Advertisement
ಬದನಾಜೆ ಬದಿಯ ಮಿಂಚುಕಲ್ಲು ಗುಡ್ಡದ ಮಧ್ಯ ಒಂದು ಎಕರೆ ಪ್ರದೇಶ ಕುಸಿತವಾದ ಪರಿಣಾಮ 500ಕ್ಕೂ ಅಧಿಕ ಮರಗಳು ಕೊಚ್ಚಿ ಬಂದಿವೆ.ಇದರ ಪರಿಣಾಮ ಕುಕ್ಕಾವು ಸೇತುವೆ ಸಂಪರ್ಕ ರಸ್ತೆ ಕೊಚ್ಚಿಹೋಗಿದೆ. ಕೂಡಬೆಟ್ಟು ಹಳ್ಳ, ಏಳುವರೆ ಹಳ್ಳದಿಂದ ಮರಗಳ ರಾಶಿ ಹರಿದು ಬಂದ ಹಿನ್ನೆಲೆಯಿಂದ ಶುಕ್ರವಾರ ಮಧ್ಯಾಹ್ನ ಸೇತುವೆ ಸಂಪರ್ಕ ಕಡಿತವಾಗಿದೆ.
ಕೂಡಬೆಟ್ಟು ದೇವಸ್ಥಾನದಲ್ಲಿ ವರಮಹಾಲಕ್ಣ್ಮಿ ಪೂಜೆಗೆ ಬಂದ 100 ಮಂದಿ ಜಲಾವೃತದಿಂದ ಸಿಲುಕಿದ್ದರು. ಬಿ.ಕೆ.ಪರಮೇಶ್ವರ್ ರಾವ್ ತಂಡ
ಅಮೈ, ಕಕ್ಕೆನೇಜಿ, ಕಬ್ಬಿನ ಹಿತ್ತಿಲು ಸುತ್ತುವರಿದು ಮಧ್ಯಾಹ್ನ 3.30ಕ್ಲೆ ಹೊರಟು ರಾತ್ರಿ 9.30ಕ್ಕ ಮನೆ ತಲುಪಿದ್ದಾರೆ. ಈ ರಣ ಭೀಕರ ಮಳೆಯಿಂದಾಗಿ ಬೆಳ್ತಂಗಡಿ ಊರಿಗೆ ಊರು ಸ್ಮಶಾನ ಮೌನ ಆವರಿಸಿದೆ. ಬೆಟ್ಟದ ಸಾಲುಗಳು ಭಿರುಕು ಬಿದ್ದಿದ್ದು, ಪಶ್ಚಿಮಘಟ್ಟ ತಪ್ಪಲ ನಿವಾಸಿಗಳು ಆತಂಕದಲ್ಲಿದ್ದಾರೆ. ತಾಲೂಕಿನ 10ಕ್ಕೂ ಹೆಚ್ಚು ಸೇತುವೆಗಳಿಗೆ ಹಾನಿಯಾಗಿದ್ದು, ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತವಾಗಿದೆ.
Related Articles
Advertisement
ಎಂಎಲ್ಸಿ ಹರೀಶ್ ಕುಮಾರ್ ಹಾಗೂ ಮಾಜಿ ಕೆ. ವಸಂತ ಬಂಗೇರ ಅವರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ನಾವೂರು, ಇಂದಬೆಟ್ಟು, ಕಿಲ್ಲೂರು, ಕಾಜೂರು, ಕುಕ್ಕಾವು, ಚಾರ್ಮಾಡಿ, ನೆರಿಯ, ಮುಂಡಾಜೆ, ಪಜಿರಡ್ಕ ಮೊದಲಾದ ಕಡೆಗಳಿಗೆ ಶಾಸಕ ಹರೀಶ ಪೂಂಜ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡುತ್ತಿದ್ದಾರೆ. ಶಾಸಕರೊಂದಿಗೆ ತಹಸೀಲ್ದಾರ್ ಗಣಪತಿ ಶಾಸ್ತ್ರೀ, ಇಒ ಕೆ.ಇ.ಜಯರಾಂ, ನೊಡೇಲ್ ಅಧಿಕಾರಿ ಶಿವಪ್ರಸಾದ್ ಅಜಿಲ, ಜಿಪಂ ಎಇಇ ಚೆನ್ನಪ್ಪ ಮೊಲಿಯಿ, ಮೆಸ್ಕಾಂ ಎಇಇ ಶಿವಶಂಕರ್ ಇದ್ದರು.ಅರೋಗ್ಯ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಪೋಲಿಸ್ ಇಲಾಖೆ ಇನ್ನಿತರ ಇಲಾಖೆಗಳವರು ಇದ್ದರು. ಸಾರ್ವಜನಿಕರಲ್ಲಿ ವಿಜ್ಞಾಪನೆ:
ಬೆಳ್ತಂಗಡಿ ತಾಲೂಕಿನಲ್ಲಾಗುತ್ತಿರುವ ಭೀಕರ ಮಳೆಯಿಂದಾಗಿ ಹಾನಿಗೀಡಾದ ಸಂತ್ರಸ್ತರಿಗೆ ದಿನ ಬಳಕೆಯ ಅಗತ್ಯ ವಸ್ತುಗಳು, ಮಹಿಳೆಯರ ಮಕ್ಕಳ ಪುರುಷರ ಉಡುಪುಗಳು, ಆಹಾರ ಪೊಟ್ಟಣಗಳು ತುರ್ತು ಅಗತ್ಯವಿದ್ದು, ನೀಡಲಿಚ್ಚಿಸುವಂತಹ ದಾನಿಗಳು ಬೆಳ್ತಂಗಡಿಯ ಮುಖ್ಯ ರಸ್ತೆಯಲ್ಲಿರುವ “ಶ್ರಮಿಕ, ಶಾಸಕರ ಕಚೇರಿ”ಗೆ ತಲುಪಿಸಬೇಕಾಗಿ ವಿನಂತಿ.
ಸಂಪರ್ಕ: 9901212207