Advertisement

ಎಲ್ಲ ವರ್ಗದವರಿಗೂ ಸಹಾಯ ಮುಂದುವರಿಕೆ

01:35 PM Jul 12, 2020 | Suhan S |

ಕಲಬುರಗಿ: ಕೋವಿಡ್ ನಿಯಂತ್ರಣ ಹಾಗೂ ಸಂಕಷ್ಟಕ್ಕೆ ಒಳಗಾಗಿರುವ ಎಲ್ಲ ವರ್ಗದವರಿಗೆ ಸಹಾಯ ಕಲ್ಪಿಸುವ ಕಾರ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮುಂದುವರಿದಿದೆ ಎಂದು ಸಂಸದ ಡಾ.ಉಮೇಶ ಜಾಧವ್‌ ತಿಳಿಸಿದ್ದಾರೆ.

Advertisement

ನಾಲ್ಕು ತಿಂಗಳಿನಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ತಮ್ಮೊಂದಿಗೆ ಇದ್ದು, ಸಾಕಷ್ಟು ಸಹಾಯ ಮಾಡುತ್ತಿದೆ. ಹೀಗಾಗಿ ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ.

ಆತ್ಮನಿರ್ಭರ್‌ ಭಾರತ್‌ ಕಾರ್ಯಕ್ರಮದ ಮುಖಾಂತರ ಆರ್ಥಿಕ, ಮೂಲ ಸೌಕರ್ಯ, ಉತ್ಪಾದನೆ ಹಾಗೂ ಬೇಡಿಕೆಗಳನ್ನೊಳಗೊಂಡಂತೆ ದೇಶದ 130 ಕೋಟಿ ಜನತೆಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಮೋದಿ ಸರಕಾರ ಸ್ವಯಂ ಅವಲಂಬಿತ ಭಾರತ’ದ ನಿರ್ಮಾಣಕ್ಕೆ ಪಣತೊಟ್ಟಿದೆ. ಇದಲ್ಲದೇ ದೇಶದ ಎಲ್ಲಾ ರಾಜ್ಯಗಳಿಗೆ ಕೋವಿಡ್ ನ ಈ ಸಂಕಷ್ಟದ ಸಂದರ್ಭದಲ್ಲಿ ಹಣದ ಅಡಚಣೆ ನೀಗಿಸಲು ರಾಜ್ಯ ಸರ್ಕಾರಗಳ ಸಾಲದ ಮಿತಿಯನ್ನು ಶೇ 3 ರಿಂದ 5 ಕ್ಕೆ ಹೆಚ್ಚಿಸುವುದರ ಮುಖಾಂತರ ಹೆಚ್ಚುವರಿ ಪಡೆಯಲು ಅನುಕೂಲ ಮಾಡಿಕೊಟ್ಟಿದೆ. ದೇಶದ ಗಡಿಯಲ್ಲಿ ತಂಟೆ ಮಾಡುತ್ತಿರುವ ಚೀನಾಗೆ ಮೋದಿಜಿ ಸರಕಾರ ತಕ್ಕ ಪಾಠ ಕಲಿಸಿ ಜಾಗತಿಕ ಮಟ್ಟದಲ್ಲಿ ದೇಶದ ಘನತೆ ಹೆಚ್ಚಿಸಿದೆ.

ಹೀಗೆ ಕೇಂದ್ರ ಸರ್ಕಾರವು ದೇಶದ 130 ಕೋಟಿ ಜನತೆಯ ಸಂಕಷ್ಟದಲ್ಲಿ ಭಾಗಿಯಾಗಿದ್ದು, ಜತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರವೂ ಕೂಡಾ ರೈತರಿಗೆ, ನೇಕಾರರಿಗೆ, ಮೀನುಗಾರರಿಗೆ, ಕಟ್ಟಡ ಕಾರ್ಮಿಕರಿಗೆ ಎಲ್ಲಾ ಕಾರ್ಮಿಕ ವರ್ಗದ ಬಂಧುಗಳಿಗೆ ಸಹಾಯ ಹಸ್ತವನ್ನು ನೀಡಿದ್ದು, ಜತೆಗೆ ರಾಜ್ಯದ ಎಲ್ಲ ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತ ರೇಷನ್‌ ವಿತರಿಸಿದ್ದು ಕೂಡಾ ಐತಿಹಾಸಿಕ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next