Advertisement

ಕೊಚ್ಚಿ ಹೋದ ಕಾಫಿ ತೋಟ; ಕುಸಿದ ಬಿದ್ದ ಮನೆ; ಮಲೆನಾಡಿನ ಜನಜೀವನ ಅಸ್ತವ್ಯಸ್ತ

03:36 PM Jul 11, 2022 | Team Udayavani |

ಚಿಕ್ಕಮಗಳೂರು: ಮಲೆನಾಡು ಈಗ ಮಳೆನಾಡಾಗಿದೆ. ಕೆಲವು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಗೆ ಚಿಕ್ಕಮಗಳೂರು ಜಿಲ್ಲೆ ತತ್ತರಿಸಿದೆ. ಮಳೆಯ ಕಾರಣದಿಂದ ಗುಡ್ಡ ಕುಸಿತವಾಗುತ್ತಿದ್ದು, ಮನೆಗಳು, ತೋಟಗಳು ಅಪಾಯದಲ್ಲಿದೆ.

Advertisement

ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಗುಡ್ಡ ಕುಸಿತವಾಗುತ್ತಿದ್ದು, ರಾಶಿ ರಾಶಿ ಮಣ್ಣು, ಬಂಡೆಕಲ್ಲು, ಮರಗಳು ಉರುಳುತ್ತಿವೆ. ಈ ಸಾಲಿನ ಮೂರು ನಾಲ್ಕು ಕಡೆ ಗುಡ್ಡ ಕುಸಿದಿದೆ. ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತದಿಂದ ಪ್ರವಾಸಿಗರಿಗೆ ಕೆಲವೊಂದು ನಿರ್ಬಂಧ ಹೇರಲಾಗಿದ್ದು, ಗಿರಿ ರಸ್ತೆಗೆ ನಿತ್ಯ 300 ವಾಹನಗಳಿಗೆ ನಿತ್ಯ ಅವಕಾಶ ನೀಡಲಾಗಿದೆ.

ಕೊಚ್ಚಿ ಹೋದ ತೋಟ: ವರುಣನ ಆರ್ಭಟಕ್ಕೆ ಕಾಫಿ ತೋಟ ಕೊಚ್ಚಿ ಹೋದ ಘಟನೆ ಚಿಕ್ಕಮಗಳೂರು ತಾಲೂಕಿನ ಕಸ್ಕೆ ಗ್ರಾಮದಲ್ಲಿ ನಡೆದಿದೆ. ಧರ್ಮೇಗೌಡ ಎಂಬುವರಿಗೆ ಸೇರಿದ ತೋಟ ನಾಶವಾಗಿದೆ. ಸುಮಾರು 2000 ಹೆಚ್ಚು ಕಾಫಿ ಗಿಡ ಮಣ್ಣು ಪಾಲಾಗಿದೆ.

ಇದನ್ನೂ ಓದಿ:ಭಾರೀ ಮಳೆ, ಪ್ರವಾಹಕ್ಕೆ ತತ್ತರಿಸಿ ಹೋದ ಗುಜರಾತ್,ಜನಜೀವನ ಅಸ್ತವ್ಯಸ್ತ; ಸಾವಿನ ಸಂಖ್ಯೆ ಏರಿಕೆ

Advertisement

ನಿನ್ನೆಯ ತನಕ ಸರಿಯಿದ್ದ ತೋಟ ಇಂದು ನಾಶವಾಗಿದ್ದು ಧರ್ಮೇಗೌಡರ ಆತಂಕಕ್ಕೆ ಕಾರಣವಾಗಿದೆ. ಗುಡ್ಡದ ಮಣ್ಣು ತೋಟಕ್ಕೆ ನುಗ್ಗಿದ್ದು,ಸುಮಾರು 300 ಮೀಟರ್ ದೂರದವರೆಗೆ ಕಾಫಿ ಬೆಳೆ ಕೊಚ್ಚಿ ಹೋಗಿದೆ.

ಕುಸಿದ ಮನೆ: ಆವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಮಕ್ಕಿ ಗ್ರಾಮದಲ್ಲಿ ಗಾಳಿ ಮಳೆಗೆ ಮನೆಯೊಂದು ಏಕಾಏಕಿ‌ ಸಂಪೂರ್ಣವಾಗಿ ಕುಸಿದಿದೆ. ಶಬ್ದ ಕೇಳುತ್ತಿದ್ದಂತೆ ಮನೆಯವರು ಹೊರ ಬಂದಿದ್ದಾರೆ. ಮನೆಯವರು ಹೊರಬರುತ್ತಿದ್ದಂತೆ ಮನೆ ಕುಸಿದು ಬಿದ್ದಿದೆ.

ಬೆಳೆಗಳು ನೆಲಸಮ: ವರುಣಾರ್ಭಟಕ್ಕೆ ಅರೆನೂರು ಗ್ರಾಮದಲ್ಲಿ 100 ಅಡಿ ಎತ್ತರದಿಂದ ಗುಡ್ಡ ಕುಸಿದಿದೆ. ಭು ಕುಸಿತದ ಆರ್ಭಟಕ್ಕೆ ಕಾಫಿ, ಅಡಿಕೆ, ಮೆಣಸು ಬೆಳೆ ಸರ್ವನಾಶವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next