ಶಿವ ಸಾಗರ್ : ನಮ್ಮ ಪಕ್ಷ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆದಿತ್ಯವಾರ (ಫೆ. 14) ಅಸ್ಸಾಂ ನ ಚುನಾವಣಾ ಮತ ಪ್ರಚಾರದಲ್ಲಿ ಹೇಳಿದ್ದಾರೆ.
ಕೊರೋನಾ ಲಸಿಕೆ ಅಭಿಯಾನದ ನಂತರ “ನಾವು ಪೌರತ್ವ ನೀಡುವ ಸಿಎಎ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಿದ್ದೇವೆ ಎಂದು ಕೇಂದ್ರೀಯ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರು.
ಓದಿ : ಆನ್‌ಲೈನ್ ಕಲಿಕೆಯಿಂದ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು ವಿದ್ಯಾರ್ಥಿಗಳ ಹಿಂದೇಟು
ಅಸ್ಸಾಂ ನ ವಿಧಾನ ಸಭಾ ಚುನಾವಣಾ ಮತ ಪ್ರಚಾರದಲ್ಲಿ ಮಾತನಾಡುತ್ತಾ, ಭಾರತೀಯ ಜನತಾ ಪಾರ್ಟಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಸ್ಸಾಂ ನನ್ನು ವಿಭಜಿಸುತ್ತಿವೆ ಎಂದು ರಾಹುಲ್ ಆರೋಪಿಸಿದರು.
ಒಂದು ವೇಳೆ ಅಸ್ಸಾಂ ವಿಭಜನೆಯಾದರೇ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಏನೂ ಪರಿಣಾಮ ಬೀರುವುದಿಲ್ಲ. ಆದರೇ, ಅಸ್ಸಾಂ ನ ಜನರು ಹಾಗೂ ಉಳಿದ ಭಾರತೀಯರು ತೊಂದರೆ ಅನುಭವಿಸಬೇಕಾಗಿ ಬರುತ್ತದೆ ಎಂದು ಅವರು ಕಿಡಿ ಕಾರಿದ್ದಾರೆ.
ಅಸ್ಸಾಂ ನ ಮುಖ್ಯಮಂತ್ರಿ ಸರಬನಂದಾ ಸೋನೋವಾಲ ಅವರನ್ನೂ ಕೂಡ ಈ ಸಂದರ್ಭ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು. “ಅಸ್ಸಾಂ , ಜನರ ಸಮಸ್ಯೆಗೆ ಪ್ರತಿ ಸ್ಪಂದಿಸುವ ಮುಖ್ಯಮಂತ್ರಿಯನ್ನು ಬಯಸುತ್ತದೆ. ದೆಹಲಿ ಮತ್ತು ನಾಗ್ಪುರದ ಧ್ವನಿ ಮಾತ್ರ ಆಲಿಸುವ ಮುಖ್ಯಮಂತ್ರಿ ಅಸ್ಸಾಂ ಗೆ ಬೇಕಾಗಿಲ್ಲ. ಟಿವಿ ಕಾರ್ಯ ನಿರ್ವಹಿಸುವುದಕ್ಕೆ ಮಾತ್ರ ರಿಮೋಟ್ ಬೇಕು, ಮುಖ್ಯಮಂತ್ರಿಗೆ ಅಲ್ಲ. ಯುವಕರಿಗೆ ಉದ್ಯೋಗವಕಾಶವನ್ನು ಒದಗಿಸಿಕೊಡುವಂತಹ ಮುಖ್ಯಮಂತ್ರಿ ಅಸ್ಸಾಂ ಗೆ ಬೇಕಾಗಿದೆ” ಎಂದು ರಾಹುಲ್ ಗುಡುಗಿದರು.
ಇನ್ನು, “ಅಸ್ಸಾಂ ನ ಒಪ್ಪಂದವು ಶಾಂತಿಯನ್ನು ತಂದಿದೆ. ಅದು ರಾಜ್ಯಕ್ಕೆ ರಕ್ಷಣೆಯಾಗಿದೆ. ನಾನು ಮತ್ತು ನನ್ನ ಪಕ್ಷದ ಕಾರ್ಯಕರ್ತರು ಆ ಒಪ್ಪಂದದ ತತ್ವವನ್ನು ರಕ್ಷಿಸುತ್ತೇವೆ. ಅದರಲ್ಲಿ ಒಂದು ವಿಚಲನೆಯಾಗದಂತೆ ನಾವು ನೋಡಿಕೊಳ್ಳುತ್ತೆವೆ” ಎಂದರು.
ಅಕ್ರಮ ವಲಸೆ ಅಸ್ಸಾಂ ನಲ್ಲಿ ಒಂದು ಸಮಸ್ಯೆಯಾಗಿ ಕಾಡುತ್ತಿದೆ. ಆದರೇ, ಅದನ್ನು ಜನರು ಸಮಾಲೋಚನೆಯ ಮುಖಾಂತರ ಬಗೆ ಹರಿಸಿಕೊಳ್ಳಲು ಸಮರ್ಥರಿದ್ದಾರೆ ಎಂದು ಹೇಳಿದರು.
ಓದಿ : ‘ ಬಂಜಾರ ವಸ್ತ್ರ ಸಂಸ್ಕೃತಿ’ ಉಡುಪು ಬಿಡುಗಡೆಗೊಳಿಸಿದ ಬಿ.ಎಸ್. ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ನೇತೃತ್ವದ ಸರ್ಕಾರ ಅಸ್ಸಾಂ ನಲ್ಲಿ ಅಧಿಕಾರದಲ್ಲಿರುವಾಗ ಹಿಂಸಾಚಾರವನ್ನು ಕೊನೆಗೊಳಿಸುವುದರ ಮೂಲಕ ಶಾಂತಿಯನ್ನು ಒದಗಿಸಿಕೊಟ್ಟಿತ್ತು.
“ಡಿಸೆಂಬರ್ 14 2014 ರ ತನಕ ಅಸ್ಸಾಂ ಗೆ ಹಲವು ಮಂದಿ ಹಿಂದೂ, ಸಿಖ್, ಬುದ್ದಿಷ್ಟ್, ಜೈನ್, ಪಾರ್ಸಿ, ಕ್ರಿಶ್ಚಿಯನ್ ಸಮುದಾಯದ ಜನರು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನಿಂದ ಧಾರ್ಮಿಕ ಕಿರುಕುಳವನ್ನು ಅನುಭವಿಸಿ ಬಂದಿದ್ದಾರೆ. ನಾವು ಅವರನ್ನು ವಲಸೆ ಬಂದವರೆಂದು ಪರಿಗಣಿಸುವುದಿಲ್ಲ. ಅವರೆಲ್ಲರಿಗೂ ಭಾರತದ ಪೌರತ್ವವನ್ನು ನೀಡಲಾಗುವುದು ಎಂದು ಗಾಂಧಿ ಈ ಸಂದರ್ಭ ಹೇಳಿದ್ದಾರೆ.
ಓದಿ : ‘ಪಠಾಣ್’ ಚಿತ್ರದಲ್ಲಿ ಭಾಯ್ ಜಾನ್…. ಶಾರುಖ್ ಗೆ ಸಾಥ್ ನೀಡಿದ ಸಲ್ಮಾನ್