Advertisement
ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಈಚೆಗೆ ದರ್ಶನ್ ಮತ್ತು ಇತರರು ಸೇರಿ ನಡೆಸಿದ್ದಾರೆ ಎನ್ನಲಾದ ಕೊಲೆ ಪ್ರಕರಣ, ನೇಹಾ ಹತ್ಯೆ, ಅಂಜಲಿ ಕೊಲೆ ಪ್ರಕರಣ ಸಹಿತ ಯಾವುದೇ ಸೂಕ್ಷ್ಮ ಅಥವಾ ಗಂಭೀರ ಘಟನೆಗಳು ನಡೆದಾಗ, ಅದಕ್ಕೆ ವಿಪಕ್ಷಗಳು ರಾಜಕೀಯ ಬಣ್ಣ ನೀಡುತ್ತವೆ. ಆ ಮೂಲಕ ಸರಕಾರದ ಬಗ್ಗೆ ನಕಾರಾತ್ಮಕ ಭಾವನೆ ಮೂಡುವಂತೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ನಡೆದಾಗ, ಪಕ್ಷದ ಚೌಕಟ್ಟಿನಲ್ಲಿ ಸಮಾಲೋಚಿಸಿ ಸೂಕ್ತ ನಿಲುವು ಪ್ರಕಟಿಸಲು ಸಲಹಾ ಸಮಿತಿ ರಚಿಸಬೇಕೆಂಬ ಒಕ್ಕೊರಲ ಅಭಿಪ್ರಾಯ ಕೇಳಿಬಂತು.
ಇನ್ನು ರಾಜ್ಯದ 87 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದ್ದರೂ, ಅವರೆಲ್ಲರನ್ನೂ ನಾವು “ಪರ್ಯಾಯ ಶಾಸಕರು’ ಅಂತ ಪರಿಗಣಿಸಿ ಪಕ್ಷ ಸಂಘ ಟನೆಗೆ ಒತ್ತು ನೀಡಬೇಕು. ನಿಗಮ-ಮಂಡಳಿಗಳ ಅಧ್ಯಕ್ಷ ರು ಅಧಿಕಾರಾವಧಿಯಲ್ಲಿ ಯಾವುದೇ ಅನಗತ್ಯ ಗೊಂದಲ ಸೃಷ್ಟಿಸಿಕೊಳ್ಳಬಾರದು. ಪಾರದರ್ಶಕ ಆಡಳಿತ ನೀಡುವುದರ ಜತೆಗೆ ಸಾಧ್ಯವಾದಷ್ಟು ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರಿಗೆ ಅನುಕೂಲ ಮಾಡಿ ಕೊಡ ಬೇಕು ಎಂದೂ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
Related Articles
Advertisement
ಪಕ್ಷದ ಮೂಲ ಸಿದ್ಧಾಂತವನ್ನು ಯಾವ ಕಾರಣಕ್ಕೂ ಕೈ ಬಿಡಬಾರದು. ಕಾರ್ಯಕರ್ತರ ಪಕ್ಷವಾಗಿ ಮಾಡಲು ಹಾಗೂ ತಳಮಟ್ಟದಿಂದ ಪಕ್ಷ ಬಲಪಡಿಸುವ ಬಗ್ಗೆ ನಮ್ಮ ನಾಯಕರು ಸಲಹೆ ನೀಡಿ¨ªಾರೆ. ಪಕ್ಷ ಸಂಘಟನೆ ಬಗ್ಗೆಯೂ ಮಾರ್ಗದರ್ಶನಗಳನ್ನು ನೀಡಿದ್ದಾರೆ.-ಡಿ.ಕೆ. ಶಿವಕುಮಾರ್, ಅಧ್ಯಕ್ಷ, ಕೆಪಿಸಿಸಿ