Advertisement
ಲಂಚಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆಯೂ ಸೂಚ್ಯವಾಗಿ ಸಚಿವರ ಗಮನ ಸೆಳೆದಿದ್ದು, 7 ದಿನಗಳೊಳಗೆ ಸಭೆ ಕರೆದು ನ್ಯಾಯ ಒದಗಿಸದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಮಾಧ್ಯಮಗಳ ಮುಂದೆ ಹೋಗುತ್ತೇವೆ ಎಂದೂ ಮಾಹಿತಿ ನೀಡಿದ್ದಾರೆ.
Related Articles
ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಕುಂದು ಕೊರತೆಗಳ ಬಗ್ಗೆ ಹಾಗೂ ಗುತ್ತಿಗೆದಾರರ ಬಾಕಿ ಉಳಿದಿರುವ ಹಣ ಪಾವತಿಸುವ ಬಗ್ಗೆ ಸುಮಾರು ಸಲ ತಮ್ಮ ಗಮನಕ್ಕೆ ತಂದಿದ್ದೇವೆ. ಆದರೆ ತಾವು ಇದುವರೆಗೂ ನಮಗೆ ಯಾವುದೇ ಪತ್ರ ಸಹ ಬರೆದಿಲ್ಲ. ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆದು ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
Advertisement
ಜ್ಯೇಷ್ಠತೆಯ ಅವಗಣನೆಇಲಾಖೆಯ ಅಧಿಕಾರಿಗಳನ್ನು ನಾವು ಹಣ ಕೇಳಿದರೆ, ಹಣ ಪಾವತಿಯೇ ಆಗಲಿ, ಬೇರೆ ವಿಷಯದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಮಂತ್ರಿಗಳನ್ನು ಭೇಟಿ ಮಾಡಿ ಎನ್ನುತ್ತಿದ್ದಾರೆ. ಪಾವತಿ ವಿಷಯದಲ್ಲಿ ಸಚಿವರು ಕೊಟ್ಟ ಪಟ್ಟಿಯ ಪ್ರಕಾರ ಜ್ಯೇಷ್ಠತೆಯನ್ನು ಅವಗಣಿಸಿ ಹಣ ಪಾವತಿಸುವಂತೆ ಸೂಚಿಸುತ್ತಿದ್ದಾರೆ. ಈ ರೀತಿ ಮಾಡಿದರೆ ನಮ್ಮ ಎಲ್ಲ ಗುತ್ತಿಗೆದಾರರಿಗೂ ಅನ್ಯಾಯ ಮಾಡಿದಂತಾಗುತ್ತದೆ. ಈ ವಿಚಾರಗಳ ಬಗ್ಗೆ ಜ. 8ರಂದು ಸಭೆ ನಡೆಸಿ ಚರ್ಚಿಸಿದ್ದೇವೆ. ಈ ಹಿಂದಿನ ಸರಕಾರದ ವಿರುದ್ಧ ಹೋರಾಟ ಮಾಡಿರುವ ಬಗ್ಗೆ ನಿಮಗೆ ಗೊತ್ತೇ ಇದೆ. ತಮಗೆ ನಮ್ಮ ಸಂಘದ ಬಗ್ಗೆ ಸ್ವಲ್ಪವೂ ಕರುಣೆ ಇಲ್ಲ ಎಂದೆನಿಸುತ್ತಿದೆ. ಈ ರೀತಿ ನಮ್ಮನ್ನು ಅವಗಣಿಸುತ್ತೀರಿ ಎಂದು ನಾವು ಕನಸಿನಲ್ಲೂ ಭಾವಿಸಿರಲಿಲ್ಲ. ಈ ಪತ್ರ ತಲುಪಿ 7 ದಿವಸಗಳೊಳಗಾಗಿ ನಮ್ಮ ಸಂಘದ ಸಭೆಯನ್ನು ಕರೆದು ನಮಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಪತ್ರಿಕೆಗಳಲ್ಲಿ ಬಿಡುಗಡೆ ಮಾಡಿ ಹೋರಾಟದ ಹಾದಿ ಹಿಡಿಯಲು ನಮ್ಮ ಸಭೆಯಲ್ಲಿ ನಿರ್ಧರಿಸಿದ್ದೇವೆ. ಆದ್ದರಿಂದ ಆದಷ್ಟು ಬೇಗನೆ ಇದರ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. ಯಾವ್ಯಾವ ಸಚಿವರಿಗೆ ಪತ್ರ ?
ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ವಸತಿ ಸಚಿವ ಜಮೀರ್ ಖಾನ್, ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಸಚಿವ ಡಾ| ಎಚ್.ಸಿ. ಮಹದೇವಪ್ಪ, ಪೌರಾಡಳಿತ ಸಚಿವ ರಹೀಮ್ ಖಾನ್. ಕಂಟ್ರಾಕ್ಟರ್ ಅಸೋಸಿಯೇಶನ್‌ನವರು ಪತ್ರ ಬರೆದಿದ್ದಾರೆ. ನಮ್ಮನ್ನು ಅವರು ಭೇಟಿ ಮಾಡಿದ್ದಾರೆ. ನಾನು ವಿಭಾಗವಾರು ಭೇಟಿ ಕೊಡುತ್ತಿದ್ದೇನೆ. ಅವರ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು, ಭೇಟಿಗೂ ಸಮಯಾವಕಾಶ ಕೊಡುತ್ತೇನೆ. ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನವನ್ನೂ ಮಾಡುತ್ತಿದ್ದೇನೆ. ನಾವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ. – ಎನ್.ಎಸ್. ಬೋಸರಾಜು, ಸಣ್ಣ ನೀರಾವರಿ ಸಚಿವ ನಮ್ಮ ಇಲಾಖೆಯ ಸಭೆ ಮಾಡಿದ್ದೇನೆ. ಅಲ್ಲಿ ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆಯೂ ಚರ್ಚಿಸಿದ್ದೇನೆ, ಸಮಸ್ಯೆ ಬಗೆಹರಿಸಲೂ ಪ್ರಯತ್ನಿಸಿದ್ದೇನೆ. ಹಂತ-ಹಂತವಾಗಿ ಹಣ ಬಿಡುಗಡೆ ಮಾಡಲೂ ಸೂಚಿಸಿದ್ದೇನೆ. – ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ ಹಿಂದಿನ ಸರಕಾರ ಗುತ್ತಿಗೆದಾರರಿಗೆ ಹಣ ಪಾವತಿಸದೆ ಬಾಕಿ ಇಟ್ಟಿದೆ. ಅದನ್ನು ಸರಿಪಡಿಸಲು ಸಮಯ ಬೇಕು. ಸಮಸ್ಯೆಗಳನ್ನು ಸರಿ ಮಾಡಲು ನಮ್ಮ ಸರಕಾರ ಬದ್ಧವಾಗಿದೆ. – ಆರ್.ಬಿ.ತಿಮ್ಮಾಪೂರ, ಅಬಕಾರಿ ಸಚಿವ 30 ಸಾವಿರ ಕೋಟಿ ರೂ.ಗೂ ಅಧಿಕ ಬಿಲ್ ಬಾಕಿ ಇದೆ. ಇದೆಲ್ಲ ನಮ್ಮ ಸರಕಾರ ಒಂದರಲ್ಲೇ ಆಗಿರುವುದಲ್ಲ. ಹಿಂದಿನ ಸರಕಾರದ ಭಾರವನ್ನೂ ನಾವು ಹೊರುತ್ತಿದ್ದೇವೆ. ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದಿನ ಬಿಜೆಪಿ ಸರಕಾರದ ಅವಧಿಯ ಶ್ವೇತಪತ್ರವನ್ನೂ ಬೇಕಿದ್ದರೆ ಬಿಡುಗಡೆ ಮಾಡಿಸುತ್ತೇವೆ. ಕೆಕೆಆರ್‌ಡಿಬಿ ಅನುದಾನದಲ್ಲಿ ಶಾಸಕರು ಶೇ. 15ರಷ್ಟು ಕಮಿಷನ್ ಕೇಳುತ್ತಿರುವ ಬಗ್ಗೆ ಗೊತ್ತಿಲ್ಲ. – ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ ಪತ್ರದಲ್ಲಿ ಏನಿದೆ?-
– ಬಿಲ್ ಬಾಕಿ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ
– ಜೇಷ್ಠತೆ ಕಡೆಗಣಿಸಿ ಹಣ ಪಾವತಿಸಲು ಸಚಿವರಿಂದ ಸೂಚನೆ
– ಗುತ್ತಿಗೆದಾರರ ಮೇಲೆ ಸರಕಾರಕ್ಕೆ ಕರುಣೆಯೇ ಇಲ್ಲ
– ನಮ್ಮನ್ನು ಅವಗಣಿಸುತ್ತೀರೆಂದು ಕನಸಲ್ಲೂ ಭಾವಿಸಿರಲಿಲ್ಲ