Advertisement

ರಾತ್ರೋರಾತ್ರಿ ಅಕ್ರಮ ಶೆಡ್‌ ನಿರ್ಮಾಣ: ಆಕ್ರೋಶ

02:48 PM Nov 23, 2021 | Team Udayavani |

ಅರಕಲಗೂಡು: ರಾತ್ರೋರಾತ್ರೀ ಅಕ್ರಮವಾಗಿ ನಿರ್ಮಾಣಗೊಂಡಿರುವ ಅಂಗಡಿ ಶೆಡ್‌ ತೆರವುಗೊಳಿ ಸುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಪಪಂ ಅಧಿಕಾರಿಗಳು ಶೆಡ್‌ ತೆರವುಗೊಳಿಸದಿದ್ದರೆ ಕಚೇರಿ ಮುಂದೆ ಪ್ರತಿಭಟಿಸುವುದಾಗಿ ಪಪಂ ಮಾಜಿ ಅಧ್ಯಕ್ಷ ಲೋಕೇಶ್‌ ಹಾಗೂ ಮಾಜೀ ಉಪಾಧ್ಯಕ್ಷ ಎ.ಪಿ. ರಮೇಶ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಪಟ್ಟಣದ ಹಾಸನ ರಸ್ತೆಯಲ್ಲಿ ಬಿಎಸ್‌ಎನ್‌ಎಲ್‌ ಕಚೇರಿಯ ಪಕ್ಕದಲ್ಲಿರುವ ಪಪಂ ಎಸ್‌ಎಎಸ್‌ 282ರ ನಿವೇಶನದಲ್ಲಿ ಭಾನುವಾರ ರಾತ್ರೋರಾತ್ರಿ ಕಬ್ಬಿಣದ ಅಂಗಡಿ ಶೆಡ್‌ ಅರವಟ್ಟಿಗೆ ಬಳಿಯ ತಿಟ್ಟದ ನಿವಾಸಿ ಶಿವಣ್ಣ ಎಂಬುವವರು ನಿರ್ಮಾಣ ಮಾಡಿದ್ದು, ಸೋಮವಾರ ಬೆಳಗ್ಗೆ ಸಾರ್ವಜನಿಕರು ಪೆಟ್ಟಿಗೆಯನ್ನ ಕಂಡು ಆಶ್ಚರ್ಯ ಚಕಿತರಾದರು. ನಂತರ ಕೆಲ ಮುಖಂಡರು ಪಪಂ ಮುಖ್ಯಾಧಿಕಾರಿ ಶಿವಕುಮಾರ್‌ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್‌, ನನಗೆ ವಿಷಯ ತಿಳಿದಿಲ್ಲ ಮಾಹಿತಿ ಕಲೆ ಹಾಕಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಬಳಿಕ ಪಪಂ ಅಧ್ಯಕ್ಷ ಹೂವಣ್ಣ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಈ ಸ್ಥಳದ ಕೊನೆಯ ಭಾಗದಲ್ಲಿ 10 ಅಡಿ ಸ್ಥಳವನ್ನು ಹಾಲಿನ ಬೂತಿಗೆ ನೀಡಲಾಗಿದೆ. ಆದರೆ ಅವರು ಕೊನೆಯ ಭಾಗದಲ್ಲಿಡದೆ ಮಧ್ಯದಲ್ಲಿ ನಿರ್ಮಿಸಿರು ವುದು ತಪ್ಪು ಶೀಘ್ರವಾಗಿ ತೆರವುಗೊಳಿಸಲು ಕ್ರಮವಹಿಸುವುದಾಗಿ ತಿಳಿಸಿದರು.

ವಿವಾದಕ್ಕೆ ಕಾರಣವಾದ ನಿವೇಶನ: 1979 ರಲ್ಲಿ ಪಪಂ ಜನತಾ ಕಾಲೋನಿ ಸ್ಥಳದಲ್ಲಿ ಆಶ್ರಯ ನಿವೇಶನಗಳನ್ನ ಹಂಚಿ ಹಕ್ಕುಪತ್ರಗಳನ್ನ ಬಡ ಕುಟುಂಬಗಳಿಗೆ ನೀಡಲಾಗಿತ್ತು. ಆದರೆ, ಅದೇ ವಾರ್ಡಿಗೆ ಸೇರಿದ ಈ ನಿವೇಶನ ಮುಖ್ಯ ರಸ್ತೆಯಲ್ಲಿದ್ದು, ಈ ಸ್ಥಳವನ್ನು ಯಾರಿಗೂ ನೀಡಿರಲಿಲ್ಲ.

ಆದರೆ ಅಂದಿನ ನಿವೇಶನ ಕ್ರಮ ಸಂಖ್ಯೆ 189ರ ಈ ನವೇಶನದ ಹಕ್ಕು ಪತ್ರದಲ್ಲಿ ಸಾಕಮ್ಮ ಕೋಂ ರಾಮೇಗೌಡ ಎಂಬುವವರಿಗೆ ಹಕ್ಕು ಪತ್ರವನ್ನ ಸೃಷ್ಟಿಸಿ 2018 ಸೆ. 12ರಂದು ಖಾತೆಗೆಂದು ಪಪಂಚಾಯಿತಿಗೆ ಅರ್ಜಿ ಸಲ್ಲಿಸಿದ ಮೇರೆಗೆ ಅಂದಿನ ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಇದರ ಖಾತೆಯನ್ನ ಅವರಿಗೆ ಮಾಡಿಕೊಡಲಾಗಿತ್ತು ಎಂದು ಬಿಂಬಿಸಿದ್ದರು.

Advertisement

ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಮಾಹಿತಿ ಹಕ್ಕಿನ ಆಧಾರದಡಿ ಮಾಹಿತಿಗೆ ಮುಂದಾದಾಗ ಕಚೇರಿಯಲ್ಲಿ ಮೂಲ ದಾಖಲೆಗಳೇ ಇಲ್ಲದಾಗಿದೆ. ಬಳಿಕ ಈ ಕುರಿತು ಸಾರ್ವಜನಿಕರು ಶಾಸಕರಿಗೆ ದೂರು ನೀಡಿದರು. ದೂರಿನ ಅನ್ವಯ ಶಾಸಕರ ಆದೇಶದಂತೆ ಸಾಕಮ್ಮ ಕೋಂ ರಾಮೇಗೌಡರಿಗೆ ನೀಡಿದ ನಿವೇಶನವು ಕಾನೂನು ಬಾಹಿರವಾಗಿರುವುದರಿಂದ ರದ್ದುಗೊಳಿಸಲಾಯಿತು.

ಇದನ್ನೂ ಓದಿ:-ಕೋವಿಡ್‌ ಲಸಿಕೆ ಅಭಿಯಾನ: ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

ಗೊಂದಲಗಳ ನಡುವೆ ಅಕ್ರಮ ಶೆಡ್‌ ನಿರ್ಮಿಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಪಂ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಶೆಡ್‌ ನಿರ್ಮಾಣಕ್ಕೆ ಅವಕಾಶ ನೀಡುತ್ತಿರುವುದು ಪಟ್ಟಣದ ಸೌಂದರ್ಯ ಹಾಗೂ ಪರಿಸರ ಸಂರಕ್ಷಣೆಗೆ ತೊಂದರೆಯಾಗುತ್ತದೆ. ಆದರೂ ಈ ಸ್ಥಳದಲ್ಲಿ ಶೆಡ್‌ ನಿರ್ಮಿಸಲು ಮುಂದಾಗಿರುವುದು ಖಂಡನೀಯ. ಪಪಂ ಅಧಿಕಾರಿಗಳು ಈ ಕೂಡಲೇ ಸ್ಥಳಾಂತರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ನಿತ್ಯಜ್ಯೋತಿ ನಾಗರಾಜ್‌ ತಿಳಿಸಿದರು. ಪಪಂ ಆಸ್ತಿಯ ರಕ್ಷಣೆ ಮಾಡಬೇಕಾದವರೇ ಆಕ್ರಮ ಶೆಡ್‌ ಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಚರ್ಚೆಗೆ ಕಾರಣವಾಗಿದೆ.

 “ಹಾಸನ ರಸ್ತೆಯ ಬಿಎಸ್‌ಎನ್‌ಎಲ್‌ ಪಕ್ಕದಲ್ಲಿರುವ ಈ ಸ್ಥಳದಲ್ಲಿ ಸಾಮಾನ್ಯ ಸಭೆಯ ಒಪ್ಪಿಗೆಯ ಮೇಲೆ ಅಂಗವಿಕಲನಿಗೆ ಹಾಲಿನ ಬೂತ್‌ ನಿರ್ಮಿಸಲು ಅನುಮತಿ ನೀಡಲಾಗಿದೆ. ಆತ ಅನುಮತಿ ಪತ್ರ ಪಡೆಯುವ ಮುನ್ನವೇ ರಜೆ ದಿನದಲ್ಲಿ ಶೆಡ್‌ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಆದ್ದರಿಂದ ಇದನ್ನು ಸ್ಥಳಾಂತರಿಸಲು ಕ್ರಮ ಜರುಗಿಸಲಾಗುವುದು.” – ಹೂವಣ್ಣ ಪಟ್ಟಣ ಪಂಚಾಯ್ತಿ ಅಧ್ಯಕ್ಷ

 “ಪಪಂ ಆಡಳಿತ ಪರಿಸರದ ಬಗ್ಗೆ ಹಾಗೂ ಸಾರ್ವಜನಿಕ ಸ್ಥಳಗಳ ರಕ್ಷಣೆ ಮಾಡಬೇಕಾದ ಇವರು ಅವೈಜ್ಞಾನಿಕವಾಗಿ ಒತ್ತಡಕ್ಕೆ ಮಣಿದು, ಈ ರೀತಿ ಶೆಡ್‌ಗಳ ನಿರ್ಮಾಣಕ್ಕೆ ಮುಂದಾಗುವುದು ಖಂಡನೀಯ. ಶಾಸಕರು ಪಟ್ಟಣದಲ್ಲಾಗುತ್ತಿರುವ ಅಕ್ರಮ ನಿವೇಶನಗಳ ಒತ್ತುವರಿಯ ಬಗ್ಗೆ ಗಮನ ಹರಿಸಿ ಸಾರ್ವಜನಿಕರ ಆಸ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಲು ಶ್ರಮಿಸಬೇಕು.ಅಕ್ರಮ ಶೆಡ್‌ಅನ್ನು ಕೂಡಲೇ ತೆರವುಗೊಳಿಸದಿದ್ದರೆ ಪಪಂ ಮುಂದೆ ಸಾರ್ವಜನಿಕರೊಂದಿಗೆ ಉಗ್ರ ಪ್ರತಿಭಟನೆ ಮಾಡಲಾಗುವುದು” – ಎ.ಪಿ. ರಮೇಶ್‌, ಪಪಂ ಮಾಜಿ ಉಪಾಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next