ನವದೆಹಲಿ: ಅಪರಾಧ ಪ್ರಕರಣಗಳು, ನೇರ ಮತ್ತು ಪರೋಕ್ಷ ತೆರಿಗೆ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು ಮತ್ತು ವಾಹನ ಅಪಘಾತ ಪ್ರಕರಣಗಳ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ನಲ್ಲಿ ಮುಂದಿನ ವಾರದಿಂದ ನಾಲ್ಕು ವಿಶೇಷ ಪೀಠಗಳು ಆರಂಭಗೊಳ್ಳಲಿವೆ ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ತಿಳಿಸಿದರು.
ಸಿಜೆಐ ಸೇರಿದಂತೆ ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾ. ಜೆ.ಬಿ.ಪರ್ದಿವಾಲಾ ಅವರನ್ನು ಒಳಗೊಂಡ ನ್ಯಾಯಪೀಠದ ಎದುರು, ತಮ್ಮ ಪ್ರಕರಣಗಳನ್ನು ವಿಚಾರಣೆಗಾಗಿ ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಅನೇಕ ವಕೀಲರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, “ಅಪರಾಧ, ತೆರಿಗೆ, ಭೂಸ್ವಾಧೀನ ಮತ್ತು ವಾಹನ ಅಪಘಾತ ಪ್ರಕರಣಗಳನ್ನು ಪ್ರತ್ಯೇಕವಾಗಿ ವಿಶೇಷ ನ್ಯಾಯಪೀಠಗಳು ವಿಚಾರಣೆ ನಡೆಸಲಿವೆ,’ ಎಂದು ಮಾಹಿತಿ ನೀಡಿದರು.