ನವದೆಹಲಿ:ಒಂದು ವೇಳೆ 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ತನ್ನ ತಲೆಕೂದಲು ಬೋಳಿಸಿಕೊಳ್ಳುವುದಾಗಿ ಬಿಜೆಪಿ ಕಾರ್ಯಕರ್ತನೊಬ್ಬಲ್ಲಿ ಬೆಟ್ಟಿಂಗ್ ಕಟ್ಟಿಕೊಂಡಿದ್ದರ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತ ತಲೆಬೋಳಿಸಿಕೊಂಡು ಮುಖಭಂಗಕ್ಕೀಡಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಏನಿದು ಘಟನೆ:
ಬಾಬು ಲಾಲ್ ಸೇನ್ ಎಂಬ ಕಾಂಗ್ರೆಸ್ ಕಟ್ಟಾ ಕಾಂಗ್ರೆಸ್ ಕಾರ್ಯಕರ್ತ ಬಿಜೆಪಿ ಕಾರ್ಯಕರ್ತನ ಜೊತೆ ಪಂಥ ಹಾಕಿದ್ದ. “ಒಂದು ವೇಳೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ನಾನು ನನ್ನ ತಲೆ ಕೂದಲನ್ನು ಬೋಳಿಸಿಕೊಳ್ಳುವೆ. ಒಂದು ವೇಳೆ ರಾಹುಲ್ ಗಾಂಧಿ ಪ್ರಧಾನಿಯಾದರೆ ನಾನು(ಬಿಜೆಪಿ ಕಾರ್ಯಕರ್ತ) ತಲೆಕೂದಲನ್ನು ಬೋಳಿಸಿಕೊಳ್ಳುವೆ ಎಂದು ಬೆಟ್ ಕಟ್ಟಿಕೊಂಡಿದ್ದರು!
ಇದೀಗ ಲೋಕಸಭೆ ಚುನಾವಣೆಯಲ್ಲಿ ನನ್ನ(ಕಾಂಗ್ರೆಸ್) ಪಕ್ಷ ಸೋತು ಹೋಗಿದೆ. ಹೀಗಾಗಿ ನನ್ನ ತಲೆ ಬೋಳಿಸಿಕೊಂಡಿದ್ದೇನೆ ಎಂದು ರಾಜ್ ಗಢ್ ಜಿಲ್ಲೆಯ ಬಾಬು ಲಾಲ್ ಸೇನ್ ಎಎನ್ ಐ ನ್ಯೂಸ್ ಏಜೆನ್ಸಿ ಜೊತೆ ಮಾತನಾಡುತ್ತ ತಿಳಿಸಿದ್ದಾನೆ. ರಾಜ್ ಗಢ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರೋಡ್ ಮಾಲ್ ನಗರ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಯಭೇರಿ ಬಾರಿಸಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 302 ಸ್ಥಾನಗಳನ್ನು ಪಡೆಯುವ ಮೂಲಕ ಪ್ರಚಂಡ ಬಹುಮತ ಗಳಿಸುವ ಮೂಲಕ ಮತ್ತೆ ಪ್ರಧಾನಿ ಗದ್ದುಗೆ ಏರಿದ್ದಾರೆ.