Advertisement

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

07:23 PM Mar 28, 2024 | Vishnudas Patil |

ವಿಜಯಪುರ : ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೂ ಸರಿ, ಅಲ್ಲಿ ಕಾಂಗ್ರೆಸ್ ಪಕ್ಷ ಮುಂದಿದೆ. ಎದುರಾಳಿಗಳಿಗೆ ಯಾರು ಅಭ್ಯರ್ಥಿಯಾಗಬೇಕೆಂದು ಮೊನ್ನೆವರೆಗೂ ಸ್ಪಷ್ಟತೆ ಇರಲಿಲ್ಲ.ಈಗ ಕುಮಾರಸ್ವಾಮಿ ಬಂದಿದ್ದಾರೆ. ಅದಕ್ಕಿಂತ ಮುಂಚೆ ಬೇರೆ ಬೇರೆ ಹೆಸರುಗಳು ಕೇಳಿ ಬಂದಿದ್ದವು ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಲೇವಡಿ ಮಾಡಿದ್ದಾರೆ.

Advertisement

ಗುರುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಾಲಿ ಸಂಸದೆ ಸುಮಲತಾ ಪರಿಸ್ಥಿತಿ ಏನು ಎಂಬುದು ಗೊತ್ತಾಗುತ್ತಿಲ್ಲ. ಸುಮಲತಾ ಅವರು ಕಾಂಗ್ರೆಸ್ ಸೇರ್ಪಡೆ ವಿಷಯ ನನಗೆ ಗೊತ್ತಿಲ್ಲ. ಮಂಡ್ಯದಲ್ಲಿ ನಿನ್ನೆ ಸಾವಿರಾರು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ ಎಂದರು.

2019 ರಲ್ಲಿ ಪುಲ್ವಾಮಾ ಬಾಲಕೋಟ್ ವಿಚಾರಗಳನ್ನು ಮುಂದಿಟ್ಟುಕೊಂಡು ನಡೆಸಿದ ಪ್ರಚಾರ ಆಡಳಿತಾರೂಢ ಬಿಜೆಪಿಗೆ ವರವಾದವು. ಅಂದಿನ ಪರಿಸ್ಥಿತಿ ಈಗ ಇಲ್ಲ. ಕಾಂಗ್ರೆಸ್ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತದೆ, ಬಿಜೆಪಿಯವರು ಭಾವನಾತ್ಮಕವಾಗಿ ಮಾತನಾಡುತ್ತಾರೆ ಎಂದು

ಎಲೆಕ್ಷನ್ ಬಾಂಡ್ ಲಿಸ್ಟ್ ನೋಡಿ ಮತ ಹಾಕಿ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರ ವಿರುದ್ಧ ಕಿಡಿ ಕಾರಿದ ಸಚಿವ ಎಂ.ಬಿ.ಪಾಟೀಲ, ನ ಖಾವುಂಗಾ ನ ಖಾನೆದೂಂಗಾ ಎಂದು ಹೇಳುವವರು ಅಬಕಾರಿ ನೀತಿ ವಿಷಯವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ ಎಂದು ಕಿಡಿ ಕಾರಿದರು.

ಆದರೆ ಅದೇ ಅಬಕಾರಿಯ ಗುತ್ತಿಗೆದಾರನಿಂದಲೂ ಬಿಜೆಪಿ ದೇಣಿಗೆ ಹಣ ಪಡೆದಿದೆ. ದಾಳಿ ನಡೆದ ಬಳಿಕವೂ ಹಣ ಪಡೆದಿದ್ದಾರೆ. ಈ ಕುರಿತು ತನಿಖೆಯಾದರೆ ದೊಡ್ಡ ಪ್ರಮಾಣದ ಸತ್ಯ ಹೊರಬರುತ್ತದೆ ಎಂದರು.

Advertisement

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ಯತೀಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ರೌಡಿ, ಇಂಥವರನ್ನು ಮೋದಿ ಪಕ್ಕಕ್ಕೆ ಕುಳ್ಳಿಸಿಕೊಳ್ಳುತ್ತಾರೆ ಎಂದು ನೀಡಿರುವ ಹೇಳಿಕೆ ಕುರಿತು ಕೇಳಿದಾಗ ಇದನ್ನು ನಾನು ಗಮನಿಸಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next