Advertisement

ಹಾತಲಗೇರಿ- ಲಕ್ಕುಂಡಿ ಮಾರ್ಗದಲ್ಲಿ ಮತ್ತೂಂದು ಸೇತುವೆ ನಿರ್ಮಾಣ

12:31 PM Sep 02, 2019 | Suhan S |

ಗದಗ: ತಾಲೂಕಿನ ಹಾತಲಗೇರಿ- ಲಕ್ಕುಂಡಿ ಮಾರ್ಗದಲ್ಲಿ ಈಗಾಗಲೇ ಒಂದು ಸೇತುವೆ ನಿರ್ಮಾಣ ಮಾಡಿದ್ದು, ಈಗ 70 ಲಕ್ಷ‌ ರೂ. ವೆಚ್ಚದಲ್ಲಿ 2ನೇ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುವ ಮೂಲಕ ಸರ್ವ ಋತು ಸಂಪರ್ಕ ಒದಗಿಸುವ ತಮ್ಮ ಆಶಯ ನೆರವೇರುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ.ಪಾಟೀಲ ಹೇಳಿದರು.

Advertisement

ತಾಲೂಕಿನ ಹಾತಲಗೇರಿ ಸಮೀಪದ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಗೆ ರವಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮಗಳಿಗೆ ಹಾಗೂ ಸಮೀಪದ ನಗರಗಳಿಗೆ ಸಂಪರ್ಕ ರಸ್ತೆಗಳು ಸರಿಯಾಗಿದ್ದರೆ ರೈತರು ಹಾಗೂ ಗ್ರಾಮಸ್ಥರಿಗೆ ಎಲ್ಲ ರೀತಿಯಿಂದ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಸೇತುವೆಗಳ ಕಾಮಗಾರಿ ಒಳ್ಳೆಯ ಗುಣಮಟ್ಟದ್ದಾಗಿರಬೇಕು. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾದರರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಹಾತಲಗೇರಿ ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆಯಾದ ಸೇತುವೆ ಕಾರ್ಯ ಪ್ರಾರಂಭವಾಗಿದೆ. ಗ್ರಾಮಸ್ಥರ ಇನ್ನೊಂದು ಬೇಡಿಕೆಯಾದ ರೈತರ ಹೊಲಗಳಿಗೆ ದಾರಿ ಕುರಿತ ಸಮಸ್ಯೆಗೆ ರೈತರು, ಊರಿನ ಹಿರಿಯರು ಹಾಗೂ ಸಂಬಂಧಿಸಿದ ಜಮೀನುಗಳು ಮಾಲೀಕರೊಂದಿಗೆ ಶೀಘ್ರದಲ್ಲಿಯೇ ಮಾತುಕತೆ ನಡೆಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ತಹಶೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ, ತಾಪಂ ಇಒ ಡಾ|ಜನಗಿ, ಗ್ರಾಪಂ ಅಧ್ಯಕ್ಷ‌ ಮೈಲಾರಪ್ಪ ಜಾಲಮ್ಮನವರ, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next