Advertisement

ಅಂತರ್ಜಲ ವೃದ್ಧಿಗಾಗಿ ಇಂಗು ಗುಂಡಿ ನಿರ್ಮಾಣ

01:46 PM Apr 07, 2021 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಬರಪೀಡಿತ ಜಿಲ್ಲೆಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಪಾಲಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯಉದ್ಯೋಗ ಖಾತ್ರಿ ಯೋಜನೆ ಒಂದು ರೀತಿಯ ವರದಾನವಾಗಿದೆ.ಮಳೆಗಾಲದಲ್ಲಿ ಮಳೆನೀರು ಸಂರಕ್ಷಣೆ ಮಾಡಲು ಮಳೆ ನೀರಿಕೋಯ್ಲು ಪದ್ಧತಿಯನ್ನು ಅಳವಡಿಸಿಕೊಂಡು, ನೀರುಪೂರೈಕೆಮಾಡುವ ಕೊಳವೆ ಬಾವಿಗಳಿಗೆ ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಮಟ್ಟವನ್ನು ವೃದ್ಧಿಸಲಾಗುತ್ತಿದೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಕುಸಿದು ಸಾವಿರಾರುಅಡಿಗಳವರೆಗೆ ಕೊಳವೆ ಬಾವಿ ಕೊರೆದರೂ ನೀರು ಲಭಿಸುತ್ತಿಲ್ಲ.ಒಂದು ವೇಳೆ ನೀರು ಲಭಿಸಿದರೆ ಆ ನೀರಿನಲ್ಲಿ ಫ್ಲೋರೈಡ್‌ ಅಂಶಅಧಿಕವಾಗಿ ಕಂಡು ಬಂದಿರುವುದು ಅಘಾತಕಾರಿ ಬೆಳವಣಿಗೆಯಾಗಿದೆ. ಅಂತರ್ಜಲ ಮಟ್ಟ ಕುಸಿತದಿಂದ ಲಭಿಸಿರುವ ನೀರು ಸೇವಿಸಿ,ದಂತಕ್ಷಯ ಮತ್ತಿತರ ಖಾಯಿಲೆಗಳಿಂದ ಜನ ನರಳುತ್ತಿರುವುದುಅಂಕಿ-ಅಂಶಗಳಿಂದ ದೃಢಪಟ್ಟಿದೆ.

ಯೋಜನೆ ಪರಿಣಾಮಕಾರಿ ಅನುಷ್ಠಾನವಾಗಿಲ್ಲ: ಜಿಲ್ಲೆಯಲ್ಲಿಅಂತರ್ಜಲಮಟ್ಟವನ್ನು ವೃದ್ಧಿ ಗೊಳಿಸುವ ಸಲುವಾಗಿ ಜಿಲ್ಲಾಡಳಿತಅನೇಕ ರೀತಿಯ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಮೂಡಿಸಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಮಳೆನೀರು ಸಂರಕ್ಷಣೆಮಾಡುವ ಕೆಲಸ ಆಗಿಲ್ಲ ಎಂಬ ಕೊರಗು ಕಾಣುತ್ತಿದೆ. ಗ್ರಾಮೀಣಅಭಿವೃದ್ಧಿ ಮತ್ತು ನೈರ್ಮಲ್ಯಕ್ಕೆ ಪೂರಕವಾಗಿರುವ ಮಹಾತ್ಮ ಗಾಂಧಿರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕೊಳವೆಬಾವಿ ಬಳಿ ಇಂಗುಗುಂಡಿಗಳನ್ನು ನಿರ್ಮಿಸುವ ಜಲಮರುಪೂರ್ಣಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನೆಯಾಗಿಲ್ಲ. ಇದರಿಂದ ಅಂತರ್ಜಲ ಮಟ್ಟದ ಪ್ರಮಾಣ ಹೆಚ್ಚಾಗಿಲ್ಲ.

ಚಿಕ್ಕಬಳ್ಳಾಪುರದಲ್ಲಿ ಅಧಿಕ ನಿರ್ಮಾಣ: ಜಿಲ್ಲೆಯಲ್ಲಿ ನರೀಗಾ ಯೋಜನೆಯಡಿ ಜಲಮರುಪೂರ್ಣಗೊಳಿಸಲು ಕೊಳವೆ ಬಾವಿಗಳಬಳಿ 557 ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಆ ಪೈಕಿಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಅಂದರೆ380 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ತದನಂತರಬಾಗೇಪಲ್ಲಿ ತಾಲೂಕಿನಲ್ಲಿ 66, ಶಿಡ್ಲಘಟ್ಟ ತಾಲೂಕಿನಲ್ಲಿ 38,ಗುಡಿಬಂಡೆ ತಾಲೂಕಿನಲ್ಲಿ 26, ಗೌರಿಬಿದನೂರು ತಾಲೂಕಿನಲ್ಲಿ 23,ಜಿಲ್ಲೆಯ ವಾಣಿಜ್ಯ ಕೇಂದ್ರ ಚಿಂತಾಮಣಿ ತಾಲೂಕಿನಲ್ಲಿ ಅತೀ ಕಡಿಮೆಅಂದರೆ 24 ಇಂಗು ಗುಂಡಿಗಳನ್ನು ನಿರ್ಮಿಸಿ, ಅಂತರ್ಜಲ ಮಟ್ಟವನ್ನು ವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಬೀದಿ ನಾಟಕಗಳ ಮೂಲಕ ಜಾಗೃತಿ: ಗ್ರಾಮೀಣ ಪ್ರದೇಶದಲ್ಲಿಈಗಾಗಲೇ ಮಳೆನೀರು ಸಂರಕ್ಷಣೆ ಮಾಡುವ ಯೋಜನೆಗಳಿಗೆಆದ್ಯತೆ ನೀಡಲಾಗಿದೆ. ಅದರಲ್ಲಿ ಪ್ರಮುಖವಾಗಿ ನೀರು ಸಂರಕ್ಷಣೆಮಾಡಲು ಗ್ರಾಪಂ, ತಾಪಂ ಹಾಗೂ ಜಿಪಂಗಳ ಮೂಲಕ ಜನರಲ್ಲಿಮಿತನೀರು ಬಳಕೆ ಮಾಡಲು ಮತ್ತು ನೀರು ವ್ಯರ್ಥವಾಗದಂತೆಎಚ್ಚರವಹಿಸಬೇಕು ಎಂದು ಬೀದಿ ನಾಟಕಗಳ ಮೂಲಕ ಜಾಗೃತಿಮೂಡಿಸಲಾಗುತ್ತಿದೆ. ಜೊತೆಗೆ ಖಾಸಗಿ ಕೊಳವೆ ಬಾವಿಯನ್ನುಹೊಂದಿರುವ ರೈತರು ಮತ್ತು ನಾಗರಿಕರು ಜಲ ಮರುಪೂರ್ಣ ಗೊಳಿಸುವ ಇಂಗು ಗುಂಡಿಗಳನ್ನು ನಿರ್ಮಿಸಿಕೊಂಡರೆ, ಮುಂದಿನದಿನಗಳಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವನ್ನು ವೃದ್ಧಿಗೊಳಿಸಲು ಸಾಧ್ಯವಾಗುತ್ತದೆ.

Advertisement

ನರೇಗಾ ಯೋಜನೆ ಮೂಲಕ ಕೊಳವೆಬಾವಿಗಳಿಗೆ ಇಂಗು ಗುಂಡಿ ನಿರ್ಮಿಸಲುಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಕೆರೆಗಳಪುನಶ್ಚೇತನ, ಕಲ್ಯಾಣಿಗಳ ನಿರ್ಮಾಣ, ಚೆಕ್‌ಡ್ಯಾಂಸಹಿತ ಅಂತರ್ಜಲ ಮಟ್ಟ ವೃದ್ಧಿಗೊಳಿಸುವಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಸಚಿವಸೂಚನೆ ಮೇರೆಗೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಕೊಳವೆ ಬಾವಿಗಳ ಬಳಿ ಇಂಗುಗುಂಡಿನಿರ್ಮಿಸಿ, ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ● ಪಿ.ಶಿವಶಂಕರ್‌,  ಜಿಪಂ ಸಿಇಒ, ಚಿಕ್ಕಬಳ್ಳಾಪುರ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಉದ್ಯೋಗ ಖಾತ್ರಿ ಯೋಜನೆಯನ್ನುಪರಿಣಾಮಕಾರಿ ಅನುಷ್ಠಾನಕ್ಕೆ ಈಗಾಗಲೇ ಜಿಪಂಸಿಇಒಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿಸರ್ಕಾರಿ ಮತ್ತು ಖಾಸಗಿ ಕೊಳವೆ ಬಾವಿಗಳ ಬಳಿಇಂಗು ಗುಂಡಿಗಳನ್ನು ನಿರ್ಮಿಸಿ, ಅಂತರ್ಜಲಮಟ್ಟವನ್ನು ವೃದ್ಧಿಗೊಳಿಸಿ, ಮಳೆ ನೀರು ಸಂರಕ್ಷಣೆ,ಮಿತ ನೀರು ಬಳಕೆ ಕುರಿತು ಜಾಗೃತಿ ಮೂಡಿಸಲಾಗುವುದು. ● ಡಾ.ಕೆ.ಸುಧಾಕರ್‌, ಸಚಿವ

 

-ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next