Advertisement

ಕುಡಿಯುವ ನೀರಿನ ಬಾವಿಗೆ ಒಳಚರಂಡಿಯ ಕಲುಷಿತ ನೀರು

03:53 PM May 17, 2023 | Team Udayavani |

ಮಾಗಡಿ: ತಿರುಮಲೆ ಮುಖ್ಯರಸ್ತೆಯಲ್ಲಿರುವ ಹಾಲು ಅಪ್ಪಸ ಯ್ಯನ ಕುಡಿಯುವ ನೀರಿನ ಬಾವಿಗೆ ಒಳಚರಂಡಿ ಕಲುಷಿತ ಸೇರುತ್ತಿದ್ದು, ವಿನಾಶದ ಹಂಚಿನಲ್ಲಿದೆ. ಅದನ್ನು ಉಳಿಸಿ ಸಂರಕ್ಷಿಸುವಂತೆ ಪುರ ನಾಗರಿಕರು ಪುರಸಭೆ ಮುಖ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Advertisement

ಪಟ್ಟಣದ ತಿರುಮಲೆ ಮುಖ್ಯರಸ್ತೆಯಲ್ಲಿ ಪುರಾತನವಾದ ಹಾಲು ಅಪ್ಪಸಯ್ಯನ ಕುಡಿಯುವ ಸಿಹಿ ನೀರು ಬಾವಿಯಿದ್ದು, ಈ ಬಾವಿಯ ಸಿಹಿ ನೀರು ತಿರುಮಲೆ ಗ್ರಾಮದ ಜನತೆ ಬಾಯಾರಿಕೆ ಇಂಗಿಸುತ್ತಾ ಬಂದಿದೆ. ಈ ನೀರು ಕುಡಿದರೆ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಸಹ ಕಂಡುಬರುತ್ತದೆ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.

ತಿರುಮಲೆಯ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಹುಲಿ ಹಾಲಿನ ಮೇವು, ದೇವತಾ ಮನಷ್ಯ ಸಿನಿಮಾ ಚಿತ್ರೀಕರಣಕ್ಕೆ ಮೇರು ನಟ ಡಾ.ರಾಜ್‌ಕುಮಾರ್‌ ಸೇರಿದಂತೆ ಅನೇಕ ನಟರು ಈ ಬಾವಿ ನೀರು ಕುಡಿದು ಆನಂದಿಸಿದ್ದರು. ಸಂಜೆ ವಾಪಸ್ಸು ಮನೆಗೆ ತೆರಳುವಾಗ ಬಿಂದಿಗೆ, ಕ್ಯಾನ್‌ಗಳಲ್ಲಿ ಈ ಸಿಹಿ ನೀರು ಬಾವಿಯಿಂದ ನೀರು ತೆಗೆದು ಕೊಂಡು ಹೋಗುತ್ತಿದ್ದರು. ಅಷ್ಟೊಂದು ಸಿಹಿಯಾಗಿ ನೀರು ಇತ್ತು. ಈ ನೀರು ಕುಡಿದ ಜನರಲ್ಲಿ ಕರಳು ಬೇನೆ ರೋಗ ಗುಣಮುಖವಾಗುತ್ತಿತ್ತು ಎಂಬುದು ಹಿರಿಯ ನಾಗರಿಕರು ಹೇಳುತ್ತಿದ್ದರು.

ತಿರುಮಲೆ ಗ್ರಾಮದ ನಿವಾಸಿ ಅಪ್ಪಸಯ್ಯ ಎಂಬುವರು ನಾಟಿ ಹಸುವಿನ ಹಾಲು ಮಾರಾಟ ಮಾಡಿ ಸಂಗ್ರಹಿಸಿದ್ದ ಹಣದಲ್ಲಿ ಈ ಕುಡಿಯುವ ನೀರಿನ ಬಾವಿಯನ್ನು ಕಟ್ಟಿಸಿ ಗ್ರಾಮದ ಜನರಿಗೆ ಸಮರ್ಪಣೆ ಮಾಡಿದ್ದರು. ಹಾಲು ಮಾರಾಟ ಮಾಡಿ ಬಂದಂತ ಹಣದಲ್ಲಿ ಕಟ್ಟಿಸಿದ ಈ ಬಾವಿ ನೀರು ಹಾಲಿನಷ್ಟೇ ತಿಳಿಯಾಗಿರುತ್ತದೆ. ನಿಜಕ್ಕೂ ಈ ನೀರು ಕುಡಿದಷ್ಟು ಮನಸ್ಸಿಗೆ ಆನಂದವಾಗುತ್ತಿತ್ತು ಎಂಬುದು ತಿರುಮಲೆ ಗೋವಿಂದರಾಜು ಅವರ ಅನಿಸಿಕೆಯಾಗಿದೆ.

ಬಹುತೇಕ ಮಂದಿಗೆ ಉಪಯೋಗ: ಕಳೆದ 50 ವರ್ಷಗಳ ಹಿಂದಿ ನಿಂದಲೂ ಈ ಸಿಹಿ ನೀರು ಬಾವಿಯಿದ್ದು, ತಿರುಮಲೆ, ಹೊಸಪೇಟೆ, ಎನ್‌ಇಎಸ್‌ ಬಡಾವಣೆ ಮಾಗಡಿ ಪಟ್ಟಣದ ಬಹುತೇಕ ಮಂದಿ ಪ್ರತಿನಿತ್ಯ ಹಗಲುರಾತ್ರಿ ಎನ್ನದೆ ಈ ಬಾವಿಯಿಂದಲೇ ಕುಡಿಯುವ ನೀರನ್ನು ಕೊಂಡೊಯ್ಯುತ್ತಿದ್ದರು. ಪುರಸಭೆ ಕೊಳವೆಬಾವಿ, ಮಂಚ ನಬೆಲೆ ಜಲಾಶಯದ ನೀರು ಪುರ ಜನರಿಗೆ ಕೊಟ್ಟ ಮೇಲೆ ಈ ಬಾವಿ ನೀರು ಬಳಕೆ ಕಡಿಮೆಯಾಗುತ್ತಾ ಬಂತು. ಆದರೂ, ಕೆಲವರು ಮಾತ್ರ ಈ ನೀರು ಕುಡಿದರೆ ಅವರಿಗೆ ಸಮಾಧಾನ. ಹೀಗಾಗಿ ಈ ಬಾವಿ ನೀರನ್ನೇ ಬಳಸುತ್ತಿದ್ದಾರೆ.

Advertisement

ಮೂಗು ಮುಚ್ಚಿಕೊಂಡು ಸಂಚಾರ: ಆದರೆ ಈಗ ಈ ಬಾವಿ ಪ ಕ್ಕ ದಲ್ಲಿಯೇ ಒಳಚರಂಡಿ ಕೊಳವೆ ಹಾದು ಹೋಗಿದ್ದು, ಆಕಷ್ಮಿಕವಾಗಿ ಪೈಪ್‌ ಒಡೆದರೆ ಅಥವಾ ಕಟ್ಟಿಕೊಂಡರೆ ಮ್ಯಾನ್‌ ಹೋಲ್‌ ಮೂ ಲ ಕ ಕಲುಷಿತ ನೀರು ರಸ್ತೆ ಮೇಲೆಯೇ ಹರಿ ಯತ್ತದೆ. ರಸ್ತೆ ಮಧ್ಯೆ ಯೇ ಕಲುಷಿತ ನೀರು ನಿಂತಿರುವುದರಿಂದ ರಸ್ತೆಯಲ್ಲಿ ಸಂಚ ರಿ ಸುವ ನಾಗರಿಕರು, ಪ್ರಯಾಣಿಕರು ಈ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸಬೇಕಿದೆ. ಬಹುಮುಖ್ಯವಾಗಿ ಈ ಸಿಹಿ ನೀರನ್ನು ಕುಡಿಯುತ್ತಿದ್ದ ಮಂದಿ ಸಹ ಬಾವಿಗೆ ಬರು ವುದನ್ನೇ ನಿಲ್ಲಿಸಿದ್ದಾರೆ. ಏಕೆಂದರೆ ಮ್ಯಾನ್‌ಹೋಲ್‌ನಿಂದ ಹೊರ ಬರುವ ಕಲುಷಿತ ನೀರು ಬಾವಿಗೆ ಇಂಗುತ್ತಿದ್ದು, ಬಾವಿ ನೀರು ಸಹ ಕಲುಷಿತಗೊಂಡಿದೆ.

ಪಟ್ಟಣದ ತಿರುಮಲೆ ಸಿಹಿ ನೀರು ಬಾವಿ ಬಳಿ ಮ್ಯಾನ್‌ಹೋಲ್‌ ತುಂಬಿ ಮೇಲೆ ಹರಿಯು ತ್ತಿದ್ದನ್ನು ಪುರಸಭಾ ವತಿಯಿಂದ ತೆರವುಗೊಳಿಸಲಾಗಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಂಡಿದ್ದೇವೆ. – ವಿಜಯಾರೂಪೇಶ್‌, ಪುರಸಭಾ ಅಧ್ಯಕ್ಷೆ

– ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next