Advertisement
ಚೆನ್ನೈಯ “ಕ್ಯು’ ಬ್ರಾಂಚ್, ದಿಲ್ಲಿ ಪೊಲೀಸರು ಹಾಗೂ ಬೆಂಗಳೂರಿನ ಸಿಸಿಬಿ ಪೊಲೀಸರ ಜಂಟಿ ಕಾರ್ಯಾ ಚರಣೆಯಲ್ಲಿ ಬಂಧಿತರಾಗಿರುವ ಜೆಹಾದಿ ಗಳ ವಿಚಾರಣೆ ಹಾಗೂ ಪ್ರಾಥಮಿಕ ತನಿಖೆಯಲ್ಲಿ ಈ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
Related Articles
Advertisement
ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಪೈಕಿ ಗುರಪ್ಪನಪಾಳ್ಯದ ಮೆಹಬೂಬ್ ಪಾಷಾ, ಮೊಹಮದ್ ಮನ್ಸೂರ್, ನಾಯಂಡಹಳ್ಳಿಯ ಇಮ್ರಾನ್ ಖಾನ್, ಜಬೀವುಲ್ಲಾ, ಚನ್ನರಾಯ ಪಟ್ಟಣದ ಅನೀಸ್, ರಾಮನಗರದ ಅಜಾಜ್ ಪಾಷಾ, ಕೋಲಾರದ ಸಲೀಂ ಖಾನ್, ಶಿವಮೊಗ್ಗ ತೀರ್ಥಹಳ್ಳಿಯ ಅಬ್ದುಲ್ ಮತೀನ್ ಅಹ್ಮದ್, ಮುಸ್ಸಾವೀರ್ ಹುಸೇನ್ ಸೇರಿದ್ದಾರೆ. ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದೆ.
ಏಳೇ ದಿನಗಳಲ್ಲಿಉಗ್ರ ರಹಸ್ಯ ಭೇದಿಸಿದ ಸಿಸಿಬಿ!
ತಮಿಳುನಾಡಿನ ಹಿಂದೂ ಮುಖಂಡ ಸುರೇಶ್ ಅವರ ಕೊಲೆ ಪ್ರಕರಣದ ಆರೋಪಿಗಳು ಬೆಂಗಳೂರಿನಲ್ಲಿ ನೆಲೆಸಿರುವ ಸಾಧ್ಯತೆ ಬಗ್ಗೆ “ಕ್ಯು’ ಬ್ರಾಂಚ್ ಪೊಲೀಸರು ರಾಜ್ಯ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜತೆಗೆ ತಮಿಳುನಾಡಿ ನಲ್ಲಿ ಖರೀದಿಸಿದ್ದ ಸುಮಾರು 50 ಮೊಬೈಲ್ ಸಿಮ್ ಕಾರ್ಡ್‌ಗಳು ಬೆಂಗಳೂರಿನಲ್ಲಿ ಸಕ್ರಿಯಗೊಂಡಿರುವ ಬಗ್ಗೆ ಡಿಸೆಂಬರ್ ಮೂರನೇ ವಾರದಲ್ಲಿ ತಿಳಿಸಿದ್ದರು. ಇದರ ಬೆನ್ನತ್ತಿದ್ದ ಸಿಸಿಬಿಯ ತನಿಖಾ ತಂಡಕ್ಕೆ ಆರಂಭದಲ್ಲಿ ಎಚ್‌ಬಿಆರ್ ಲೇಔಟ್‌ನಲ್ಲಿ ಒಂದು ಸಿಮ್ ಕೆಲವೊಮ್ಮೆ ಮಾತ್ರ ಬಳಕೆಯಾಗಿ ಅನಂತರ ಬಂದ್ ಆಗುವುದು ಗಮನಕ್ಕೆ ಬಂತು. ಯಶವಂತಪುರದಲ್ಲೂ ಇದೇ ಮಾದರಿಯಲ್ಲಿ ಒಂದು ಸಿಮ್ ಕಾರ್ಯ ನಿರ್ವಹಣೆಯಾಗುತ್ತಿರುವುದು ಪತ್ತೆಯಾಯಿತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಅವಲೋಕಿಸಿದಾಗ ನಿರ್ದಿಷ್ಟ ಸಂಖ್ಯೆ ಯೊಂದಿಗಷ್ಟೇ ಸಂಭಾಷಣೆ ನಡೆಸಿ ಬಳಿಕ ಸ್ವಿಚ್ ಆಫ್ ಆಗುತ್ತಿರುವುದು ಗಮನಕ್ಕೆ ಬಂತು. ಈ ಬಗ್ಗೆ ಅನುಮಾನ ಮೂಡಿ ಒಬ್ಬನನ್ನು ವಶಕ್ಕೆ ಪಡೆದಾಗ ಇಡೀ ಜೆಹಾದಿ ತಂಡದ ದುಷ್ಕೃತ್ಯದ ಸಂಚು ಬಯಲಾಗಿತ್ತು. ಏಳು ದಿನಗಳ ಕಾರ್ಯಾ ಚರಣೆಯು ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದವರ ಪ್ರಯತ್ನ ವನ್ನು ವಿಫಲಗೊಳಿಸುವಲ್ಲಿ ಯಶಸ್ಸು ಕಂಡಿತು. ಇದುವರೆಗೂ
ಸಿಕ್ಕಿಬಿದ್ದವರು ಯಾರ್ಯಾರು?
ದಿಲ್ಲಿ ಪೊಲೀಸರ ಬಲೆಗೆ ಬಿದ್ದವರು- ಖ್ವಾಜಾ ಮೊಹಿದ್ದೀನ್ (52), ಅಬ್ದುಲ್ ಸಮದ್ ( 28), ಸೈಯದ್ ಅಲಿ ನವಾಜ್ (32).ಚೆನ್ನೆ „ಯ “ಕ್ಯು’ ಬ್ರಾಂಚ್‌ಗೆ ಸೆರೆ ಸಿಕ್ಕವರು- ಮೊಹಮದ್ ಹನೀಫ್ ಖಾನ್ (29), ಇಮ್ರಾನ್ ಖಾನ್ ( 32) ಉಸ್ಮಾನ್ ಗನಿ ಮೊಹಮ್ಮದ್ ಜೈದ್ ( 24). ಐಸಿಸ್‌ನಲ್ಲಿ ಸಕ್ರಿಯ?
ಜೆಹಾದಿಗಳ ಕುರಿತ ತನಿಖೆ ಚುರುಕುಗೊಳ್ಳುತ್ತಲೇ ಹಲವು ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ. ಖ್ವಾಜಾ ಮೊಹಿದ್ದೀನ್ ಐಸಿಸ್ ಸಂಘಟನೆಯಲ್ಲಿ ಸಕ್ರಿಯವಾಗಿದ್ದ. ಉಳಿದವರು “ಅಲ್ ಉಮ್ಮಾ’ ಹಾಗೂ “ಅಲ್ ಹಿಂದ್’ ಸಂಘಟನೆಗಳೊಂದಿಗೆ ಸಂಪರ್ಕವಿಟ್ಟುಕೊಂಡಿದ್ದರು. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮನ್ಸೂರ್ ಖಾನ್ ನಿಷೇಧಿತ “ಸಿಮಿ’ ಉಗ್ರ ಸಂಘಟನೆಯ ಸದಸ್ಯ ಸಾದಿಕ್ ಸಮೀರ್‌ನೊಂದಿಗೆ ಸಂಪರ್ಕ ಹೊಂದಿದ್ದ. ಈ ಎಲ್ಲ ಆರೋಪಿಗಳು ಒಟ್ಟಾಗಿ ದೊಡ್ಡ ಪ್ರಮಾಣದ ವಿಧ್ವಂಸಕ ಕೃತ್ಯ ಎಸಗಲು ಸಿದ್ಧತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ. ಗುಂಡ್ಲುಪೇಟೆಯಲ್ಲಿ ಇಬ್ಬರ ಬಂಧನ
ಚಾಮರಾಜನಗರ: ನಿಷೇಧಿತ ಉಗ್ರ ಸಂಘಟನೆ ಯೊಂದರ ಇಬ್ಬರು ಶಂಕಿತ ಉಗ್ರರನ್ನು ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಶನಿವಾರ ಬಂಧಿಸಲಾಗಿದೆ. ಖಚಿತ ಮಾಹಿತಿಯ ಆಧಾರದ ಮೇಲೆ ಆಂತರಿಕ ಭದ್ರತಾ ವಿಭಾಗ, ಭಯೋತ್ಪಾದಕ ನಿಗ್ರಹ ದಳ ಹಾಗೂ ಜಿಲ್ಲಾ ಪೊಲೀಸರ ನೇತೃತ್ವದಲ್ಲಿ ಶನಿವಾರ ರಾತ್ರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಬಂಧಿತ ಇಬ್ಬರಿಗೆ ಕೇರಳ ಮೂಲದ ಉಗ್ರ ರೊಂದಿಗೆ ಸಂಪರ್ಕವಿತ್ತು ಎನ್ನಲಾಗಿದೆ. ಕರ್ನಾಟಕ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಮತೀಯ ಗಲಭೆ ಹುಟ್ಟುಹಾಕಲು ಈ ಶಂಕಿತ ಉಗ್ರರ ಗುಂಪು ಸಂಚು ರೂಪಿಸಿತ್ತು ಎನ್ನಲಾಗಿದೆ. ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬೆಂಗಳೂರಿನಲ್ಲಿ 3 ಶಂಕಿತ ಉಗ್ರರನ್ನು ಇತ್ತೀ ಚೆಗೆ ಬಂಧಿಸಿದ್ದರು. ಇದೇ ತಂಡದ ಐವರನ್ನು ತಮಿಳು ನಾಡಿನಲ್ಲಿ ಬಂಧಿಸಲಾಗಿತ್ತು. ಈ ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಈ ಇಬ್ಬರ ಬಗ್ಗೆ ಮಾಹಿತಿ ನೀಡಿದ್ದರು ಎಂದು ತಿಳಿದುಬಂದಿದೆ. - ಮಂಜುನಾಥ ಲಘುಮೇನಹಳ್ಳಿ