾಂಟ್ರ್ಯಾಕ್ಟರ್‌ಗಳು ನೇಣು ಹಾಕಿಕೊಳ್ಳಲು ಸರ್ಕಾರ ಅವಕಾಶ ಕೊಡಬೇಡಿ ಎಂದು ಗೋಪಾಲಯ್ಯ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next