Advertisement

ಸಮಾನ ಕಾನೂನು-ನ್ಯಾಯ ಕಲ್ಪಿಸಿದ ಸಂವಿಧಾನ

01:54 PM Nov 27, 2021 | Team Udayavani |

ಚಿತ್ರದುರ್ಗ: ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳ ಆಧಾರದ ಮೇಲೆ ಭಾರತದ ಸಂವಿಧಾನ ರಚನೆಯಾಗಿದೆ ಎಂದು ಗೌತಮಬುದ್ಧ ಪ್ರತಿಷ್ಠಾನದ ಅಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ ಹೇಳಿದರು.

Advertisement

ನಗರದ ಒನಕೆ ಓಬವ್ವ ವೃತ್ತದಲ್ಲಿ ಶುಕ್ರವಾರ ಗೌತಮ ಬುದ್ಧ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶಕ್ಕಾಗಿ ಬಾಬಾ ಸಾಹೇಬ್‌ ಅವರು ಸುಮಾರು 2 ವರ್ಷ 11 ತಿಂಗಳು 18 ದಿನಗಳ ಕಾಲ ನಿರಂತರವಾಗಿ ಶ್ರಮಿಸಿ ಸಮಸಮಾಜದ ಪರಿಕಲ್ಪನೆಯಿಂದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಡಿ ಸಂವಿಧಾನ ರಚಿಸಿ, 1949 ನ.26ರಂದು ಈ ದೇಶಕ್ಕೆ ಸಂವಿಧಾನ ಸಮರ್ಪಿಸಿದ ದಿನ ಎಂದರು.

ಸಂವಿಧಾನದ ವಿಶೇಷ ಲಕ್ಷಣ ಎಂದರೆ ನಮ್ಮ ರಾಷ್ಟ್ರಕ್ಕೆ ಭಾರತ ಎಂದರೆ “ಇಂಡಿಯಾ’ ಎಂಬ ಶಾಶ್ವತ ಹೆಸರನ್ನು ಕೊಟ್ಟಿರುವುದು. ಸಂವಿಧಾನದಲ್ಲಿ ಭಾರತಕ್ಕಿದ್ದ ಹಿಂದೂಸ್ಥಾನ, ಆರ್ಯಾವರ್ತ ಅಥವಾ ಜಂಬುದ್ವೀಪ ಹೆಸರಗಳನ್ನು ತಿರಸ್ಕರಿಸಲಾಗಿದೆ. ಭಾರತ ಎಂದರೆ ರಕ್ಷಕ ಅಥವಾ ಸತ್ಯದ ಪಾಲಕ ಎಂಬ ಅರ್ಥ ಸೂಚಿಸುತ್ತದೆ. ಇದು ಯಾವುದೇ ವ್ಯಕ್ತಿಯ ಹೆಸರನ್ನು ಸೂಚಿಸದೇ ರಾಷ್ಟ್ರೀಯತೆಯನ್ನು ಸೂಚಿಸುತ್ತದೆ ಎಂದು ಅಂಬೇಡ್ಕರ್‌ ಸಂಸತ್‌ಗೆ ಹೇಳಿದ್ದರು ಎಂದು ಸ್ಮರಿಸಿದರು.

ಬಾಬಾ ಸಾಹೇಬರು ಸಂವಿಧಾನ ಕರಡು ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಅಂಬೇಡ್ಕರ್‌ ವಿರೋ ಧಿಯಾಗಿದ್ದರೂ ಸರ್ದರ್‌ವಲ್ಲಬಾಯಿ ಪಟೇಲ್‌ರವರು ಕಾಂಗ್ರೆಸ್‌ನಲ್ಲಾಗಲಿ ಅಥವಾ ಇಡೀ ದೇಶದಲ್ಲದಾಗಲಿ ಸಂವಿಧಾನ ಕರಡು ರಚನೆಗೆ ಬಾಬಾ ಸಾಹೇಬ್‌ ರವರಿಗಿಂತ ಉತ್ತಮ ವ್ಯಕ್ತಿ ಕಾಣಸಿಗಲಿಲ್ಲ ಎಂದಿದ್ದರು. ಸಂವಿಧಾನವು ಚಾಲ್ತಿಯಾದ ಮೇಲೆ ಎಲ್ಲ ಶಾಸ್ತ್ರ, ವೇದಾ ಮತ್ತು ಪುರಾಣಗಳು ಹಿಂದೂ ಸಮಾಜದ ಮೇಲಿನ ಪ್ರಭಾವ ಕಳೆದುಕೊಂಡವು. ಇಸ್ಲಾಂ ಮತ್ತು ಕ್ರೈಸ್ತ್ ಕಾನೂನುಗಳು ತಮ್ಮ ಮೌಲ್ಯ ಕಳೆದುಕೊಂಡವು. ದೇಶದ ಆಡಳಿತವು ಸಂವಿಧಾನದ ಮೂಲ ಹಕ್ಕುಗಳಿಗನುಸಾರ ಜಾತಿ-ಮತ, ತತ್ವಗಳ ವ್ಯತ್ಯಾಸವಿಲ್ಲದೇ ಸರ್ವರಿಗೂ ಸಮಾನ ಕಾನೂನು ಮತ್ತು ನ್ಯಾಯದ ಭರವಸೆ ನೀಡಿತು. ಗೌತಮಬುದ್ಧ ಪ್ರತಿಷ್ಠಾನದ ಕಾರ್ಯದರ್ಶಿ ನ್ಯಾಯವಾದಿ ಬೆನಕನಹಳ್ಳಿ ಚಂದ್ರಪ್ಪ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.

ನ್ಯಾಯವಾದಿಗಳಾದ ಬೀಸನಹಳ್ಳಿ ಜಯಪ್ಪನವರು ನಾಗರಿಕ ಸಮಾಜದ ಉಳಿವಿಗಾಗಿ ಯಾವುದೇ ಬೆಲೆಯನ್ನಾದರೂ ತೆತ್ತು ಸಂವಿಧಾನವನ್ನು ರಕ್ಷಿಸಬೇಕಾಗುತ್ತದೆ ಎಂದರು.

Advertisement

ಜಿಪಂ ಮಾಜಿ ಸದಸ್ಯ ಬಿ.ಪಿ. ಪ್ರಕಾಶ್‌ಮೂರ್ತಿ, ಉಪಪ್ರಾಚಾರ್ಯ ಬಾಲೇನಹಳ್ಳಿ ರಾಮಣ್ಣ, ತಾಪಂ ಮಾಜಿ ಅಧ್ಯಕ್ಷ ತಿರುಂಪುರ ಪೆನ್ನಪ್ಪ, ವಕೀಲರಾದ ಬಿ.ಕೆ. ರಹಮತ್‌ವುಲ್ಲಾ ಮತ್ತಿತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next