Advertisement

ಕಂಟೈನ್ಮೆಂಟ್‌ ಜೋನ್‌ 30ರ ವರೆಗೆ ವಿಸ್ತರಣೆ

08:03 AM Jun 03, 2020 | Suhan S |

ಕೊಪ್ಪಳ: ಭಾರತ ಗೃಹ ಇಲಾಖೆ ಕೋವಿಡ್‌ -19 ಸೋಂಕು ಹರಡದಂತೆ ನಿಯಂತ್ರಿಸಲು ಕಂಟೈನ್ಮೆಂಟ್‌ ವಲಯವನ್ನ ಜೂ.30ರ ವರೆಗೂ ವಿಸ್ತರಿಸಿದೆ. ಕಂಟೈನ್ಮೆಂಟ್‌ ಜೋನ್‌ ವ್ಯಾಪ್ತಿಯಲ್ಲಿ ಪ್ರಯಾಣ ಮಾಡುವ ಜನರು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಎಂದು ಡಿಸಿ ಸುನೀಲ್‌ ಕುಮಾರ ತಿಳಿಸಿದ್ದಾರೆ.

Advertisement

ಮಹಾರಾಷ್ಟ್ರದಿಂದ ಆಗಮಿಸಿದ ಸಾರ್ವಜನಿಕರು ರೋಗ ಲಕ್ಷಣ ಇಲ್ಲದಿದ್ದಲ್ಲಿ ಅವರು 7 ದಿನ ಸಾಂಸ್ಥಿಕ ಕ್ವಾರೆಂಟೈನ್‌, 7 ದಿನ ಮನೆಯಲ್ಲೇ ಕ್ವಾರೆಂಟೈನ್‌ನಲ್ಲಿ ಇರಬೇಕು. ಗರ್ಭಿಣಿ, 10 ವರ್ಷದೊಳಗಿನ ಮಕ್ಕಳು, 60 ವರ್ಷದ ಮೇಲ್ಮಟ್ಟ ವ್ಯಕ್ತಿ, 60 ವರ್ಷ ಮೇಲ್ಪಟ್ಟ ವ್ಯಕ್ತಿಗಳು, ಗಂಭೀರ ಖಾಯಿಲೆಯಿಂದ ಬಳಲುವ ವ್ಯಕ್ತಿಗಳು, ಅಪಾಯದ ಸ್ಥಿತಿಯಲ್ಲಿರುವ ವ್ಯಕ್ತಿಗಳು ಜಾಗೃತರಾಗಿರಬೇಕು. ಕಂಟೈನ್ಮೆಂಟ್‌ ಜೋನ್‌ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅನ್ಯ ರಾಜ್ಯದಿಂದ ಆಗಮಿಸಿದ ಜನರು ಜಿಲ್ಲೆಗೆ ಆಗಮಿಸಿದಲ್ಲಿ ಕೂಡಲೇ ಸಂಬಂಧಿಸಿದ ತಾಪಂ ಇಒ, ತಾಲೂಕು ವೈದ್ಯಾಧಿಕಾರಿ, ತಹಶೀಲ್ದಾರ್‌, ಗ್ರಾಮ ಲೆಕ್ಕಾಧಿಕಾರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಬೇಕು. ಇದಕ್ಕಾಗಿ ಗ್ರಾಮೀಣಕ್ಕೆ ಹರೀಶ ಜೋಗಿ ಮೊ: 9035129484, ನಗರಕ್ಕೆ ಸಿದ್ರಾಮೇಶ್ವರ ಮೊ: 9606729144 ಅವರನ್ನು ಜಿಲ್ಲಾ ನೋಡಲ್‌ ಅಧಿ ಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next