Advertisement

ಏನೇ ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಯಡಿಯೂರಪ್ಪ

11:24 AM Sep 18, 2022 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್ ಏನೇ ತಿಪ್ಪರಲಾಗ ಹಾಕಿದರೂ ಅದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲ್ಲ. ಜನ ಬಿಜೆಪಿ, ಮೋದಿ ಪರ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

Advertisement

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಭಾರತ ಜೊಡೋ, ರಥಯಾತ್ರೆ ಸೇರಿದಂತೆ ಯಾವುದೇ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರಲ್ಲ ಎಂದರು.

ಚುನಾವಣೆ ಪ್ರಚಾರ ನಿಮಿತ್ತ ನಾನು ಸೆ. 22ರಿಂದ ರಾಜ್ಯ ಪ್ರವಾಸ ಮಾಡುತ್ತೇನೆ. ಬಳ್ಳಾರಿ ವಿಮ್ಸ್ ನಲ್ಲಿ ನಡೆದ ಸಾವು ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ನೋಡೋಣ. ಈ ಪ್ರಕರಣವು ಸರಕಾರಕ್ಕೆ ನಷ್ಟ ಆಗಲ್ಲವೇ ಎಂಬ ಪ್ರಶ್ನೆಗೆ ಮೌನವಹಿಸಿದರು.

ಇದನ್ನೂ ಓದಿ:ಹಾಸ್ಟೆಲ್ ಮೇಟ್ ಗಳ ಖಾಸಗಿ ವಿಡಿಯೋ ಲೀಕ್ ಮಾಡಿದ ವಿದ್ಯಾರ್ಥಿನಿ: ಭಾರೀ ಪ್ರತಿಭಟನೆ; ಬಂಧನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next