Advertisement

ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿ: ಧ್ರುವನಾರಾಯಣ್ ಮನವಿ

06:41 PM Aug 08, 2022 | Team Udayavani |

ಮೈಸೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಮಾಡಿದ ಕ್ಷೇತ್ರದಿಂದಲೇ ಮತ್ತೊಮ್ಮೆ ಸ್ಪರ್ಧಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಮನವಿ ಮಾಡಿದ್ದಾರೆ.

Advertisement

75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಆರ್ ಧ್ರುವನಾರಾಯಣ್, ವರುಣಾ ಕ್ಷೇತ್ರದ ಜನರು ಸಿದ್ದರಾಮಯ್ಯ ಅವರನ್ನು ಬಯಸುತ್ತಿದ್ದಾರೆ. ನಾನು ಸಹ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ.ಮುಂದಿನ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದರು. ಈ ವೇಳೆ ವರುಣಾ ಕ್ಷೇತ್ರದ ಜನರು ಸಿದ್ದರಾಮಯ್ಯ ಪರವಾಗಿ ಜೈಕಾರ ಕೂಗಿದರು. ಧ್ರುವನಾರಾಯಣ್ ಮಾತು ಕೇಳಿ ಸಿದ್ದರಾಮಯ್ಯ ಅವರು ನಸು ನಕ್ಕರು.

ಮೊದಲು, ಮುಂದಿನ ಚುನಾವಣೆಯಲ್ಲಿ ಡಾ. ಯತೀಂದ್ರ ಅವರನ್ನು ಮತ್ತೆ ಗೆಲ್ಲಿಸಿ ಎಂದು ಭಾಷಣದಲ್ಲಿ ಆರ್ ಧ್ರುವನಾರಾಯಣ್ ಮನವಿ‌‌ ಮಾಡಿದಾಗ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತ ಪಡಿಸಿ, ಮುಂದಿನ ಬಾರಿ ಸಿದ್ದರಾಮಯ್ಯ ಅವರೇ ಬರಲಿ‌ ಎಂದು ಘೋಷಣೆ ಕೂಗಿದರು.

74 ವರ್ಷ ತುಂಬಿ 75
ಸಿದ್ದರಾಮಯ್ಯನವರಿಗೆ 74 ವರ್ಷ ತುಂಬಿ 75 ವರ್ಷ ಎಂದು ಹೇಳಿದ ಧ್ರುವನಾರಾಯಣ್ ಹೇಳಿದ್ದು, ತಪ್ಪನ್ನು ವೇದಿಕೆಯಲ್ಲೇ ಸರಿಪಡಿಸಿದ ಸಿದ್ದರಾಮಯ್ಯ‌ ಅವರು 75 ತುಂಬಿ 76 ವರ್ಷ ಎಂದು ಸ್ಪಷ್ಟಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next