Advertisement

ರಾಜ್ಯದ ಹಲವೆಡೆ ಮುಂದುವರಿದ ಕಾಡ್ಗಿಚ್ಚು

12:30 AM Feb 26, 2019 | |

ಗುಂಡ್ಲುಪೇಟೆ/ಚಾಮರಾಜನಗರ/ಶಿವಮೊಗ್ಗ: ರಾಜ್ಯದ ಹಲವೆಡೆ ಸೋಮವಾರವೂ ಬೆಂಕಿ ಅನಾಹುತ ಸಂಭವಿಸಿದ್ದು, ಅಪಾರ ಪ್ರಮಾಣದಲ್ಲಿ ಅರಣ್ಯ ಸಂಪತ್ತು ನಾಶವಾಗಿದ್ದು, ವನ್ಯಜೀವಿಗಳು ಸಾವನ್ನಪ್ಪಿವೆ.

Advertisement

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಐದು ದಿನಗಳ ಹಿಂದೆ ಆರಂಭವಾದ ಕಾಡ್ಗಿಚ್ಚಿನ ಪ್ರತಾಪ ಸೋಮವಾರವೂ ಮುಂದುವರಿದಿದೆ. ರಾಜ್ಯ ಸರ್ಕಾರ ಬೆಂಕಿ ಆರಿಸಲು ವಾಯುಪಡೆಯ ನೆರವು ಕೇಳಿದ್ದು,ಎರಡು ಹೆಲಿಕಾಪ್ಟರ್‌ಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿವೆ. ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಿಂದ ಕೆಳಗಿಳಿದ ಬೆಂಕಿಯು ಪಶ್ಚಿಮದ ಮುಖಾಂತರ ಮದ್ದೂರು ಅರಣ್ಯವಲಯಕ್ಕೆ ಧಾವಿಸಿದ್ದು ಮೂಲೆಹೊಳೆ ಅರಣ್ಯ ಪ್ರದೇಶಕ್ಕೆ ವ್ಯಾಪಿಸಿದೆ.

ಶಿವಮೊಗ್ಗದ ಕೆಲ ಕಡೆ ಬೆಂಕಿ ಅನಾಹುತಗಳು ಸಂಭವಿಸಿವೆ. ಭಾನುವಾರ ಇಲ್ಲಿನ ಶೆಟ್ಟಿಹಳ್ಳಿ ಅಭಯಾರಣ್ಯ ಹಾಗೂ ಮಲೆಶಂಕರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎರಡೂ ಕಡೆ ಎರಡೂ¾ರು ಎಕರೆಗೆ ಬೆಂಕಿ ವ್ಯಾಪಿಸಿದೆ. ಆದರೆ ಕೆಳಗೆ ಬಿದ್ದಿರುವ ಮರದ ಎಲೆಗಳಿಗೆ ಬೆಂಕಿ ಬಿದ್ದಿರುವುದು ಬಿಟ್ಟರೆ ಮರಗಳಿಗೆ ಯಾವುದೇ ಹಾನಿಯಾಗಿಲ್ಲ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಂರಕ್ಷಣಾ ಇಲಾಖೆ ಬೆಂಕಿ ನಂದಿಸುವ ಕೆಲಸಕ್ಕೆ ಆದ್ಯತೆ ನೀಡಿದೆ. ಪ್ರಮುಖ ಸ್ಥಳಗಳಲ್ಲಿ ಅರಣ್ಯ ರಕ್ಷಕರನ್ನು ನೇಮಿಸಿ ಕಿಡಿಗೇಡಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಸಾಗರ ತಾಲೂಕಿನ ಆವಿನಹಳ್ಳಿ ಹೋಬಳಿಯ ಮೂರಕೈ, ಬಾಳೆಕೊಪ್ಪ, ಸತಾಳು ಹಾಗೂ ಗುಳೆಹಳ್ಳಿ ಭಾಗದಲ್ಲಿ ಭಾನುವಾರ ಅರಣ್ಯಕ್ಕೆ ಬೆಂಕಿ ತಗುಲಿದ್ದು, ಸಾವಿರಾರು ಕಾಡುಜಾತಿಯ ಮರಗಳು ಸುಟ್ಟು ಭಸ್ಮವಾಗಿವೆ.

ಬೆಂಗಳೂರು ವಿವಿ ಆವರಣದಲ್ಲೂ ಬೆಂಕಿ
ಬೆಂಗಳೂರು: ಬಿಸಿಲ ತಾಪದಿಂದಾಗಿ ಬೆಂಗಳೂರು ವಿವಿ ಆವರಣ ಸೇರಿ ನಗರದ ಕೆಲವಡೆ ಸೋಮವಾರ ಬೆಂಕಿ ಅನಾಹುತ ಸಂಭವಿಸಿದೆ. ಯಾವುದೇ ಪ್ರಾಣಾ ಹಾನಿಯಾಗಿಲ್ಲ.ಬೆಂಗಳೂರು ವಿವಿ ಆವರಣದ ಅರಣ್ಯ ಪ್ರದೇಶದಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಕೆಲಕಾಲ ಆತಂಕದ ವಾತಾವಾರಣ ನಿರ್ಮಾಣವಾಗಿತ್ತು. ಕೂಡಲೇ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್‌ ಸಮೀಪದ ಅನ್ನಪೂರ್ಣೇಶ್ವರಿ ದೇವಾಲಯದ ಸಮೀಪ ನಿಂತಿದ್ದ ಟಾಟಾಸೋಮೋ ಕಾರಿಗೆ ಬೆಂಕಿ ತಗುಲಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Advertisement

ಹಾಗೆಯೇ ಎಲೆಕ್ಟ್ರಾನಿಕ್‌ ಸಿಟಿ, ಹುಳಿಮಾವು, ವೈಟ್‌μàಲ್ಡ್‌, ಸರ್ಜಾಪುರ ಸೇರೆ ಕೆಲವೆಡೆ ಕಸ ಹಾಗೂ ಖಾಲಿ ಜಾಗದಲ್ಲಿದ್ದ ಒಣ ಹುಲಿಗೆ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ.

ಸೇನಾ ಹೆಲಿಕಾಪ್ಟರ್‌ ಬಳಕೆ ಬೆಂಗಳೂರು: ಬಂಡೀಪುರ ಅಭಯಾರಣ್ಯದಲ್ಲಿ ಕಾಣಿಸಿ ಕೊಂಡಿರುವ ಬೆಂಕಿ ನಂದಿಸಲು ಸೇನಾ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಸೋಮವಾರ ಹಿರಿಯ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು,ಬಂಡೀಪುರ, ಗುಂಡ್ಲುಪೇಟೆ ಬಳಿಯ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಸೇನಾ ಅಧಿಕಾರಿಗಳ ಜತೆ ಚರ್ಚಿಸಿ, ಬೆಂಕಿ ನಂದಿಸಲು 4 ಸೇನಾ ಹೆಲಿಕಾಪ್ಟರ್‌ಗಳನ್ನು ಕಳುಹಿಸಿಕೊಡುವಂತೆ ಕೋರಲಾಗಿತ್ತು. ಸೇನಾ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಈಗಾಗಲೇ ಒಂದು ಹೆಲಿಕಾಪ್ಟರ್‌ ಕಳುಹಿಸಿದ್ದು, ಬೆಂಕಿ ನಂದಿಸುವ ಬಗ್ಗೆ ಕ್ರಮಕೈಗೊಳ್ಳಲಾಗಿದೆ ಎಂದರು.

ನೀಲಗಿರಿ ತೋಪಲ್ಲೂ ಅಗ್ನಿ
ನೆಲಮಂಗಲ:
ನೀಲಗಿರಿ ತೋಪು ಸೇರಿ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದೆ. ಬೆಂಗಳೂರು ಮಂಗಳೂರು ರಸ್ತೆಯಲ್ಲಿರುವ ತಾಲೂಕಿನ ಗಡಿ ಪ್ರದೇಶವಾದ ಕೊರಟಗೆರೆ ಗ್ರಾಮದ ಸಮೀಪದಲ್ಲಿರುವ ಅರಣ್ಯ ಪ್ರದೇಶ ಸೇರಿ ದುಬೈನಿವಾಸಿಯಾಗಿರುವ ಅಭಿ ಮತ್ತು ಜಾರ್ಜ್‌ ಅವರಿಗೆ ಸೇರಿದ ನೀಲಗಿರಿ ತೋಪು ಬೆಂಕಿಗಾಹುತಿಯಾಗಿದ್ದು ಸಾಕಷ್ಟು ನಷ್ಟ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಅಗ್ನಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಡಿಪುರ ಅಭಯಾರಣ್ಯದಲ್ಲಿ ಯಾರೋ ಹೊರಗಿನವರು ಬೆಂಕಿ ಹಚ್ಚಿರುವ ಶಂಕೆಯಿದೆ. ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ಬೆಂಕಿ ಅವಘದಲ್ಲಿ ಪ್ರಾಣಿಪಕ್ಷಿಗಳು ನಾಶವಾಗಿವೆ ಅನ್ನುವುದು ಸುಳ್ಳು. ಎಷ್ಟು ಅರಣ್ಯ ಪ್ರದೇಶ ಸುಟ್ಟುಹೋಗಿದೆ ಎನ್ನುವುದು ಇನ್ನೂ ಅಂದಾಜಿಲ್ಲ.
– ಸತೀಶ್‌ ಜಾರಕಿಹೊಳಿ, ಅರಣ್ಯ ಸಚಿವ

ಮೂರು ದಿನಗಳಿಂದ ಕಾಡು ಪ್ರಾಣಿಗಳು, ಮರಗಳು ಉರಿಯುತ್ತಿವೆ. ಬೆಂಕಿ ಬಿದ್ದ ತಕ್ಷಣ ಹೆಲಿಕಾಪ್ಟರ್‌ನಿಂದ ನೀರು ಹಾಕುವ ಕೆಲಸ ಮಾಡಬಹುದಿತ್ತು. ಆದರೆ, 3 ದಿನಗಳ ಬಳಿಕ ಈಗ ಸಿಎಂ ಹೆಲಿಕಾಪ್ಟರ್‌ ಮೂಲಕ ನೀರು ಹಾಕುವುದಾಗಿ ಹೇಳುತ್ತಿದ್ದಾರೆ.
– ಯಡಿಯೂರಪ್ಪ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next