Advertisement
ಕೇಂದ್ರ ಸಚಿವ ಸಂಪುಟದಲ್ಲಿ ಅಕಾಡೆಮಿ ಸ್ಥಾಪನೆಗೆ ತಾತ್ವಿಕವಾಗಿ ಅನುಮೋದನೆ ಪಡೆದ ಬಳಿಕ ಹಂತ ಹಂತವಾಗಿ ಕೆಲಸ ನಡೆಯುತ್ತಿದ್ದು, 2026ರ ವೇಳೆಗೆ ಪೂರ್ಣ ಪ್ರಮಾಣದ ಅಕಾಡೆಮಿ ತಲೆ ಎತ್ತುವ ನಿರೀಕ್ಷೆ ಇದೆ.
ಅಕಾಡೆಮಿ ಸ್ಥಾಪನೆಗೆ ಸುಮಾರು 1 ಸಾವಿರ ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಕರಾವಳಿಯಲ್ಲಿ ಅಕಾಡೆಮಿಗೆ ಪೂರಕವಾದ ಭೌಗೊ àಳಿಕ ಲಕ್ಷಣಗಳಿದ್ದು, ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಈಗ ಗುರುತಿಸಲಾದ ಜಾಗವು ಫಲ್ಗುಣಿ ನದಿಯ ಬದಿಯಲ್ಲಿದೆ. ಜತೆಗೆ ಕೋಸ್ಟ್‌ಗಾರ್ಡ್‌ನ ಮೂರನೇ ಜಿಲ್ಲಾ ಪ್ರಧಾನ ಕಚೇರಿ ಕೂಡ ಪಣಂಬೂರಿನಲ್ಲಿದೆ. ಬಂದರು, ವಿಮಾನ ನಿಲ್ದಾಣವೂ ಹತ್ತಿರದಲ್ಲಿದ್ದು, ಅಕಾಡೆಮಿ ಸ್ಥಾಪನೆಗೆ ಸೂಕ್ತ ಸ್ಥಳ. ವಿಸ್ತೃತ ತರಬೇತಿ ಅವಕಾಶ
ಇಲ್ಲಿ ಆಯ್ಕೆಯಾಗುವ ಅಭ್ಯರ್ಥಿ ಗಳಿಗೆ ನೌಕಾ ತರಬೇತಿ, ಮಾಲಿನ್ಯ ಸ್ಪಂದನೆ, ಶೋಧ ಮತ್ತು ಪತ್ತೆ, ವಿವಿಧ ರೀತಿಯ ಕಾರ್ಯಾಚರಣೆ, ಸಾಗರೋತ್ತರ ನಿಯಮಾವಳಿಗಳು, ಕಡಲ್ಗಳ್ಳರ ನಿಯಂತ್ರಣ ಇತ್ಯಾದಿ ತರಬೇತಿ ನೀಡಲಾಗುವುದು. ಇದಕ್ಕಾಗಿ ಹಲವು ರೀತಿಯ ನೌಕೆಗಳು, ವಿಮಾನಗಳು ಕೂಡ ಬರುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ತರಬೇತಿಗೆ ಅಕಾಡೆಮಿಯೊಳಗೇ 9 ವಿವಿಧ ಸ್ಕೂಲ್‌ಗಳು ಇರುತ್ತವೆ. ಸುಮಾರು 650ರಷ್ಟು ಪ್ರಶಿಕ್ಷಣಾರ್ಥಿಗಳನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದು, ಇದರಲ್ಲಿ ವಿದೇಶಿ ವಿದ್ಯಾರ್ಥಿಗಳೂ ಇರುತ್ತಾರೆ ಎನ್ನುವುದು ವಿಶೇಷ.
Related Articles
ಕೇರಳದ ಕಣ್ಣೂರು ಜಿಲ್ಲೆಯ ಆಯಿಕಲ್ ಸಮೀಪದ ಇರಿನಾವು ಸಮುದ್ರ ತೀರದ ವಳಪಟ್ಟಣಂ ನದಿಯ ಬಳಿ ಸ್ಥಾಪನೆಗೆ ಕೇರಳದಿಂದ ಲಾಬಿ ನಡೆದಿತ್ತು. ಆದರೆ ಕಳೆದ ಅವಧಿಯಲ್ಲಿ ಕೇಂದ್ರದ ರಕ್ಷಣ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ತಟರಕ್ಷಣ ಪಡೆಯ ಡೈರೆಕ್ಟರ್ ಜನರಲ್ ಜತೆ 2017ರ ಡಿಸೆಂಬರ್ ತಿಂಗಳಲ್ಲಿ ಮಂಗಳೂರಿನ ಕೆಂಜಾರಿಗೆ ಭೇಟಿ ನೀಡಿ ಅಕಾಡೆಮಿ ನಿರ್ಮಾಣಕ್ಕೆ ಗುರುತಿಸಿದ್ದ ಪ್ರದೇಶವನ್ನು ಪರೀಶೀಲಿಸಿದ್ದರು. ಆ ಬಳಿಕ ಸಂಸದ ನಳಿನ್ ಕುಮಾರ್ ಕಟೀಲು ರಕ್ಷಣ ಸಚಿವರನ್ನು ಭೇಟಿಯಾಗಿದ್ದು, ಅವರೂ ಪೂರಕವಾಗಿ ಸ್ಪಂದಿಸಿ, ಶೀಘ್ರ ಅಕಾಡೆಮಿ ಸ್ಥಾಪಿಸುವ ಭರವಸೆ ನೀಡಿದ್ದರು. ಹೀಗಾಗಿ ಅಕಾಡೆಮಿಯು ಕೇರಳದ ಪಾಲಾಗದೆ
ಮಂಗಳೂರಿಗೇದಕ್ಕಿದೆ.
Advertisement
ಸದ್ಯ ತರಬೇತಿ ಅಕಾಡೆಮಿ ಇಲ್ಲ1977ರಲ್ಲಿ ಭಾರತೀಯ ಜಲಪ್ರದೇಶದ ರಕ್ಷಣೆಗಾಗಿ ಸ್ಥಾಪನೆ ಗೊಂಡ ಕೋಸ್ಟ್‌ಗಾರ್ಡ್‌ಗೆ ಇದುವರೆಗೆ ಪೂರ್ಣ ಪ್ರಮಾಣದ ಸ್ವಂತ ತರಬೇತಿ ಅಕಾಡೆಮಿ ಇಲ್ಲ. ನಮ್ಮ ರಕ್ಷಣ ಪಡೆಯ ಮೂರೂ ದಳಗಳಿಗೆ ಅವುಗಳದ್ದೇ ಆದ ಇಂಡಿಯನ್ ಮಿಲಿಟರಿ ಅಕಾಡೆಮಿ, ನೇವಲ್ ಅಕಾಡೆಮಿ, ಏರ್‌ಫೋರ್ಸ್ ಅಕಾಡೆಮಿ ಇವೆ. ಕೋಸ್ಟ್‌ಗಾರ್ಡ್ ಅಭ್ಯರ್ಥಿಗಳಿಗೆ ಕೇರಳದ ಏಳಿಮಲೆ ಯಲ್ಲಿ ರುವ ನೇವಲ್ ಅಕಾಡೆಮಿಯಲ್ಲಿ 22 ವಾರಗಳ ತರಬೇತಿ ಹಾಗೂ ಬಳಿಕ 12 ವಾರಗಳ ಕಾಲ ನೌಕಾ ತರಬೇತಿ ನೀಡಲಾಗುತ್ತದೆ. ಅಲ್ಲದೆ ಕೊಚ್ಚಿಯಲ್ಲಿ ಕೋಸ್ಟ್‌ಗಾರ್ಡ್ ನವರ ತಾತ್ಕಾಲಿಕ ತರಬೇತಿ ಕೇಂದ್ರವಿದೆ. ತಾತ್ವಿಕ ಅನುಮೋದನೆ ಪಡೆದುಕೊಂಡಿದ್ದು, ಸದ್ಯ ರಕ್ಷಣ ಸಚಿವಾಲಯ ಇದರ ಮೇಲು ಸ್ತುವಾರಿ ನೋಡಿಕೊಳ್ಳುತ್ತಿದೆ. ಕಾಂಪೌಂಡ್ ವಾಲ್ ನಿರ್ಮಾಣ ನಡೆಯುತ್ತಿದೆ. ಮುಂದೆ ಗುತ್ತಿಗೆದಾರ ರನ್ನು ಆಯ್ಕೆ ಮಾಡಿ, ಅಕಾಡೆಮಿ ನಿರ್ಮಾಣ ಕೆಲಸ ಆರಂಭವಾಗಲಿದೆ. ಎಲ್ಲವೂ ಸರಿಯಾದರೆ 2026ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ
ಇದೆ.
-ಮನೋಜ್ ಬಾಡ್ಕರ್,
ಕಮಾಂಡರ್, ಪಶ್ಚಿಮ ವಲಯ,
ಕೋಸ್ಟ್‌ಗಾರ್ಡ್ - ವೇಣು ವಿನೋದ್ ಕೆ.ಎಸ್.