ಗುಳೇದಗುಡ್ಡ: ಊರೆಂದರೆ ಅಗಸಿ ಕಟ್ಟೆ ಇರಲೇಬೇಕು. ಹಲವು ಸಂಪ್ರದಾಯಗಳಿಗೆ ಸಾಕ್ಷಿಯಾದ ಅಗಸಿ ಕಟ್ಟೆಗಳು ಇರದ ಊರೇ ಇಲ್ಲ ಎನ್ನಬಹುದು. ಆದರೆ ಇಂದು ಎಷ್ಟೋ ಹಳ್ಳಿಗಳಲ್ಲಿ ಇಂದು ಅಗಸಿ ಕಟ್ಟೆಗಳು ಕಾಣುತ್ತಿಲ್ಲ. ಇರುವ ಅಗಸಿ ಕಟ್ಟೆಗಳನ್ನು ಕೆಲವು ಕಡೆ ಸುಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ.
ಕೋಟೆಕಲ್ಲ ಗ್ರಾಮದಲ್ಲಿ ನಡೆಯುವ ಕೆಲವು ಪ್ರಮುಖ ಕಾರ್ಯಗಳಿಗೆ ಅಗಸಿ ಕಟ್ಟೆ ಆಸರೆಯಾಗಿತ್ತು. ಮದುವೆಯಲ್ಲಿ ಬೀಗರನ್ನು ಇದುರು ಗುಮ್ಮುವುದು, ತವರು ಮನೆಯಲ್ಲಿ ಹೆರಿಗೆಯಾದ ನಂತರ ಗಂಡನ ಮನೆಗೆ ತೊಟ್ಟಿಲು ತೆಗೆದುಕೊಂಡು ಹೋಗುವುದು, ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದರೆ ಅವರಿಗೆ ಈ ಕಟ್ಟೆಯಿಂದಲೇ ದೈವದ ತುರಾಯಿ ತೆಗೆದುಕೊಂಡು ಹೋಗುವುದು ಸೇರಿದಂತೆ ಅನೇಕ ಸಂಪ್ರದಾಯಗಳಿಗೆ ಈ ಅಗಸಿ ಕಟ್ಟೆಯೇ ಆಸರೆಯಾಗಿತ್ತು, ಇದನ್ನೆಲ್ಲ ಮನಗಂಡ ಗ್ರಾಮಸ್ಥರು ಸ್ವಯಃ ತಾವೇ ಕಟ್ಟೆಯನ್ನು ನಿರ್ಮಿಸಿದ್ದಾರೆ. ಈ ಕಟ್ಟೆ ನಿರ್ಮಾಣಕ್ಕೆ 60 ಸಾವಿರಕ್ಕೂ ಹೆಚ್ಚು ಹಣ ವ್ಯಯಿಸಿದ್ದಾರೆ.ಗ್ರಾಮದ ಕಾರ್ಮಿಕರು ಸಹ ಒಂದು ದಿನ ಉದ್ಯೋಗಕ್ಕೆ ಹೋಗುವುದನ್ನು ಬಿಟ್ಟು ಈ ಅಗಸಿ ಕಟ್ಟೆ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಹತ್ತು ಹಲವು ಸಂಪ್ರದಾಯಗಳಿಗೆ ಸಾಕ್ಷಿಯಾದ ಅಗಸಿ ಕಟ್ಟೆಯನ್ನು ಕೋಟೆಕಲ್ಲ ಹಿರಿಯರ, ಗ್ರಾಮಸ್ಥರ ಕಾರ್ಯವನ್ನು ಪರ ಊರಿನ ಗ್ರಾಮಸ್ಥರು ಶ್ಲಾಘಿಸಿದ್ದಾರೆ.
Advertisement
ಆದರೆ ಸಮೀಪದ ಕೋಟೆಕಲ್ಲ ಗ್ರಾಮದಲ್ಲಿ ಅಗಸಿ ಕಟ್ಟೆ ಬಿದ್ದು ಎರಡ್ಮೂರು ವರ್ಷಗಳು ಕಳೆದಿತ್ತು. ಗ್ರಾಮದ ಘನತೆಯ ಪ್ರತೀಕವಾದ ಕಟ್ಟೆಯನ್ನು ನಿರ್ಮಾಣ ಮಾಡಬೇಕು ಎಂಬುದನ್ನು ಮನಗಂಡ ಗ್ರಾಮಸ್ಥರು ಊರ ಅಗಸಿಕಟ್ಟೆಯ ಮಹತ್ವ ಮುಂದಿನ ಪೀಳಿಗೆಗೂ ಇರಲೆಂದು ಗ್ರಾಮದ ಹಿರಿಯರೆಲ್ಲರೂ ಸೇರಿ ಹಣ ಸೇರಿಸಿ ಅಗಸಿಕಟ್ಟೆ ನಿರ್ಮಿಸಿ ಮಾದರಿಯಾಗಿದ್ದಾರೆ.
ಗ್ರಾಮದ ಅಗಸಿ ಕಟ್ಟೆಯು ಸುಮಾರು ನೂರು ವರ್ಷಗಳಾಗಿದ್ದು, ಇಲ್ಲಿಂದಲೇ ಗ್ರಾಮದ ಪ್ರಮುಖ ಕಾರ್ಯಗಳು ನಡೆಯುತ್ತವೆ. ನಮ್ಮ ಮುಂದಿನ ಪೀಳಿಗೆಗೆ ಈ ಕಟ್ಟೆಯ ಮಹತ್ವ ತಿಳಿಯಲು ಪುನಃ ನಿರ್ಮಿಸಿದ್ದು, ಖುಷಿ ತರಿಸಿದೆ.
•ಗುಂಡಪ್ಪ ಕೋಟಿ, ಯುವಕ, ಕೋಟೆಕಲ್
•ಗುಂಡಪ್ಪ ಕೋಟಿ, ಯುವಕ, ಕೋಟೆಕಲ್