ಬೆಂಗಳೂರು: ರಾಜ್ಯ ಸರಕಾರವು ದೇವಸ್ಥಾನಗಳನ್ನು ಸ್ವತಂತ್ರ ಗೊಳಿಸುವುದಾಗಿ ಹೇಳು ತ್ತಿರುವುದರ ಹಿಂದೆ ಬೇರೆಯೇ ಉದ್ದೇಶವಿದೆ. ಒಂದು ವರ್ಗದ ದುಷ್ಟ ಕಣ್ಣು ದೇವಾಲಯದ ಆಸ್ತಿ ಮೇಲೆ ಬಿದ್ದಿದ್ದು, ದೇವರ ಹೆಸರಿನಲ್ಲಿ ದಂಧೆ ನಡೆಸುವ ಧಾರ್ಮಿಕ ಮಾಫಿಯಾವು ದೇವಾಲಯಗಳ ಆಸ್ತಿ ಕಬಳಿಸಲು ಸಂಚು ರೂಪಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ದೇವಸ್ಥಾನಗಳು ಈಗಲೂ ಸ್ವತಂತ್ರವಾಗಿಯೆ ಇವೆ. ಆದರೂ ಸರಕಾರ ಸ್ವಾಯತ್ತಗೊಳಿಸುವುದಾಗಿ ಹೇಳುತ್ತಿರುವುದರಲ್ಲಿ ಅರ್ಥವಿಲ್ಲ.
ದೇವಸ್ಥಾನಗಳನ್ನು ನಡೆಸುವುದೆಂದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅವುಗಳ ಮೇಲೆ ಹಕ್ಕುಗಳು ಇವೆ ಎಂದರ್ಥ. ಸರಕಾರ ದೇವಸ್ಥಾನಗಳ ಮೇಲಿನ ಹಿಡಿತವನ್ನು ತಪ್ಪಿಸು ವುದೆಂದರೆ ಜನ ಸಮುದಾಯಗಳಿಗೆ ಇರುವ ಅಧಿಕಾರವನ್ನು ತಪ್ಪಿಸುವುದೆಂದು ಅರ್ಥ ಎಂದರು.
ಇದನ್ನೂ ಓದಿ:ನವೆಂಬರ್‌ನಲ್ಲಿ 17.5 ಲಕ್ಷ ವಾಟ್ಸ್‌ಆ್ಯಪ್ ಖಾತೆ ಬ್ಯಾನ್
ದೇವಾಲಯಗಳ ಮೇಲೆ ಇರುವ ನಾಡಿನ ಐದೂವರೆ ಕೋಟಿ ಕನ್ನಡಿಗ ಹಿಂದೂಗಳ ಅಧಿಕಾರವನ್ನು ತಪ್ಪಿಸಿ ಕೇವಲ ಶೇ.2ರಷ್ಟು ಜನರ ಕೈಗೆ ಕೊಡಲು ಸರಕಾರ ಮುಂದಾಗಿದೆ. ಸರಕಾರದ ಈ ಧೋರಣೆಯನ್ನು ಬುದ್ಧಿ, ಪ್ರಜ್ಞೆ ಇರುವ ಎಲ್ಲರೂ ವಿರೋಧಿಸಬೇಕು ಎಂದು ಹೇಳಿದ್ದಾರೆ.