Advertisement

ಹಿಂದುಳಿದ ಆಯೋಗಕ್ಕೆ ಸಂವಿಧಾನಿಕ ಸ್ಥಾನ

12:09 PM Aug 11, 2018 | Team Udayavani |

ತಿ.ನರಸೀಪುರ: ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಿಕ ಸ್ಥಾನವನ್ನು ನೀಡುವ 2017ರ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತ ಹಿನ್ನೆಲೆಯಲ್ಲಿ ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ವೃತ್ತದಲ್ಲಿ  ಬಿಜೆಪಿ ಹಿಂ.ವರ್ಗಗಳ ಮೋರ್ಚಾದ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

Advertisement

ಪಟ್ಟಣದ ಖಾಸಗಿ ಬಸ್‌ ನಿಲ್ದಾಣ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಸಮಸ್ತ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕೊನೆಗೂ ಹಿಂದುಳಿದ ವರ್ಗಗಳ ಆಯೋಗ ರಚನೆಗೆ ಸಾಂವಿಧಾನಿಕ ಸ್ಥಾನವನ್ನು ನೀಡುವ ಮೂಲಕ ಮಹತ್ವದ ಮಸೂದೆಯೊಂದನ್ನು ಜಾರಿಗೆ ತಂದಿದೆ ಎಂದು ಪಟಾಕಿ ಸಿಡಿಸಿದರು.

ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಎಂ.ವೆಂಕಟರಮಣಶೆಟ್ಟಿ ಮಾತನಾಡಿ, ಕೇಂದ್ರದಲ್ಲಿ ಒಂದು ಅವಧಿಗೆ ಅಧಿಕಾರವನ್ನು ನಡೆಸಿದ ಬಿಜೆಪಿ ಸರ್ಕಾರ ದೇಶದಲ್ಲಿನ ಹಿಂದುಳಿದ ವರ್ಗಗಳ ಜನರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗಾಗಿ ಆಯೋಗಕ್ಕೆ ಸಂವಿಧಾನಿಕ ಸ್ಥಾನವನ್ನು ನೀಡುವ ಮೂಲಕ ಐತಿಹಾಸಿಕ ಮಸೂದೆಯೊಂದನ್ನು ಮಂಡಿಸುವಲ್ಲಿ ಯಶಸ್ವಿಯಾಗಿದೆ. ಇಂತಹ ಮಹತ್ವದ ಕಾಯ್ದೆ ಹಿಂದುಳಿದ ವರ್ಗಗಳ ಬದುಕಿಗೆ ಹೊಸದೊಂದು ಆಯಾಮವನ್ನೇ ನೀಡಲಿದೆ. ಇನ್ನಾದರೂ ಹಿಂದುಳಿದ ವರ್ಗಗಳು ಬಿಜೆಪಿ ಬೆಂಬಲಿಸುವ ಬಗ್ಗೆ ಗಂಭೀರ ಚಿಂತನೆಯನ್ನು ಮಾಡಬೇಕು ಎಂದರು.

ವರುಣಾ ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡ ತೋಟದಪ್ಪ ಬಸವರಾಜು, ರಾಜ್ಯ ಸಮಿತಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ಟಿಎಪಿಸಿಎಂಎಸ್‌ ಉಪಾಧ್ಯಕ್ಷ ಪಿ.ನಟರಾಜು, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಎ.ಎನ್‌.ರಂಗುನಾಯಕ, ಹಿಂ.ವರ್ಗಗಳ ಕ್ಷೇತ್ರಾಧ್ಯಕ್ಷ ಗಿರೀಶ್‌, ಪ್ರಧಾನ ಕಾರ್ಯದರ್ಶಿ ಕರೋಹಟ್ಟಿ ಬಸವರಾಜು, ಮುಖಂಡರಾದ ನಾಗರಾಜು(ತಾತ), ಸಿದ್ದರಾಜು, ಆಲಗೂಡು ಮಂಜು, ಮಾದೇಶ, ಎಂ.ಮಿಥುನ್‌, ಬಿ.ಮಹೇಶ ಹಾಗೂ ಇನ್ನಿತರರು ಜಯೋತ್ಸವದಲ್ಲಿ ಭಾಗವಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next