Advertisement

6 ವರ್ಷದಿಂದ ಸಂಬಳವೇ ಇಲ್ಲ: ಮನನೊಂದು ತಾ.ಪಂ ಕಚೇರಿಯಲ್ಲೇ ನೇಣಿಗೆ ಶರಣಾದ ಗುತ್ತಿಗೆ ನೌಕರ

06:15 PM Jun 28, 2022 | Team Udayavani |

ಮುಧೋಳ : ರಾಜೀವ್ ಗಾಂಧಿ ವಸತಿ ನಿಗಮದ ಗುತ್ತಿಗೆ ಆಧಾರದ ನೌಕರ ತಾನು ಕಾರ್ಯನಿರ್ವಹಿಸುತ್ತಿದ್ದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಆತ್ಮಹತ್ಯೆ ಶರನಾಗಿದ್ದಾನೆ.

Advertisement

ರಾಯಚೂರು ಜಿಲ್ಲೆ ಲಿಂಗಸ್ಗೂರು ತಾಲೂಕಿನ ಚಿಕ್ಕ ಹೆಸರೂರ ಗ್ರಾಮದ ಬಸಣ್ಣ ಪಟ್ಟೇದ (42) ಆತ್ಮಹತ್ಯೆ ಮಾಡಿಕೊಂಡಿರುವ ನೌಕರ.

ಇದನ್ನೂ ಓದಿ: ಉಡುಪಿ: ಪೋಷಕರಲ್ಲಿ ಅಪಹರಣದ ನಾಟಕವಾಡಿ 5 ಲಕ್ಷಕ್ಕೆ ಬೇಡಿಕೆ ಇಟ್ಟ ಮಗ: ಕೊನೆಗೆ ಆಗಿದ್ದೇ ಬೇರೆ

ಕಳೆದ 10 ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಸಣ್ಣಗೆ 6‌ ವರ್ಷದಿಂದ ವೇತನವಾಗಿರಲಿಲ್ಲ ಎಂಬ ಮಾಹಿತಿ ಇದೆ.

ಸೋಮವಾರ ರಾತ್ರಿ ತಾಲೂಕು ಪಂಚಾಯಿತಿ ಕಾರ್ಯಾಲದಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next