Advertisement

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸಿಗೆ ಸತತ ಅಧ್ಯಯನ ಅಗತ್ಯ: ರುದ್ರಪ್ಪ

02:22 PM Dec 15, 2019 | Suhan S |

ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸತತ ಅಧ್ಯಯನ ಅಗತ್ಯ ಎಂದು ಎಸಿಪಿ ಎಂ.ಎನ್‌. ರುದ್ರಪ್ಪ ಹೇಳಿದರು.

Advertisement

ಕ್ಲಾಸಿಕ್‌ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ಕ್ಲಾಸಿಕ್‌ ಪದವಿ ಮಹಾವಿದ್ಯಾಲಯದಲ್ಲಿ ಬಿಎ, ಬಿಕಾಂ ಮತ್ತು ಬಿಎಸ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಮೂಲಗಳಿಂದ ಜ್ಞಾನವನ್ನು ಸಂಗ್ರಹಿಸಿಕೊಳ್ಳಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಮಾನವಾಗಿ ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್‌ ಸಂಸ್ಥೆಯ ಮುಖ್ಯ ಆಡಳಿತಾತ್ಮಕ ಸಂಯೋಜಕ ಐ.ಜಿ. ಚೌಗಲಾ ಮಾತನಾಡಿ, ಮಾನವ ಸಂಪನ್ಮೂಲ ದೇಶಕ್ಕೆ ಬಹು ಮೌಲ್ಯಯುತವಾಗಿರುವುದರಿಂದ ಗುಣಮಟ್ಟದ ಸೇವಾ ವರ್ಗ ಆಡಳಿತಕ್ಕೆ ಅಗತ್ಯವಿದೆ. ವಿದ್ಯಾರ್ಥಿ ದಿಶೆಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಯುವ ಜನಾಂಗ ಪಡೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ತರಬೇತಿ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಪೂರಕವಾಗಲಿದೆ ಎಂದು ಹೇಳಿದರು.

ಡಾ| ಆರ್‌.ವಿ. ಚಿಟಗುಪ್ಪಿ, ದೀಪಕ ಜೋಡಂಗಿ, ಕುಸುಮಾ ವೈ.ಎಸ್‌., ಪ್ರೊ| ಹೇಮಂತ ಕರ್ಜಗಿ ಇದ್ದರು. ಐಶ್ವರ್ಯ ದೊಡಮನಿ ಪ್ರಾರ್ಥಿಸಿದರು. ಡಾ| ಎಂ.ವೈ. ಸಾವಂತ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡ್ರ ನಿರೂಪಿಸಿದರು. ಪ್ರೊ| ವಿ.ಎಂ. ಕಾಲಾಳದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next