Advertisement

ಕಾರನ್ನೇ ಎರಡು ಕಿ.ಮೀ ದೂರ ಎಳೆದೊಯ್ದ ಟ್ರಕ್ : ವಿಡಿಯೋ ನೋಡುವಾಗಲೇ ಮೈ ಜುಂ ಅನ್ನುತ್ತೆ

09:16 AM Sep 12, 2022 | Team Udayavani |

ಪುಣೆ : ಟ್ರಕ್ ವೊಂದು ಕಾರಿಗೆ ಢಿಕ್ಕಿ ಹೊಡೆದು ಕಾರನ್ನು ಬರೋಬ್ಬರಿ ಎರಡು ಕಿಲೋಮೀಟರ್ ದೂರ ಎಳೆದೊಯ್ದ ಘಟನೆ ಪುಣೆ-ಅಹ್ಮದ್‌ನಗರ ಹೆದ್ದಾರಿಯಲ್ಲಿ ಸಂಭವಿಸಿದೆ.

Advertisement

ಅದೃಷ್ಟವಶಾತ್ ಕಾರಿನಲ್ಲಿದ್ದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ, ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೋಡುವಾಗಲೇ ಮೈ ಜುಂ ಎನ್ನುತ್ತೆ.

ಘಟನೆ ಕಳೆದ ಶುಕ್ರವಾರ ನಡೆದಿದ್ದು ಕಾರಿನಲ್ಲಿ ನಾಲ್ವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು, ಈ ವೇಳೆ ಕಾರಿನ ಹಿಂಭಾಗಕ್ಕೆ ಟ್ರಕ್ ಢಿಕ್ಕಿ ಹೊಡೆದು ಸುಮಾರು ಎರಡು ಕಿಲೋಮೀಟರ್ ದೂರ ರಸ್ತೆಯಲ್ಲೇ ಎಳೆದೊಯ್ದಿದೆ, ಈ ದೃಶ್ಯವನ್ನು ಹೆದ್ದಾರಿ ಬದಿಯಲ್ಲಿ ನಿಂತಿದ್ದ ಜನರು ಕಂಡಿದ್ದು ಭಯಭೀತರಾಗಿದ್ದಾರೆ.

ಟ್ರಕ್ ಕಾರನ್ನು ಎಳೆದೊಯ್ಯುವ ವೇಳೆ ಕಾರಿನ ಚಕ್ರಗಳು ಸವೆದು ಬೆಂಕಿಯ ಕಿಡಿಗಳು ಹಾರುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ : ಬಿಜೆಪಿ ಶಾಸಕ ದಡೇಸಗೂರು ವಿಡಿಯೋ ಬಿಡುಗಡೆಗೆ ಕಾಂಗ್ರೆಸ್ ಸಿದ್ಧತೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next