Advertisement

ಬಿಜೆಪಿ ಜಾರಿಗೆ ತಂದಿರುವ ಬೃಹತ್ ಯೋಜನೆಗಳನ್ನು ಕಾಂಗ್ರೆಸ್ ರದ್ಧುಗೊಳಿಸಲಿದೆ: ಪಿ.ಚಿದಂಬರಂ

12:41 PM Nov 16, 2021 | Team Udayavani |

ಪಣಜಿ: ಬರುವ ಗೋವಾ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಪರಿಸರ ನಾಶ ಮತ್ತು ಪಾರಂಪರಿಕ ಮತ್ತು ಸಂಸ್ಕೃತಿಯನ್ನು ನಷ್ಠಗೊಳಿಸುವ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಮೂರು ಬೃಹತ್ ಯೋಜನೆಗಳನ್ನು ಕಾಂಗ್ರೇಸ್ ರದ್ಧುಗೊಳಿಸಲಿದೆ ಎಂದು ಗೋವಾ ಕಾಂಗ್ರೆಸ್ ಚುನಾವಣಾ ನಿರೀಕ್ಷಕ ಪಿ.ಚಿದಂಬರಂ ಭರವಸೆ ನೀಡಿದರು.

Advertisement

ಗೋವಾದ ಬಿಚೋಲಿಯಲ್ಲಿ ಆಯೋಜಿಸಿದ್ದ ಕಾಂಗ್ರೇಸ್ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಪಿ.ಚಿದಂಬರಂ, ಕಾಂಗ್ರೆಸ್ ಪಕ್ಷವು ಕೇವಲ ಚುನಾವಣೆ ಸ್ಫರ್ಧಿಸಲು ಮಾತ್ರವಲ್ಲ, ಚುನಾವಣೆಯಲ್ಲಿ ಜಯಗಳಿಸಲು ಮತ್ತು ರಾಜ್ಯದಲ್ಲಿ ಸರ್ಕಾರ ಸ್ಥಾಪಿಸಲು ಚುನಾವಣೆಯಲ್ಲಿ ಕಣಕ್ಕಿಳಿಯಲಿದೆ. ಇಂದು ಗೋವಾ ಸರ್ಕಾರವನ್ನು ನೋಡಿದರೆ ಈ ಸರ್ಕಾರವು ಅತ್ಯಂತ ಭ್ರಷ್ಠ ಸರ್ಕಾರ ಮತ್ತು ಬೇಜವಾಬ್ದಾರಿ ಸರ್ಕಾರ ಎಂಬುದು ಸ್ಪಷ್ಟವಾಗಿದೆ. ರಾಜ್ಯದಲ್ಲಿ ಮಹಿಳೆಯರು ಅಸುರಕ್ಷಿತರಾಗಿದ್ದಾರೆ, ಖಾಯ್ದೆ ಮತ್ತು ಸುವ್ಯಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬರುವ ಗೋವಾ ವಿಧಾನಸಭಾ ಚುನಾವಣೆಯ ನಂತರ ಗೋವಾ ರಾಜ್ಯದಲ್ಲಿ ನಿಶ್ಚಿತವಾಗಿ ಕಾಂಗ್ರೇಸ್ ಪಕ್ಷದ ಅಧಿಕಾರಕ್ಕೆ ಬರದಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ:ಬ್ಯಾಂಕ್‌ನ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಿದ್ದ  ಮಹಾನ್‌ ಚೇತನ: ಡಿ. ಡಿ. ಕರ್ಕೇರ

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೋವಾ ಕಾಂಗ್ರೇಸ್ ಪ್ರಭಾರಿ ದಿನೇಶ್ ಗುಂಡೂರಾವ್ ಮಾತನಾಡಿ-ಗೋವಾ ಬಿಜೆಪಿ ಸರ್ಕಾರವು ಅತ್ಯಂತ ಭ‍್ರಷ್ಠ ಸರ್ಕಾರ ಎಂಬುದು ಸ್ಪಷ್ಟವಾಗಿದೆ. ರಾಜ್ಯದ ಪರಿಸ್ಥಿತಿ ಇಂದು ಬಿಕ್ಕಟ್ಟಿಗೆ ಸಿಲುಕಿದೆ ಎಂದರು.

Advertisement

ಈ ಸಂದರ್ಭದಲ್ಲಿ ಗೋವಾ ಪ್ರದೇಶಾಧ್ಯಕ್ಷ ಗಿರೀಶ್ ಚೋಡಣಕರ್, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಬೀನಾ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next