Advertisement
ಕಡತ ವಿಲೇವಾರಿ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವರ್ಚುವಲ್ ಸಭೆಯಲ್ಲಿ ಸೂಚನೆಗಳನ್ನು ನೀಡಿದ ಅವರು, ಪ್ರಸ್ತುತ ನಡೆಯುತ್ತಿರುವ ಕಡತ ವಿಲೇವಾರಿ ಅಭಿಯಾನದಲ್ಲಿ ಎಲ್ಲ ಇಲಾಖೆಗಳು ಕೂಡ ಒಮ್ಮನಸ್ಸಿನಿಂದ ಪಾಲ್ಗೊಳ್ಳಬೇಕು, ವಿಲೆವಾರಿಯಾಗದೇ ಇರುವ ಹಳೆ ಕಡತಗಳು, ದೂರು ಅರ್ಜಿಗಳು, ಸೇವಾ ಅರ್ಜಿಗಳನ್ನು ನಿಗದಿತ ಸಮಯದೊಳಗೆ ವಿಲೆವಾರಿ ಮಾಡಲು ಅಧಿಕಾರಿಗಳು ಗುರಿ ನಿಗದಿ ಪಡಿಸಿಕೊಳ್ಳಬೇಕು, ಯಾವ ಕಡತಗಳ ವಿಲೇವಾರಿ ಸಾಧ್ಯವಾಗುವುದಿಲ್ಲವೋ ಅವುಗಳ ಬಗ್ಗೆ ಮತ್ತು ವಿಲೇವಾರಿ ಮಾಡಿದ ಕಡತಗಳ ವರದಿಯನ್ನು ಆಯಾ ಇಲಾಖೆಗಳು ಜಿಲ್ಲಾಡಳಿತಕ್ಕೆ ನೀಡಬೇಕು ಎಂದರು.
ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಕಡತ ವಿಲೇವಾರಿ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಬೇಕು, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಮಾತ್ರ ಇಲ್ಲಿಯ ವರೆಗೆ ಶೇ. 85ರಷ್ಟು ಕಡತಗಳನ್ನು ವಿಲೇವಾರಿ ಮಾಡಿವೆ, ಉಳಿದ ಇಲಾಖೆಗಳು ಇದೇ ಮಾದರಿಯಲ್ಲಿಯೇ ವಿಲೇವಾರಿ ಮಾಡಬೇಕು, ವಿಲೇವಾರಿಯಲ್ಲಿ ಹಿಂದುಳಿದ ಇಲಾಖೆಗಳ ಅಧಿಕಾರಿಗಳು ಫೆ. 26 ಮತ್ತು 27ರ ರಜಾ ದಿನಗಳಲ್ಲಿಯೂ ಕೆಲಸ ಮಾಡಿ ಕಡತಗಳ ವಿಲೇವಾರಿ ಮಾಡಬೇಕು ಎಂದು ನಿರ್ದೇಶನ ನೀಡಿದರು.
Related Articles
ಫೆ. 28ರಂದು ಎಲ್ಲ ಇಲಾಖೆಗಳು ಕೂಡ ಶೇ. 100ರಷ್ಟು ಪ್ರಗತಿ ಸಾಧಿಸಿರಬೇಕು. ಕಡತ ವಿಲೇವಾರಿ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
Advertisement