ಹೈದರಾಬಾದ್: ಕರ್ತವ್ಯ ನಿರತ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಗನ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಘಟನೆ ಹುಸೇನಿ ಹಾಲಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
10ನೇ ಬೆಟಾಲಿಯನ್ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಮಹೆಬೂಬ್ ನಗರದ ನಾಗರ್ ಕರ್ನೂಲ್ ಜಿಲ್ಲೆ ಅಚಂ ಪೇಟ್ ಮಂಡಲದ ಲಕ್ಷ್ಮೀಪುರ ಗ್ರಾಮದ ಬಾಲೇಶ್ವರ್ (48) ಆತ್ಮಹತ್ಯೆಗೈದಿರುವ ಅಧಿಕಾರಿ.
ಬಾಳೇಶ್ವರ ಅವರು ತಮ್ಮ ಕರ್ತವ್ಯದ ಭಾಗವಾಗಿ ಶನಿವಾರ ಮಹಬೂಬ್‌ನಗರ 10ನೇ ಬೆಟಾಲಿಯನ್‌ನಿಂದ ಪಟಬಸ್ತಿಗೆ ಬಂದಿದ್ದರು. ಜಮುನಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಿಸರ್ವ್ ಎಸ್ ಐ ಬಾಳೇಶ್ವರ್ ಅವರು ಆರು ತಿಂಗಳ ಕಾಲ ಹಳೇ ಟೌನ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಎರಡೇ ದಿನಕ್ಕೆ ಗನ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾಹಿತಿ ಪಡೆದ ದಕ್ಷಿಣ ವಲಯ ಡಿಸಿಪಿ ಸಾಯಿ ಚೈತನ್ಯ ಮತ್ತು ಚಾರ್ಮಿನಾರ್ ಎಸಿಪಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಶವಾಗಾರಕ್ಕೆ ರವಾನಿಸಲಾಗಿದೆ. ಬಾಲೇಶ್ವರ್ ಅವರ ಆತ್ಮಹತ್ಯೆ ಹಿಂದಿನ ಕಾರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಸಂಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಿದೆ. ಅವರಿಗೆ ಪತ್ನಿ ಮತ್ತು ಮಕ್ಕಳಿದ್ದಾರೆ.
ಇದನ್ನೂ ಓದಿ: JP Nadda: ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಜೆ.ಪಿ ನಡ್ಡಾ