Advertisement

ಮಾಸ್ಕ್ ರಹಿತರಿಗೆ ಮುಂದುವರಿದ ದಂಡ

12:21 AM Jul 03, 2020 | Team Udayavani |

ಉಡುಪಿ/ಕುಂದಾಪುರ: ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌-19 ವೈರಸ್‌ ತಡೆ ಸಂಬಂಧ ಮಾಸ್ಕ್ ಧರಿಸುವಂತೆ ನಗರದಲ್ಲಿ ಗುರುವಾರ ನಗರಸಭೆ ಅಧಿಕಾರಿಗಳು ಜಾಗೃತಿ ಮೂಡಿಸಿದರು.

Advertisement

ನಗರದ ಕೆಲವು ಆಟೋ ರಿಕ್ಷಾ ನಿಲ್ದಾಣಗಳಲ್ಲಿ ಆಟೋ ಚಾಲಕರು ಮಾಸ್ಕ್ ಧರಿಸದೆ ಗುಂಪಾಗಿ ಮಾತನಾಡುತ್ತಿರು ವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಂತಹ ಚಾಲಕರಿಗೆ ಎಚ್ಚರಿಕೆ ನೀಡ ಲಾಯಿತು. ಇದನ್ನು ಪರಿಶೀಲಿಸಿದ ಅಧಿಕಾರಿ ಗಳು ಆಟೋ ರಿಕ್ಷಾ ಒಕ್ಕೂಟದ ಗಮನಕ್ಕೂ ತಂದರು. ನಗರದ ಸಿಟಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ವಲಸೆ ಕಾರ್ಮಿಕರನ್ನು ವಾಪಸ್‌ ಮನೆಗೆ ಕಳುಹಿಸಿ ಮಾಸ್ಕ್ ಧರಿಸಿ ಬರುವಂತೆ ಎಚ್ಚರಿಕೆ ನೀಡಲಾಯಿತು. ಗುರುವಾರ 5 ಮಂದಿಗೆ ದಂಡ ವಿಧಿಸಲಾಗಿದ್ದು, ಒಟ್ಟು 500 ರೂ. ದಂಡ ಸಂಗ್ರಹಿಸಲಾಗಿದೆ.

ಕುಂದಾಪುರ
ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಗುರುವಾರ 6 ಜನರಿಗೆ ತಲಾ 100 ರೂ.ಗಳಂತೆ ಒಟ್ಟು 600 ರೂ. ದಂಡ ವಿಧಿಸಲಾಗಿದೆ.

ಕಾರ್ಕಳ
ಕಾರ್ಕಳ ನಗರ ಠಾಣೆ ಹಾಗೂ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ, ಗ್ರಾಮೀಣ ಭಾಗದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿರುವವರ ಬಗ್ಗೆ ಪೊಲೀಸರು ನಿಗಾವಹಿಸಿ ಎಚ್ಚರಿಕೆ ನೀಡಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next