ಹೊಸದಿಲ್ಲಿ : ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಬುಧವಾರ ಕಾಂಗ್ರೆಸ್ ”ಮಿಸ್ಸಿಂಗ್” ಎಂದು ಮಾಡಿದ ಟ್ವೀಟ್‌ಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ “ಓ ದೈವಿಕ ರಾಜಕೀಯ ಜೀವಿ” ಎಂದು ಪ್ರಾರಂಭಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಬಗ್ಗೆ ಮೊನಚಾದ ತಿರುಗೇಟು ನೀಡಿ, ”ನಾನು ಅಮೇಥಿಯಲ್ಲಿದ್ದೇನೆ ಮತ್ತು ಆ ಪ್ರದೇಶದ ಮಾಜಿ ಸಂಸದರನ್ನು ಹುಡುಕುವ ಯಾರಾದರೂ ಯುಎಸ್ ಅನ್ನು ಸಂಪರ್ಕಿಸಬಹುದು” ಎಂದು ಪ್ರತಿಕ್ರಿಯಿಸಿದ್ದಾರೆ.
“ಓ ದೈವಿಕ ರಾಜಕೀಯ ಜೀವಿ, ನಾನು ಸಿರ್ಸಿರಾ ಗ್ರಾಮ, ವಿಧಾನಸಭಾ ಸಲೂನ್, ಲೋಕಸಭೆ ಅಮೇಥಿಯಿಂದ ಧುರಾನ್‌ಪುರದ ಕಡೆಗೆ ಹೊರಟಿದ್ದೇನೆ. ಮಾಜಿ ಸಂಸದರನ್ನು ಹುಡುಕುತ್ತಿದ್ದರೆ ದಯವಿಟ್ಟು ಅಮೆರಿಕವನ್ನು ಸಂಪರ್ಕಿಸಿ” ಎಂದು ತಿರುಗೇಟು ನೀಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ಸೋತಿದ್ದ ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ಗೆದ್ದಿದ್ದರು. ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅವರು ಈ ವರ್ಷದ ಆರಂಭದಲ್ಲಿ ಆ ಕ್ಷೇತ್ರದ ಸದಸ್ಯತ್ವವನ್ನೂ ಕಳೆದುಕೊಂಡಿದ್ದರು.
Related Articles