Advertisement

ಅಧಿವೇಶನದ ದಿಕ್ಕು ತಪ್ಪಿಸಿದ ಕಾಂಗ್ರೆಸ್ಸಿಗರು

04:00 PM Sep 25, 2022 | Team Udayavani |

ಬಾಗಲಕೋಟೆ: ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಸಮಸ್ಯೆಗಳ ಕುರಿತು ಚರ್ಚೆ ನಡೆಯಬೇಕಿತ್ತು. ಆದರೆ ಕಾಂಗ್ರೆಸ್ಸಿಗರು ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಇಡೀ ಅಧಿವೇಶನದ ಸಮಯವನ್ನೇ ಹಾಳು ಮಾಡಿದರು. ಕಾಂಗ್ರೆಸ್ಸಿಗರು ಆಲಿಬಾಬಾ ಚಾಲೀಸ್‌ ಪರ್‌ ಚಾರ್‌ ಚೋರ್‌ಗಳಿದ್ದಂತೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಆರೋಪಿಸಿದರು.

Advertisement

ನಗರಕ್ಕಾಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನವರು ಸ್ವಾರ್ಥ ರಾಜಕೀಯಕ್ಕಾಗಿ ಸದನವನ್ನೇ ಸಂಪೂರ್ಣ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಸದನ ನಡೆದರೆ ರಾಜ್ಯದ ಗಂಭೀರ ವಿಷಯ ಚರ್ಚೆ ನಡೆಯುತ್ತಿದ್ದವು. ಇದಕ್ಕೆ ಅವಕಾಶ ಕೊಡಲಿಲ್ಲ ಎಂದರು. ಮಾತೆತ್ತಿದ್ದರೆ ಸಿದ್ದರಾಮಯ್ಯ ದುರಹಂಕಾರದಿಂದ ಮಾತಾಡ್ತಾರೆ. ಬೆಳಗ್ಗೆ ಎದ್ದರೆ ಸಾಕು ಯಾರನ್ನು ಕೆಣಕಬೇಕು ಅಂತ ವಿಚಾರ ಮಾಡುತ್ತಿರುತ್ತಾರೆ. ನಾವು ಕೆಣಕೋಕೆ ಹೋಗಲ್ಲ. ಯಾಕಂದ್ರೆ ಎಲ್ಲ ವಿಚಾರಗಳನ್ನು ಅವರು ಮೈಮೇಲೆ ಎಳೆದುಕೊಳ್ಳುತ್ತಾರೆ. ಮಡಿಕೇರಿಗೆ ಹೋಗುವ ಪ್ರಯತ್ನ ಮಾಡಿದರು. ಅವರಿಗೆ ಅಲ್ಲಿಗೆ ಹೋಗಲು ಆಗಲಿಲ್ಲ ಎಂದು ಟೀಕಿಸಿದರು.

ಇಡೀ ದೇಶದಲ್ಲಿ ಕಾಂಗ್ರೆಸ್‌ ಭ್ರಷ್ಟಾಚಾರ ಮಾಡಿದೆ. ಕಾಂಗ್ರೆಸ್‌ ಪಕ್ಷ, ಭ್ರಷ್ಟಾಚಾರದ ಗಂಗೋತ್ರಿ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರು ಇಂದು ಭ್ರಷ್ಟಾಚಾರ ಬಗ್ಗೆ ನಾಚಿಕೆ ಇಲ್ಲದಂತೆ ಮಾತನಾಡುತ್ತಾರೆ. ಎರಡು ನರಿಗಳು ಕುರಿಗಳ ವೇಷ ಧರಿಸಿದ ಮಾತ್ರಕ್ಕೆ ಕುರಿಗಳಾಗಲು ನಾವು ಬಿಡಲ್ಲ. ನರಿಗಳು, ಕುರಿಗಳ ವೇಷ ಹಾಕಿ, ಕುರಿಗಳಾಗಲು ಸಾಧ್ಯವಿಲ್ಲ. ಈ ರೀತಿ ಡೋಂಗಿವಾದದ ರಾಜಕಾರಣಿಗಳು, ಹಿಂದುಳಿದ ನಾಯಕರು, ಸದನದಲ್ಲಿ ನಮ್ಮ ಮುಖ್ಯಮಂತ್ರಿಗಳಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಪೇ ಸಿಎಂ ಎಂದು ಯಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ರಾಹುಲ್‌ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಭ್ರಷ್ಟಾಚಾರದಲ್ಲಿ ಬೇಲ್‌ ಮೇಲಿದ್ದಾರೆ. ಅವರದೇ ಪಕ್ಷದ ಎಂಎಲ್‌ಸಿ ಗೋವಿಂದರಾಜು ಸೋನಿಯಾಗಾಂಧಿಗೆ ಎಷ್ಟು ಹಣ ಕೊಟ್ಟಿದ್ದರು ಎಂದು ತಮ್ಮ ಡೈರಿಯಲ್ಲೇ ಬರೆದಿದ್ದರು. ನಮ್ಮ ಸಿಎಂ ಪೇ ಸಿಎಂ ಅಲ್ಲ ಎಂದರು.

ಗುರು ಕಾಣಿಕೆಗಾಗಿ ಇಳಕಲ್‌ ಸೀರೆ: ನಾನು ಕಾಲೇಜು ವಿದ್ಯಾರ್ಥಿ ಇದ್ದಾಂಗಿನಿಂದಲೂ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮೇಲೆ ಕಣ್ಣಿಟ್ಟು ಇಳಕಲ್ಲ ಸೀರೆ ಹಂಚಿಲ್ಲ. ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಭಾವನಾತ್ಮಕ ಸಂಬಂಧ ಇರುವ, ನನಗೆ ಶಿಕ್ಷಣ ಕೊಡಿಸಿದ ಶಿಕ್ಷಕರಿಗೆ ಗುರು ಕಾಣಿಕೆ ನೀಡಲು ಹಂಚಿದ್ದೇನೆ. ಇದು ಚುನಾವಣೆ ಉದ್ದೇಶದಿಂದ ಮಾಡಿದ್ದಲ್ಲ ಎಂದು ಹೇಳಿದರು. ನಾನು ಏಳು ಬಾರಿ ಚುನಾವಣೆ ಎದುರಿಸಿದ್ದೇನೆ. ಆರು ಬಾರಿ ಗೆದ್ದಿದ್ದೇನೆ. ಒಂದು ಸಲ ಸಂಸದ ಕೂಡಾ ಆಗಿದ್ದೆ. ಶಿಕ್ಷಕರ ಮೇಲೆ ನನಗೆ ಅತೀವ ಗೌರವ, ಪ್ರೀತಿ. ಇದಕ್ಕೆ ಅವರ ಮೇಲಿರುವ ವಿಶ್ವಾಸವೇ ಕಾರಣ ಹೊರತು, ರಾಜಕಾರಣಕ್ಕೆ ಅಲ್ಲ. ಮತ್ತೆ ನಾನು ಬಾದಾಮಿ ಕ್ಷೇತ್ರಕ್ಕೆ ಬಂದರೂ ಬರಬಹುದು ಎಂದರು.

ಪಕ್ಷದ ಹೈಕಮಾಂಡ್‌ ಅವಕಾಶ ಕೊಟ್ಟರೆ, ಬಾದಾಮಿಯಿಂದ ಸ್ಪರ್ಧಿಸುತ್ತೇನೆ. ಪಕ್ಷದ ತೀರ್ಮಾನವೇ ಅಂತಿಮ ಎಂದರು.

Advertisement

ನಮ್ಮ ಮುಖ್ಯಮಂತ್ರಿ ಬಗ್ಗೆ ಡಿಕೆಶಿ, ಸಿದ್ದರಾಮಯ್ಯ ಒಬ್ರು ಗಮ್‌ ಹಚಿ¤ದ್ರೆ, ಇನ್ನೊಬ್ಬರು ಪೋಸ್ಟರ್‌ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ ಪಕ್ಷ ಒಂದು ಎಟಿಎಂ ಇದ್ದಂತೆ. ಪ್ರತಿದಿನ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ. ತಮ್ಮ ಕನ್ನಡಕವನ್ನು ಮೊದಲು ಒರೆಸಿ ನೋಡಲಿ. ಯಾರನ್ನ ಪಕ್ಕಕ್ಕಿಟ್ಟುಕೊಂಡು ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ ಆತ್ಮಾವಲೋಕನ ಮಾಡಿಕೊಳ್ಳಲಿ. ನಮ್ಮ ದುರಂತ ಅಂದ್ರೆ ಇದೇ ಡಿ.ಕೆ. ಶಿವಕುಮಾರ, ಭ್ರಷ್ಟಾಚಾರದಲ್ಲಿ ಬೇಲ್‌ ಮೇಲೆ ಹೊರಗಿರುವ ವ್ಯಕ್ತಿ. ಅಂತವರು ಈಗ ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ. ಅರ್ಕಾವತಿ ಹಗರಣ ಬಗ್ಗೆ ಸಿದ್ದರಾಮಯ್ಯ ಬಹಿರಂಗ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.

ಸ್ವಯಂ ಘೋಷಿತ ಅಹಿಂದ ನಾಯಕ ಎಂದುಕೊಳ್ಳುವ ಸಿದ್ದರಾಮಯ್ಯ, ತಮ್ಮ ಸರ್ಕಾರದಲ್ಲಿ ಹಿಂದುಳಿದವರಿಗೆ ಕೊಡುವ ಅನುದಾನದಲ್ಲಿ ಮೋಸ ಮಾಡಿದರು. ಬಿಬಿಎಂಪಿ ಕಸ ವಿಲೇವಾರಿ ಮಾಡುವ ವಿಚಾರದಲ್ಲಿ ಸಾಕಷ್ಟು ಹಗರಣ ಮಾಡಿದ್ದಾರೆ. ಬಡವರಿಗೆ ಸಿಗಬೇಕಾದ ಮರಳು ಸಿಗುತ್ತಿಲ್ಲ. ಮರಳನ್ನೇ ಲೂಟಿ ಮಾಡಿ ದೊಡ್ಡ ಶ್ರೀಮಂತರಾಗುವ ಕೆಲಸ ಮಾಡಿದರು. ಕಾಮಗಾರಿಗಳನ್ನು ಮಾಡದೇ ಬಿಲ್‌ ಕೊಟ್ಟು ಲೂಟಿ ಮಾಡಿದರು. ಬಡವರಿಗೆ 6-7 ಕೆಜಿ ಅಕ್ಕಿ ಕೊಟ್ಟಿದ್ದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದ್ರೆ ಕೇಂದ್ರ-ರಾಜ್ಯ ಸರ್ಕಾರ ಸೇರಿ ಈಗ 10 ಕೇಜಿ ಕೊಡುತ್ತಿದ್ದೇವೆ. ಸಿದ್ದರಾಮಯ್ಯ ಬಂದರೆ 10 ಕೇಜಿ ಕೊಡ್ತೀನಿ ಅಂತಿದ್ದಾರೆ. ಆದರೆ ನಾವೀಗ 10 ಕೆಜಿ ಕೊಡುತ್ತಿದ್ದೇವೆ. ಅಕ್ಕಿ ಕೊಡುವ ವಿಚಾರದಲ್ಲಿ ಕಳ್ಳಸಂತೆಯಲ್ಲಿ ಮಾರಾಟ ಮಾಡಿದ್ದರು. ಅಹಿಂದ, ಪಜಾ, ಪಪಂ ವಿದ್ಯಾರ್ಥಿಗಳ ತಲೆದಿಂಬು, ಹಾಸಿಗೆ ಕೊಡುವ ವಿಚಾರದಲ್ಲಿ ಹಗರಣ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷದ ನರನಾಡಿಗಳಲ್ಲಿ ಭ್ರಷ್ಟಾಚಾರ ಅಡಗಿದೆ ಎಂದು ಆರೋಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next