Advertisement

ಹಂಪಿಯಲ್ಲಿ ಮುಂದುವರೆದ ಪ್ರವಾಹ ಸ್ಥಿತಿ: ಸ್ಮಾರಕರಗಳು ಮಳುಗಡೆ

05:55 PM Jul 15, 2022 | Team Udayavani |

ಹೊಸಪೇಟೆ: ಹಂಪಿಯಲ್ಲಿ ಪ್ರವಾಹ ಸ್ಥಿತಿ ಶುಕ್ರವಾರ ಕೂಡ ಮುಂದುವರೆದಿದ್ದು, ನದಿತಟದ ಸ್ಮಾರಕಗಳು ಸಂಪೂರ್ಣ ಮುಳಗಿದರೆ, ಇನ್ನೂ ನದಿ ಬಳಿ ಇರುವ ಬಾಳೆ, ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿದೆ.

Advertisement

ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ನದಿ ತೀರದ ಕೆಲ ಸ್ಮಾರಕಗಳು, ಮುಳಗಡೆಯಾಗಿ ಕಾಣದಂತಾಗಿವೆ. ಸ್ನಾನಘಟ್ಟ, ವೈದಿಕ ಮಂಟಪ, ಚಕ್ರತೀರ್ಥ ಪ್ರದೇಶ, ಕೋದಂಡರಾಮ ದೇವಾಲಯದ ಆವರಣ, ಪುರಂದರ ದಾಸರ ಮಂಟಪ ವಿಜಯನಗರ ಅರಸರ ಕಾಲದ ಹಳೆ ಸೇತುವೆಯ ಬೃಹತ್ ಕಲ್ಲಿನ ಕಂಬಗಳು ಸಂಪೂರ್ಣ ನೀರಿನಲ್ಲಿ ಮುಳಗಿವೆ.

ಹಂಪಿಯ ಸ್ನಾನಘಟ್ಟಕ್ಕೆ ಹೊಂದಿಕೊಂಡಿರುವ ಬಾಳೆ ತೋಟ ಮತ್ತು ವಿರೂಪಾಕ್ಷೇಶ್ವರ ದೇವಾಲಯದ ಪಕ್ಕದಲ್ಲಿ ಮನ್ಮುಖ ಹೊಂಡದಲ್ಲಿ ನದಿ ನೀರು ಸಂಗ್ರಹವಾಗಿದೆ.

ನದಿ ತೀರದಲ್ಲಿ ಜನಸಂಚಾರವನ್ನು ನಿಷೇಧಿಸಲಾಗಿದೆ. ಪ್ರವಾಹ ಸ್ಥಿತಿ ತಗ್ಗುವವರಿಗೂ ಪುರೋಹಿತರು, ನದಿ ತೀರದಲ್ಲಿ ವೈದಿಕ, ಕರ್ಮ ವಿಧಿ-ವಿಧಾನಗಳನ್ನು ನಡೆಸದಂತೆ ಸೂಚಿಸಲಾಗಿದೆ. ರಾಮಲಕ್ಷ್ಮಣ ದೇವಾಲಯದ ಮುಂಭಾಗದಲ್ಲಿರುವ ಸುಗ್ರೀವ ಗುಹೆ, ಸೀತೆ ಸೆರಗು ಬಂಡೆಗಲ್ಲಿನ ಮೇಲೆ ನದಿಯ ನೀರು ಹರಿದು ಮನಮೋಹಕ ದೃಶ್ಯ ಕಣ್ಮನ ಸೆಳೆಯುತ್ತಿದೆ.

ಇದನ್ನೂ ಓದಿ: ಐನೆಕಿದು: ರಸ್ತೆಯಲ್ಲಿ ಹೂತು ಹೋದ ಕೆಎಸ್‌ಆರ್‌ಟಿಸಿ ಬಸ್‌

Advertisement

ತಾಲ್ಲೂಕಿನ ವೆಂಕಟಾಪುರ, ಬುಕ್ಕಸಾಗರ ಗ್ರಾಮದ ನದಿ ಅಂಚಿನ ಬಾಳೆ ತೋಟಗಳಿಗೆ ನೀರು ಒಕ್ಕಿದೆ. ನದಿ ತೀರಕ್ಕೆ ಹೋಗದಂತೆ ಹಂಪಿ ಕೊಟ್ಟೂರು ಸ್ವಾಮಿ ಮಠದ ಹತ್ತಿರ ಬ್ಯಾರಿಕೇಡ್ ಅಳವಡಿಸಲಾಗಿದೆ. ಪ್ರವಾಹದ ಹಿನ್ನೆಲೆಯಲ್ಲಿ ಹಂಪಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಒಂದೊಮ್ಮೆ ಜಲಾಶಯದಿಂದ ನದಿಗೆ ಮತ್ತಷ್ಟು ನೀರು ಹರಿದು ಬಂದಲ್ಲಿ ಹಂಪಿಯ ವಿರೂಪಾಕ್ಷ ದೇವಾಲಯದ ಪಕ್ಕದಲ್ಲಿರುವ ಜನತಾ ಪ್ಲಾಟ್‌ಗಳಿಗೂ ನೀರು ನುಗ್ಗುವ ಸಾಧ್ಯತೆಯಿದೆ. ಹೀಗಾಗಿ ಅಲ್ಲಿನ ನಿವಾಸಿಗಳನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಹಂಪಿ ಜೈನ್ ಮಂದಿರದಲ್ಲಿ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಸ್ಥಳದಲ್ಲಿ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next