Advertisement

ಹೈಟೆಕ್‌ ಪ್ರವಾಸಿ ಮಂದಿರ ನಿರ್ಮಾಣ ಶೀಘ್ರ: ರೇಣುಕಾಚಾರ್ಯ

02:12 PM Sep 15, 2021 | Team Udayavani |

ಹೊನ್ನಾಳಿ: ಹೊನ್ನಾಳಿ, ನ್ಯಾಮತಿ ಅವಳಿತಾಲೂಕಿನಲ್ಲಿ ತಲಾ ನಾಲ್ಕು ಕೋಟಿ ರೂ.ವೆಚ್ಚದಲ್ಲಿ ಹೈಟೆಕ್‌ ಪ್ರವಾಸಿಮಂದಿರ ನಿರ್ಮಾಣ ಮಾಡಲಾಗುವುದು ಎಂದುಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ನ್ಯಾಮತಿ ಪಟ್ಟಣದಲ್ಲಿ ನೂತನವಾಗಿನಿರ್ಮಾಣವಾಗುತ್ತಿರುವ ಪ್ರವಾಸಿಮಂದಿರಕ್ಕೆಭೂಮಿಪೂಜೆ ನೆರವೇರಿಸಿ ಅವರುಮಾತನಾಡಿದರು. ನ್ಯಾಮತಿ ಹಾಗೂಹೊನ್ನಾಳಿಯ ಹಳೆ ಪ್ರವಾಸಿ ಮಂದಿರದಬಳಿ ತಲಾ ನಾಲ್ಕು ಕೋಟಿಯಂತೆ ಒಟ್ಟುಎಂಟು ಕೋಟಿ ರೂ.ಗಳ ವೆಚ್ಚದಲ್ಲಿ ಎರಡುಪ್ರವಾಸಿ ಮಂದಿರಗಳನ್ನು ನಿರ್ಮಾಣಮಾಡಲಾಗುತ್ತಿದೆ ಎಂದರು.

ಗುಣಮಟ್ಟದ ಕಾಮಗಾರಿ ಮಾಡುವಂತೆಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ.ಅವಳಿ ತಾಲೂಕಿನಲ್ಲಿ ಸುಂದರವಾದಪ್ರವಾಸಿಮಂದಿರ ನಿರ್ಮಾಣಮಾಡಬೇಕೆಂಬುದು ನನ್ನ ಕನಸಾಗಿತ್ತು.ಅದು ಈಗ ನನಸಾಗುತ್ತಿದೆ. ಈಗಾಗಲೇಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿಗೆಸಾವಿರಾರು ಕೋಟಿ ಅನುದಾನವನ್ನುತಂದು ಅಭಿವೃದ್ಧಿಪಡಿಸಿದ್ದೇನೆ. ಈ ಎರಡುತಾಲೂಕುಗಳನ್ನು ರಾಜ್ಯದಲ್ಲೇ ಮಾದರಿತಾಲೂಕುಗಳನ್ನಾಗಿ ಮಾಡಬೇಕೆಂದು ಪಣತೊಟ್ಟಿದ್ದೇನೆ.

ಪಟ್ಟಣದ ಮುಖ್ಯ ರಸ್ತೆಯಮಧ್ಯ ಭಾಗದಲ್ಲಿ ಅಲಂಕಾರಿಕ ಬೀದಿದೀಪ ಅವಳವಡಿಕೆಗೆ 32 ಕೋಟಿ ರೂ.ಬಿಡುಗಡೆಯಾಗಿದ್ದು ಶೀಘ್ರದಲ್ಲೇಕಾಮಗಾರಿಆರಂಭಗೊಳ್ಳಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಾಪಂ ಮಾಜಿಅಧ್ಯಕ್ಷರಾದ ಎಸ್‌.ಪಿ. ರವಿಕುಮಾರ್‌, ಬಿಜೆಪಿತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್‌, ಜಿಪಂಮಾಜಿ ಅಧ್ಯಕ್ಷೆ ಉಮಾ ರಮೇಶ್‌, ಮಹಿಳಾಮೋರ್ಚಾ ಅಧ್ಯಕ್ಷೆ ಉಮಾ ಓಂಕಾರ್‌,ಸುರಹೊನ್ನೆ ಗ್ರಾಪಂ ಅಧ್ಯಕ್ಷ ಹಾಲೇಶ್‌,ಮುಖಂಡರಾದ ಅರಕೆರೆ ನಾಗರಾಜ್‌, ಕೆ.ವಿ.ಚನ್ನಪ್ಪ, ಸಿ.ಕೆ. ರವಿ,ಅಜಯ್‌ ರೆಡ್ಡಿ, ಪ್ರವೀಣ್‌,ನಟರಾಜ್‌ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next