ಬೆಂಗಳೂರು: ಭವಿಷ್ಯದಲ್ಲಿಯೂ ಕೊರೊನಾ ಹಾವಳಿ ಮುಂದುವರಿಯುವ ಮುನ್ಸೂಚನೆ ಇದ್ದು, ಸೋಂಕಿನ ಕೇಂದ್ರಬಿಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್)ವನ್ನು ಮತ್ತಷ್ಟು ಹೈಟೆಕ್ ಮಾಡಲು ಬಿಐಎಎಲ್ ನಿರ್ಧರಿಸಿದೆ. ಇದಕ್ಕಾಗಿ “ಕಾಂಟ್ಯಾಕ್ಟ್ಲೆಸ್ ವ್ಯವಸ್ಥೆ’ ಜಾರಿಗೆ ಉದ್ದೇಶಿಸಲಾಗಿದೆ.
ಲಾಕ್‌ಡೌನ್ ಪೂರ್ಣ ಗೊಂಡು ಜನಜೀವನ ಸಂಪೂರ್ಣವಾಗಿ ಸಹಜ ಸ್ಥಿತಿಗೆ ರಳಿದ ನಂತರ ಬಂದಿಳಿಯುವ ಪ್ರಯಾಣಿಕರು, ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬರುವ ನಿಲ್ದಾಣದ ಸಿಬ್ಬಂದಿ ಹಿತದೃಷ್ಟಿಯಿಂದ ಸಾಧ್ಯವಾದಷ್ಟು “ಟಚ್ ಪಾಯಿಂಟ್’ಗಳನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಇದರ ಭಾಗವಾಗಿ ಮೊದಲ ಬಾರಿಗೆ ಸೆನ್ಸಾರ್ ಆಧಾರಿತ ಟ್ಯಾಕ್ಟ್ಲೆಸ್ ವ್ಯವಸ್ಥೆ ಪರಿಚಯಿಸಲು ಸಿದಟಛಿತೆ ನಡೆದಿದೆ.
ಶೀಘ್ರದಲ್ಲೇ ಈ ಸೇವೆ ಆರಂಭವಾಗಲಿದೆ. ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಬಂದಿಳಿಯುವ ಅಥವಾಪ್ರವೇಶಿಸುವ ಏರ್‌ಬ್ರಿಡ್ಜ್ ಪ್ರವೇಶ, ಟ್ರಾಲಿ ಬ್ಯಾಗ್, ಸೆಕ್ಯುರಿಟಿ ಕೌಂಟರ್, ಟಿಕೆಟ್ ಕೌಂಟರ್, ಇಮಿಗ್ರೇಷನ್ ಕೌಂಟರ್, ವಾಷ್ ರೂಂ ಸೇರಿ ಹತ್ತಾರು ಕಡೆ ಟಚ್ ಪಾಯಿಂಟ್‌ಗಳು ನಿಲ್ದಾಣಗಳಲ್ಲಿ ಬರುತ್ತವೆ. ಜತೆಗೆ ಸಂವಹನ ಪ್ರಕ್ರಿಯೆಯೂ ಅಲ್ಲೆಲ್ಲಾ ನಡೆಯುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಕೊರೊನಾವೈರಸ್ ಸೋಂಕಿಗೆ ಇದು ಕಾರಣವಾಗಬಹುದು.
ಹೀಗಾಗಿ ಅಲ್ಲೆಲ್ಲಾ ಸಾಧ್ಯವಾದಷ್ಟು ಪ್ರಯಾಣಿಕರೊಂದಿಗಿನ ಸಂವಹನ ಕಡಿತ, ಟಚ್ ಪಾಯಿಂಟ್ ತಗ್ಗಿಸಲು ಕಾಂಟ್ಯಾಕ್ಟ್ ಲೆಸ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಅತ್ಯಂತ ಅನಿವಾರ್ಯ ಇದ್ದಲ್ಲಿ ಮಾತ್ರ ಭದ್ರತೆ ದೃಷ್ಟಿಯಿಂದ ಪ್ರಯಾಣಿಕರೊಂದಿಗೆ ಸಂವಹನ ನಡೆಸಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಬಿಐಎಎಲ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವಿದೇಶಿ ಪ್ರಯಾಣಿಕರೇ ಹೆಚ್ಚು: ಬಿಐಎಎಲ್ ನೀಡಿರುವ ಅಂಕಿ-ಅಂಶಗಳ ಪ್ರಕಾರ 2019ರ ಅಂತ್ಯಕ್ಕೆ 33.65 ದಶಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಹಿಂದಿನ ವರ್ಷಕ್ಕೆ ಅಂದರೆ 2018ಕ್ಕೆ ಹೋಲಿಸಿದರೆ ಶೇ.4.1 ಪ್ರಯಾಣಿಕರ ಸಂಖ್ಯೆಯಲ್ಲಿ ವೃದಿಟಛಿಯಾಗಿದೆ. ಅದರಲ್ಲೂ ವಿದೇಶಿ ಪ್ರಯಾಣಿಕರ ಸಂಖ್ಯೆ 4.27 ದಶಲಕ್ಷರಿಂದ 4.87 ದಶಲಕ್ಷ ತಲುಪಿದ್ದು, ಶೇ.14 ಏರಿಕೆ ಕಂಡುಬಂದಿದೆ.
ದೇಶೀಯ ವಿಮಾನಗಳ ಪ್ರಯಾಣಿಕರ ಸಂಖ್ಯೆ 28.05ರಿಂದ 28.78 ಏರಿಕೆಯಾಗಿದೆ. ಯೂರೋಪ್ ಸೇರಿ ವಿವಿಧೆಡೆ “ಕೋವಿಡ್-19′ ಹಾವಳಿ ಹೆಚ್ಚು ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಮುಂದಿನದಿನಗಳಲ್ಲಿ ವಿದೇಶಗಳಿಂದ ಬರುವವರ ಸಂಖ್ಯೆ ಸಹಜವಾಗಿ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚು ಭದ್ರತೆ, ಹೈಟೆಕ್ ವ್ಯವಸ್ತೆ ಅನುಕೂಲವಾಗಲಿದೆ.
ಸೆನ್ಸರ್ ಆಧಾರಿತ: ಸೆನ್ಸರ್ ಆಧಾರಿತ ವ್ಯವಸ್ಥೆಯಲ್ಲಿ ಪ್ರಯಾಣಿಕರು ಕೇವಲ ದ್ವಾರದಲ್ಲಿ ಹಾದುಹೋದರೆ ಅಥವಾ ಪ್ರಯಾಣ ಕುರಿತು ಪೂರಕ ದಾಖಲೆ ತೋರಿಸಿದರೆ ಅನುಮೋದನೆ ಆಗುವ ಹೈಟೆಕ್ ಸೌಲಭ್ಯ ಇದಾಗಿದೆ. ಇದರಿಂದ ಒಂದು ವೇಳೆ ಸೋಂಕಿತ ವ್ಯಕ್ತಿ ಇದ್ದರೂ, ಹರಡುವ ಸಾಧ್ಯತೆ ಕಡಿಮೆ. ದೇಶದ ಮೊದಲ 5 ನಿಲ್ದಾಣಗಳಲ್ಲಿ ಕೆಐಎಎಲ್ ಕೂಡಒಂದು. ಈ ಹಿನ್ನೆಲೆಯಲ್ಲಿ ಇಂತಹದ್ದೊಂದು ವ್ಯವಸ್ಥೆ ಅಗತ್ಯವಿದೆ ಎಂದೂ ಕಾರ್ಯಾಚರಣೆ ವಿಭಾಗದ ಅಧಿಕಾರಿ ತಿಳಿಸಿದರು.